ಮುಕ್ರಂಪಾಡಿ ಬಾಲಕಿಯರ ಪ.ಪೂ.ಕಾಲೇಜ್‌ನಲ್ಲಿ ವಾರ್ಷಿಕ ಕ್ರೀಡಾಕೂಟ

0

ಪುತ್ತೂರು: ಮುಕ್ರಂಪಾಡಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನ.29 ರಂದು ವಾರ್ಷಿಕ ಕ್ರೀಡೋತ್ಸವವನ್ನು ಕಾಲೇಜು ಅಭಿವೃದ್ವಿ ಸಮಿತಿಯ ಸದಸ್ಯ ಚಂದ್ರಕಾಂತ್ ಇವರು ಧ್ವಜಾರೋಹರಣ ಮಾಡುವ ಮೂಲಕ ಚಾಲನೆ ನೀಡಿದರು.

ಸಂಸ್ಥೆಗೆ ಸ್ವಂತ ಕ್ರೀಡಾಂಗಣದ ಕೊರತೆಯಿದ್ದರೂ ಪಕ್ಕದ ವ್ಯಕ್ತಿಯೋರ್ವರ ಖಾಸಗಿ ಜಾಗದಲ್ಲಿ ವಿವಿಧ ಕ್ರೀಡೆಗಳನ್ನು ಜರಗಿಸಲಾಯಿತು. ಕ್ರೀಡೆಗಳು ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಅಗತ್ಯವಾಗಿದೆ. ಸೋಲು-ಗೆಲುವನ್ನು ಸ್ವರ್ಧಾತ್ಮಕವಾಗಿ ಪರಿಗಣಿಸುವಂತೆ ಚಂದ್ರಕಾಂತ್‌ರವರು ಹೇಳಿದರು.

ಪ್ರಾಂಶುಪಾಲೆ ಪ್ರಮೀಳಾ ಜೆಸ್ಸಿ ಕ್ರಾಸ್ತಾ ಸಭಾಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹರಿಣಾಕ್ಷ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಸಂಸ್ಥೆಗೆ ವಿಕ್ಟರಿ ಸ್ಟಾಂಡ್‌ನ್ನು ಖರೀದಿಸಲು ದೇಣಿಗೆ ನೀಡಿದರು. ಇತಿಹಾಸ ಉಪನ್ಯಾಸಕ ದಾಮೋದರ್ ಕಾರ‍್ಯಕ್ರಮ ನಿರೂಪಿಸಿ, ರಾಜ್ಯಶಾಸ್ತ್ರ ಉಪನ್ಯಾಸಕಿ ಚಿತ್ರಲೇಖಾ ವಂದಿಸಿದರು.

LEAVE A REPLY

Please enter your comment!
Please enter your name here