ಬೆಥನಿ ಪ್ರೌಢ ಶಾಲೆಯಲ್ಲಿ ಸಂವಾದ ಸಭೆ

0

ಪುತ್ತೂರು: ಶಾಲಾ ಸಭಾಭವನದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಸಭೆ ಜರುಗಿತು. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಕಲ್ಲಕಾ ಗುಣ ಮಟ್ಟದ ಉನ್ನತಿ ಹಾಗೂ ಉತ್ತಮ ಸಾಧನೆಯನ್ನು ಮಾಡುವ ಬಗ್ಗೆ ಚರ್ಚಿಸಲಾಯಿತು.


ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಸಂತ ಫಿಲೋಮಿನ ಕಾಲೇಜಿನ ಕ್ಯಾಂಪಸ್ ಡೈರೆಕ್ಟರ್ ವಂ ಫಾದರ್ ಸ್ಟ್ಯಾನಿ ಪಿಂಟೊ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಸಮಯ, ಗುರಿಯ ಕಡೆಗೆ ಪ್ರಯತ್ನ, ಅಲ್ಲದೇ ಪರೀಕ್ಷೆಗಳಿಗೆ ತಯಾರಿ, ಅಂಕ ಕ್ರೋಡಿಕರಣವೂ ಬಹಳ ಪ್ರಮುಖವಾದವು.ವಿದ್ಯಾರ್ಥಿಗಳು ಹಾಗೂ ಹೆತ್ತವರು ತಮ್ಮ ದೈನಂದಿನ ದಿನಚರಿಯಲ್ಲಿ
ಬದಲಾವಣೆ ತಂದುಕೊಂಡು ಬೆಳಗ್ಗಿನ ಉಪಹಾರದಿಂದ ರಾತ್ರಿ ಮಲಗುವ ಸಮಯದಲ್ಲಿ ಬದಲಾವಣೆಯನ್ನು ತಂದುಕೊಂಡು ಅಭ್ಯಾಸ ಮಾಡಬೇಕೆಂದರು.


ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ಪ್ರಶಾಂತಿ ಬಿ ಎಸ್‌ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಬೃಂದಾ ಕಾರ್ಯಕ್ರಮ ವಂದಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here