ಮೈಸೂರು ವಿಭಾಗ ಮಕ್ಕಳ ಅಭಿನಯ ಶಿಬಿರ-ನಿರ್ದೇಶಕರಾಗಿ ಮೌನೇಶ್ ವಿಶ್ವಕರ್ಮ ಆಯ್ಕೆ

0

ಬಂಟ್ವಾಳ : ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಇದರ ಆಶ್ರಯದಲ್ಲಿ‌ ಡಿ.6 ರಿಂದ ನಡೆಯಲಿರುವ ಮೈಸೂರು ವಿಭಾಗ ಮಟ್ಟದ “ಮಕ್ಕಳ ಅಭಿನಯ ಶಿಬಿರ” ದ ಶಿಬಿರ ನಿರ್ದೇಶಕರಾಗಿ‌ ರಂಗನಿರ್ದೇಶಕ, ಪತ್ರಕರ್ತ ಮೌನೇಶ ವಿಶ್ವಕರ್ಮ ಆಯ್ಕೆಯಾಗಿದ್ದಾರೆ.

ಧಾರವಾಡದಲ್ಲಿರುವ ಬಾಲವಿಕಾಸ ಅಕಾಡೆಮಿಯ ಸಭಾಂಗಣದಲ್ಲಿ ನಡೆಯಲಿರುವ ಏಳು ದಿನಗಳ ಈ ವಸತಿಯುತ ಅಭಿನಯ ಶಿಬಿರದಲ್ಲಿ ಮೈಸೂರು, ಮಂಡ್ಯ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಾಲಮಂದಿರಗಳ ಮಕ್ಕಳು ಭಾಗವಹಿಸಲಿದ್ದಾರೆ. ಪುತ್ತೂರು ನಿವಾಸಿಯಾಗಿರುವ ಮೌನೇಶ್ ಅವರು,ಕಳೆದ ಹಲವು ವರ್ಷಗಳಿಂದ ಮಕ್ಕಳ ರಂಗಭೂಮಿ ಕ್ಷೇತ್ರದಲ್ಲಿ ಸಕ್ರೀಯವಾಗಿದ್ದು, ಬಂಟ್ವಾಳದಲ್ಲಿ ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here