ಪುತ್ತೂರು:ಕೆದಿಲ ಗ್ರಾಮದ ಪೇರಮೊಗರುವಿನ ಗಡಿಯಾರದಲ್ಲ್ಲಿ ಸಮಯ್ ಪ್ಯಾಲೇಸ್ ಫ್ಯಾಮಿಲಿ ರೆಸ್ಟೋರೆಂಟ್ ಡಿ.1ರಂದು ಶುಭಾರಂಭಗೊಂಡಿತು.ಪೇರಮೊಗರುವಿನ ದಿವ್ಯಜ್ಯೋತಿ ಪ್ಯಾಲೇಸ್ ಕಟ್ಟಡದ ಮ್ಹಾಲಕರಾದ ಶಕುಂತಲಾ ಮತ್ತು ನಾರಾಯಣ ಕುಲಾಲ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಸಮಯ್ ಪ್ಯಾಲೇಸ್ನ ಪಾಲುದಾರರಾದ ಪುರಂದರ ರೈ,ಯತೀಶ್ ಸುವರ್ಣ, ರಾಧಾಕೃಷ್ಣ ಪೂಜಾರಿ, ಪ್ರಭಾಕರ್ ಸುವರ್ಣ, ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ್, ಸುರಭಿ ಗ್ರೂಪ್ಸ್ನ ಅಜಯ್, ಶಿವಪ್ರಸಾದ್ ಶೆಟ್ಟಿ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು. ವಿದ್ಯಾ ಸ್ವಾಗತಿಸಿದರು. ಜ್ಯೋತಿ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.