12 ಸ್ಥಾನಗಳಿಗೆ 24 ಅಭ್ಯರ್ಥಿಗಳು ಅಂತಿಮ ಕಣದಲ್ಲಿ
ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಡಿ.10ರಂದು ಚುನಾವಣೆ ನಡೆಯಲಿದ್ದು 12 ಸ್ಥಾನಗಳಿಗೆ 24 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಸಾಮಾನ್ಯ ಸ್ಥಾನ:
5 ಸ್ಥಾನ ಹೊಂದಿರುವ ಸಾಮಾನ್ಯ ಕ್ಷೇತ್ರದಿಂದ 10 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಹಾಲಿ ಅಧ್ಯಕ್ಷ ವಿ ಬಾಬು ಶೆಟ್ಟಿ, ಪರಮೇಶ್ವರ ಭಂಡಾರಿ, ಹಸನ್ ಎ, ಮೇದಪ್ಪ ಗೌಡ, ರಾಘವೇಂದ್ರ ನಾಯಕ್, ಎಸ್ ಸುರೇಶ್ ಪ್ರಭು, ನವೀನ್ ಡಿ, ಕೆ ಪ್ರವೀಣ್ ಕುಮಾರ್ ಶೆಟ್ಟಿ, ವಿಶ್ವನಾಥ ಎಂ ಹಾಗೂ ಹರ್ಷ ಜಿ ಕಣದಲ್ಲಿದ್ದಾರೆ.
ಪರಿಶಿಷ್ಟ ಜಾತಿ ಮೀಸಲು ಸ್ಥಾನ:
1 ಸ್ಥಾನ ಹೊಂದಿರುವ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ದೇವಪ್ಪ ಪಿ ಹಾಗೂ ಶಿವರಾಮ ಅಂತಿಮ ಕಣದಲ್ಲಿದ್ದಾರೆ.
ಪರಿಶಿಷ್ಟ ಪಂಗಡ ಮೀಸಲು ಸ್ಥಾನ
1 ಸ್ಥಾನ ಹೊಂದಿರುವ ಪರಿಶಿಷ್ಟ ಮೀಸಲು ಕ್ಷೇತ್ರದಿಂದ ರಮೇಶ್ ಹಾಗೂ ಬಿ ಶಿವಪ್ರಸಾದ್ ನಾಯ್ಕ ಅಂತಿಮ ಕಣದಲ್ಲಿದ್ದಾರೆ.
ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನ:
1 ಸ್ಥಾನ ಹೊಂದಿರುವ ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನದಿಂದ ಹೊನ್ನಪ್ಪ ಪೂಜಾರಿ ಹಾಗೂ ಜಯರಾಮ ಹೆಚ್ ಅಂತಿಮ ಕಣದಲ್ಲಿದ್ದಾರೆ.
ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನ:
1 ಸ್ಥಾನ ಹೊಂದಿರುವ ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಕ್ಷೇತ್ರಕ್ಕೆ ಎಂ ಕುಶಾಲಪ್ಪ ಗೌಡ ಹಾಗೂ ದೇವಪ್ಪ ಅಂತಿಮ ಕಣದಲ್ಲಿದ್ದಾರೆ.
ಮಹಿಳಾ ಮೀಸಲು ಸ್ಥಾನ:
2 ಸ್ಥಾನ ಹೊಂದಿರುವ ಮಹಿಳಾ ಮೀಸಲು ಕ್ಷೇತ್ರದಿಂದ ನಾಗಮ್ಮ ಟಿ, ನಮಿತಾ, ಲತಾ ಮೋಹನ್ ಹಾಗೂ ಪವಿತ್ರ ಕೆ.ಪಿ ಅಂತಿಮ ಕಣದಲ್ಲಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರ:
1 ಸ್ಥಾನ ಹೊಂದಿರುವ ಸಾಲಗಾರರಲ್ಲದ ಕ್ಷೇತ್ರದಿಂದ ಚಂದ್ರ ಎಂ ಹಾಗೂ ಸುಗುಣ ಅಂತಿಮ ಕಣದಲ್ಲಿದ್ದಾರೆ.
ಡಿ.10ರಂದು ನರಿಮೊಗರು ಪ್ರಾ.ಕೃ.ಪ.ಸಹಕಾರ ಸಂಘದ ವಠಾರದಲ್ಲಿ ಚುನಾವಣೆ ನಡೆಯಲಿದ್ದು ಅಂದೇ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ ಎಂದು ರಿಟರ್ನಿಂಗ್ ಅಧಿಕಾರಿ ತಿಳಿಸಿದ್ದಾರೆ.