ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ‘ವಿವೇಕ ಕ್ರೀಡಾ ಸಂಭ್ರಮ’

0

ಪುತ್ತೂರು: ಇಲ್ಲಿನ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟ ‘ವಿವೇಕ ಕ್ರೀಡಾ ಸಂಭ್ರಮ’ ದ. 7 ರಂದು ನಡೆಯಿತು.ಕ್ರೀಡಾಕೂಟವನ್ನು ಉದ್ಯಮಿ ಉಮೇಶ್ ನಾಯಕ್ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನೀತಿ ನಿಯಮಗಳನ್ನು ಹೇಳಿ ಉತ್ತಮ ಕ್ರೀಡಾಪಟುಗಳಾಗಿ ನಾಡಿಗೆ ಕೀರ್ತಿ ತರುವಂತಾಗಲಿ’ ಎಂದು ಆಶಿಸಿದರು. 80 ವಿದ್ಯಾಸಂಸ್ಥೆಗಳ ಮುಖೇನ  ಶಿಕ್ಷಣದ ಜೊತೆಗೆ ಭಾರತೀಯ ಪರಂಪರೆ, ಆಚಾರ ವಿಚಾರ ಹೇಳಿಕೊಡುವ ಮೂಲಕ ರಾಷ್ಟ್ರೀಯತೆಯ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುತ್ತಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯ ಮೆಚ್ಚುಗೆಗೆ ಪಾತ್ರವಾದದ್ದು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ರವಿನಾರಾಯಣ ರವರು ‘ಸೋಲುವುದನ್ನು ಕಲಿತಷ್ಟು ಜೀವನದಲ್ಲಿ ಗೆಲ್ಲಲು ಸಾಧ್ಯವಾಗುತ್ತದೆ. ಕ್ರೀಡಾ ಮನೋಭಾವದ ಮೂಲಕ ಜೀವನದಲ್ಲಿ ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಿದೆ’ ಎಂದು ಹೇಳಿ ಶುಭ ಹಾರೈಸಿದರು.

ಕ್ರೀಡಾಪಟುಗಳಿಂದ ವಂದನಾ ಸ್ವೀಕಾರ ಮಾಡಿದ ಹಿರಿಯ ವಿದ್ಯಾರ್ಥಿ ನಿಹಾಲ್ ಶೆಟ್ಟಿಯವರು ಮಾತನಾಡಿ ತನ್ನ ಶಾಲಾ ಅವಧಿಯಲ್ಲಿ ಕ್ರೀಡಾಪಟುವಾಗಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಬಗ್ಗೆ ಮೆಲುಕು ಹಾಕಿ ‘ಕ್ರೀಡೆ ಎನ್ನುವುದು ಜೀವನದಲ್ಲಿ ಎಲ್ಲಿ ಮತ್ತು ಹೇಗೆ ಅಗತ್ಯ ಬೀಳುತ್ತದೆ ಎಂಬುದು ನನ್ನ ಅನುಭವಕ್ಕೆ ಬಂದಿದೆ. ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಶಾಲೆಯ ಶಿಸ್ತು ಶ್ಲಾಘನೆಗೆ ಪಾತ್ರವಾಗಿತ್ತು.  ಈ ಶಾಲೆಯ ಪರಿಸರ ಮತ್ತು ಶಿಕ್ಷಕರನ್ನು ಯಾವತ್ತೂ ಮರೆಯಬೇಡಿ’ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಹಿರಿಯ ವಿದ್ಯಾರ್ಥಿ ಸಂಘವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಸುವಲ್ಲಿ ತಮ್ಮೆಲ್ಲರ ಸಹಕಾರ ಇರಲಿ’ ಎಂದರು.ಹಿರಿಯ ವಿದ್ಯಾರ್ಥಿ ಉದ್ಯಮಿ ವಿನೀತ್ ಶೆಣೈ ಶುಭ ಹಾರೈಸಿದರು.ಕ್ರೀಡಾ ಕಾರ್ಯದರ್ಶಿ ಸಾತ್ವಿಕ್ ಆರ್. ಕ್ರೀಡಾ ಪ್ರತಿಜ್ಞಾ ಸ್ವೀಕಾರ ಬೋಧಿಸಿದರು.ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಹರಿಣಾಕ್ಷಿ ಜೆ. ಶೆಟ್ಟಿ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್, ಶಾಲಾ ಸಲಹಾ ಸಮಿತಿ ಸದಸ್ಯರಾದ ಚಂದ್ರಶೇಖರ್,‌ ನಾಗೇಶ್ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಪ್ರಾರ್ಥಿಸಿದರು‌. ಮುಖ್ಯಗುರು ಸತೀಶ್ ಕುಮಾರ್ ರೈ ಸ್ವಾಗತಿಸಿ, ಪ್ರಾಥಮಿಕ ವಿಭಾಗ ಮುಖ್ಯಶಿಕ್ಷಕಿ ಸಂಧ್ಯಾ ಪೈ ವಂದಿಸಿದರು. ಪೂರ್ವಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಮಮತಾ ಉಪಸ್ಥಿತರಿದ್ದರು.

ಕ್ರೀಡಾಜ್ಯೋತಿಯನ್ನು ಶಾಲೆಯ ಸಾಧಕ ಕ್ರೀಡಾಪಟುಗಳು ಮೈದಾನಕ್ಕೆ ಒಂದು ಸುತ್ತು ಬಂದು ಉಮೇಶ್ ನಾಯಕ್ ರವರಿಗೆ ಹಸ್ತಾಂತರಿಸಿದರು. ಬಲೂನ್ ಗಳನ್ನು ಆಕಾಶಕ್ಕೆ ಹಾರಿಬಿಡುವ ಮೂಲಕ ಕ್ರೀಡಾಕೂಟಕ್ಕೆ ಸಾಂಕೇತಿಕ ಚಾಲನೆ ನೀಡಲಾಯಿತು.

ಕ್ರೀಡಾಕ್ಷೇತ್ರದಲ್ಲಿ ವಿವೇಕಾನಂದಕ್ಕೆ ಹೆಮ್ಮೆಯಿದೆ
ಕಳೆದ ಸಾಲಿನಲ್ಲಿ 9 ವಿದ್ಯಾರ್ಥಿಗಳು ಎಸ್‌ಜಿಎಫ್‌ಐ ಅರ್ಹತೆ ಪಡೆದಿರುವುದು ನಮ್ಮ ಶಾಲೆಯ ಹೆಮ್ಮೆಯಾಗಿದೆ. 6 ವಿದ್ಯಾರ್ಥಿಗಳು ರಾಜ್ಯಮಟ್ಟ, 3 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಭಾಗವಹಿಸಿದ್ದಾರೆ. ಕಳೆದ 1 ವರ್ಷದಲ್ಲಿ 4 ವಿದ್ಯಾರ್ಥಿಗಳು ನೌಕಾಪಡೆಯಲ್ಲಿ, 2 ವಿದ್ಯಾರ್ಥಿಗಳು  ಅಗ್ನಿವೀರ್ ಗೆ ಸೇರ್ಪಡೆಯಾಗಿದ್ದಾರೆ. 2 ವಿದ್ಯಾರ್ಥಿಗಳು ವಾಯುಸೇನೆ ಸೇರ್ಪಡೆಯಾಗುವ ನಿರೀಕ್ಷೆಯಲ್ಲಿರುವುದು ಈ ಕ್ರೀಡಾಕೂಟ ಆಯೋಜನೆಯ ಫಲಿತಾಂಶವಾಗಿದೆ’ ಎಂದು ಮುಖ್ಯಗುರು ಸತೀಶ್ ಕುಮಾರ್ ರೈ ಹೇಳಿದರು.

ಸಾಂಪ್ರದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿಗಳು
ಕ್ರೀಡಾಕೂಟದ ಪಥಸಂಚಲನದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಸಾಂಪ್ರದಾಯಿಕ ಲುಂಗಿಯಲ್ಲಿ ಮತ್ತು ವಿದ್ಯಾರ್ಥಿನಿಯರು ಸೀರೆಯಲ್ಲಿ ಕಾಣಿಸಿಕೊಂಡು ಗಮನಸೆಳೆದರು.

LEAVE A REPLY

Please enter your comment!
Please enter your name here