




ಆಲಂಕಾರು: ಕಡಬ ತಾಲೂಕಿನ ಆಲಂಕಾರು ಗ್ರಾಮ ಪಂಚಾಯತ್ ವತಿಯಿಂದ ಗ್ರಾ.ಪಂ.ಅನುದಾನದಿಂದ ವಿಶೇಷಚೇತನರಿಗೆ ವಿವಿಧ ಸವಲತ್ತು ವಿತರಣೆ ಹಾಗೂ ಶೇ.25ರ ನಿಧಿಯಿಂದ ಸಹಾಯಧನ ವಿತರಣಾ ಕಾರ್ಯಕ್ರಮ ಡಿ.12ರಂದು ಪೂರ್ವಾಹ್ನ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.



ಗ್ರಾ.ಪಂ.ನ ವಿಕಲಚೇತನರ ಶೇ.5ರ ನಿಧಿಯಲ್ಲಿ ಆಲಂಕಾರು ಗ್ರಾಮದ ವಿಶೇಷ ಚೇತನರಾದ ಆಯುಷ್ ಕೆ.ಎನ್.ರವರಿಗೆ ವೀಲ್ ಚೆಯರ್, ಶರವೂರು ಶೇಖರ ಗೌಡ ಹಾಗೂ ಕೊಂಡಾಡಿ ನಿವಾಸಿ ವಿವೇಕಾನಂದರವರ ಮನೆಗೆ ಸೋಲಾರ್ ದೀಪ ಅಳವಡಿಕೆ, ಉದಯ ನಾಯ್ಕರವರಿಗೆ ಮರದ ಮಂಚ, ವಿಶೇಷ ಚೇತನ ವಿದ್ಯಾರ್ಥಿ ಜೀವನ್‌ರವರಿಗೆ ಬರೆಯಲು ಮತ್ತು ಒದಲು ಟೇಬಲ್, ಚೆಯರ್, ಜನಾರ್ದನ ಪೂಜಾರಿ ಕಯ್ಯಪ್ಪೆ, ಸುಮಂಗಲ ತೋಟಂತಿಲ, ಲಿಖಿನ್ ಕುಮಾರ್ ಕಕ್ವೆ, ಸೊರ್ವಲ್ತಡಿ ಚಂದ್ರಾವತಿ ಅವರಿಗೆ ತಲಾ 10 ಸಾವಿರ ರೂ. ವೈದ್ಯಕೀಯ ವೆಚ್ಚವನ್ನು ನೀಡಲಾಯಿತು. ಶೇ.25ರ ನಿಧಿಯಿಂದ ರೋಹಿಣಿ ಆಲಂಕಾರು, ಚೋಮು ತೋಟಂತಿಲ, ಶಶಿಕಲಾ ನಗ್ರಿ, ಪೊಡಿಯ ನಗ್ರಿ ಇವರಿಗೆ ಮನೆ ರಿಪೇರಿಗೆ ತಲಾ 15 ಸಾವಿರ ರೂ. ಸಹಾಯಧನ ನೀಡಲಾಯಿತು.






ಗ್ರಾ.ಪಂ.ಅಧ್ಯಕ್ಷೆ ಸುಶೀಲ, ಉಪಾಧ್ಯಕ್ಷ ರವಿ ಪೂಜಾರಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುಜಾತ ಕೆ., ಕಾರ್ಯದರ್ಶಿ ವಸಂತ ಶೆಟ್ಟಿ, ಸದಸ್ಯರಾದ ಸದಾನಂದ ಆಚಾರ್ಯ, ರೂಪಾಶ್ರೀ, ವಾರಿಜ, ಕೃಷ್ಣ ಗಾಣಂತಿ, ಸುಮತಿ, ಸುನಂದ ಬಾರ್ಕುಳಿ, ಶಾರದಾ ಮತ್ತು ಆಶಾ ಕಾರ್ಯಕರ್ತರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಮೋನಪ್ಪ ಬರೆಪುದೇಲು, ಸವಲತ್ತು ಪಡೆದ ಫಲಾನುಭವಿಗಳು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.









