ಆಲಂಕಾರು. ಪ್ರಾ.ಕೃ.ಪ.ಸಹಕಾರಿ ಸಂಘದ ಕ್ಯಾಲೆಂಡರ್ ಬಿಡುಗಡೆ

0

ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕ್ಯಾಲೆಂಡರ್ ನ್ನು ಸಂಘದ ಅಧ್ಯಕ್ಷಧರ್ಮಪಾಲ ರಾವ್ ಕಜೆಯವರು ಬಿಡುಗಡೆ ಮಾಡಿದರು. ಆ ಬಳಿಕ ಮಾತನಾಡಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವ್ಯಾಪ್ತಿಗೆ ಒಳಪಡುವ ಆರು ಗ್ರಾಮದ ಸದಸ್ಯರಿಗೆ ಪ್ರತಿ ವರ್ಷ ಸಂಘದ ಕಡೆಯಿಂದ ಸಂಘದ ಸದಸ್ಯರಿಗೆ ಉಚಿತವಾಗಿ ಕ್ಯಾಲೆಂಡರ್ ವಿತರಣೆ ಮಾಡುತ್ತಿದ್ದೇವೆ ಹಾಗು ನಮ್ಮ ಸಿಬ್ಬಂದಿಗಳು ಪ್ರತಿ ಸದಸ್ಯರ ಮನೆಗೆ ತೆರಳಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಸದಸ್ಯರಿಗೆ ತಿಳಿಸಿ ಕ್ಯಾಲೆಂಡರ್ ನ್ನು ಪ್ರತಿ ವರ್ಷ ನೀಡುತ್ತಿರುವುದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಪ್ರದೀಪ್ ರೈ ಮನವಳಿಕೆ, ನಿರ್ದೇಶಕರಾದ ಶೇಷಪತಿ ರೈ ಗುತ್ತುಪಾಲು,ಸುಧಾಕರ ಪೂಜಾರಿ ಕಲ್ಲೇರಿ, ಆಶಾತಿಮ್ಮಪ್ಪ ಗೌಡ,ಅಣ್ಣು ನಾಯ್ಕ್ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ ಪ್ರಕಾಶ್,ಪ್ರಭಾರ ಸಹಾಯಕ ಕಾರ್ಯನಿರ್ವಹಣಾಧಿಕಾರಿ,ರವಿರಾಜ್ ರೈ ಗುತ್ತುಪಾಲು, ಶಾಖಪ್ರಬಂಧಕರಾದ ಆನಂದ ಗೌಡ,ಆಶಾ ರವರು ಹಾಗು ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here