ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ‘ಪ್ರಾಚಿ’ ಆ್ಯಂಟಿಕ್‌ ಜ್ಯುವೆಲ್ಲರಿ ಪ್ರದರ್ಶನ, ಮಾರಾಟ

0

ಭಾರತದ ಪ್ರಾಚೀನ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸುವ ಅತ್ಯಪೂರ್ವ ಚಿನ್ನಾಭರಣಗಳನ್ನು ಕಣ್ತುಂಬಿಸಿಕೊಂಡು ನಿಮ್ಮದಾಗಿಸಿಕೊಳ್ಳುವ ಸದವಕಾಶ!

ಪುತ್ತೂರು: ತನ್ನ ಗ್ರಾಹಕ ಬಂಧುಗಳಿಗೆ ಚಿನ್ನಾಭರಣ ಉದ್ಯಮದಲ್ಲಿ ಸದಾ ವಿನೂತನವಾದ ಅಂಶಗಳನ್ನು ಪರಿಚಯಿಸುತ್ತಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಈ ಬಾರಿ ತಮ್ಮ ಗ್ರಾಹಕರಿಗಾಗಿ ‘ಆ್ಯಂಟಿಕ್‌ ಫೆಸ್ಟ್’ ಅನ್ನು ಡಿ.08ರಿಂದ ಪ್ರಾರಂಬಿಸಿದೆ.

‘ಪ್ರಾಚಿ’ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ಫೆಸ್ಟ್ ನಲ್ಲಿ ಪ್ರಾಚಿ ಆ್ಯಂಟಿಕ್‌ ಚಿನ್ನಾಭರಣಗಳ ಮೇಲೆ ವಿಶೇಷ ರಿಯಾಯಿತಿ ಹಾಗೂ ಕೊಡುಗೆಗಳನ್ನು ಗ್ರಾಹಕರು ತಮ್ಮದಾಗಿಸಿಕೊಳ್ಳುವ ಸದವಕಾಶ ಒದಗಿ ಬಂದಿದೆ.
ನಮ್ಮ ಸನಾತನ ಸಂಸ್ಕೃತಿಯ ಪ್ರತೀಕವಾಗಿರುವ ಪ್ರಾಚೀನ ಶೈಲಿಯ ಚಿನ್ನಾಭರಣಗಳನ್ನು ಹೊಸ ಪೀಳಿಗೆಯ ಗ್ರಾಹಕರು ಧರಿಸುವಂತಾಗಲು ಈ ಫೆಸ್ಟ್ ನಲ್ಲಿ ಸಾವಿರಕ್ಕೂ ಮಿಕ್ಕಿ ವೈವಿಧ್ಯಮಯ ಪುರಾತನ ಶೈಲಿಯ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.
ಇಷ್ಟು ಮಾತ್ರವಲ್ಲದೇ, ಮಹಿಳೆಯರು, ಪುರುಷರು ಮತ್ತು ಮಕ್ಕಳೂ ಸೇರಿದಂತೆ ಎಲ್ಲಾ ವಯೋಮಾನದ ಚಿನ್ನಾಭರಣ ಗ್ರಾಹಕರ ಮನಸ್ಸಿಗೊಪ್ಪುವ ರೀತಿಯಲ್ಲಿ ಆ್ಯಂಟಿಕ್‌ ಚಿನ್ನಾಭರಣಗಳ ಸಂಗ್ರಹವನ್ನು ಇಲ್ಲಿ ನೀಡಲಾಗಿದೆ.


ಮದುವೆ ಚಿನ್ನಾಭರಣಗಳು, 916 ಪರಿಶುದ್ಧತೆಯಲ್ಲಿ ಪ್ರಾಚೀನ ಶೈಲಿಯ ‘ಪ್ರಾಚಿ’ ಬ್ರ್ಯಾಂಡ್ ಚಿನ್ನಾಭರಣಗಳು ಸೇರಿದಂತೆ ಎಲ್ಲಾ ವಯೋಮಾನದವರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿ ಸಿದ್ಧಪಡಿಸಿರುವ ಈ ಚಿನ್ನಾಭರಣಗಳಿಗೆ ಆಭರಣ ಪ್ರಿಯರು ಮನಸೋಲುವುದಂತು ಖಂಡಿತ!
ಹಾಗಾದರೆ ಇನ್ನೇಕೆ ತಡ? ನೀವೂ ಈ ಪ್ರಾಚಿ ಆಂಟಿಕ್ ಫೆಸ್ಟ್‌ನಲ್ಲಿ ಭಾಗಿಯಾಗಲು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನ ಅತ್ಯಾಧುನಿಕ ವಿನೂತನ ಪುತ್ತೂರು ಮಳಿಗೆಗೊಮ್ಮೆ ಭೇಟಿ ನೀಡಿ.
ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಡಿಜಿಟಲ್ ಪೇಮೆಂಟ್ ವಿಧಾನಕ್ಕೆ ಮಳಿಗೆಯಲ್ಲಿ ಪ್ರೋತ್ಸಾಹವನ್ನು ನೀಡಲಾಗುತ್ತಿದ್ದು, ಗ್ರಾಹಕರು ತಮ್ಮ ಖರೀದಿಗೆ UPI / IMPS/Rupay Card ಬಳಸಿ ಬಿಲ್ ಪಾವತಿಸಬಹುದಾಗಿದೆ.

ವಿಶೇಷ ರಿಯಾಯಿತಿ ಅಚ್ಚರಿ ಕೊಡುಗೆ:
ನಿಮ್ಮ ಮನಸ್ಸಿಗೊಪ್ಪುವ ಆಭರಣಗಳ ಖರೀದಿಯಲ್ಲಿ ವಿಶೇಷ ರಿಯಾಯಿತಿ ಹಾಗೂ ಅಚ್ಚರಿ ಕೊಡುಗೆಗಳನ್ನೂ ಸಹ ತಮ್ಮದಾಗಿಸಿಕೊಳ್ಳುವ ಸದವಕಾಶ ಗ್ರಾಹಕರಿಗಿದ್ದು ಇದೆಲ್ಲದರ ಲಾಭವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here