ಸವಣೂರು ಮುಂಡತಡ್ಕ ಶ್ರೀ ಮಾರಿಯಮ್ಮ ದೇವಿ, ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ- ಧಾರ್ಮಿಕ ಸಭೆ

0

ಪುತ್ತೂರು: ಸವಣೂರು ಮುಂಡತಡ್ಕ ಶ್ರೀ ಮಾರಿಯಮ್ಮ ದೇವಿ, ಸಪರಿವಾರ ದೈವಗಳ ಪುನರ್ ಪ್ರತಿಷ್ಠೆಯು ದ.7ರಂದು ಜರಗಿತು. ರಾತ್ರಿ ಜರಗಿದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಪ್ರತಿಷ್ಠಾ ಸಮಿತಿಯ ಗೌರವಾಧ್ಯಕ್ಷ ರಾಜಾರಾಮ ಪ್ರಭು ಅಶ್ವಿನಿ ಫಾರ್ಮ್ಸ್ ಸವಣೂರುರವರು ವಹಿಸಿದ್ದರು.

ಸಮಾಜದಲ್ಲಿ ಗೌರವ- ಗಿರಿಶಂಕರ್ ಸುಲಾಯ: ಸವಣೂರು ಗ್ರಾ.ಪಂ. ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯರವರು ಮಾತನಾಡಿ ದೈವ-ದೇವರ ಆರಾಧನೆಯಿಂದ ನಮ್ಮ ಬದುಕು ಪಾವನವಾಗುತ್ತದೆ. ನಾವೆಲ್ಲ ಹಿಂದು ಧರ್ಮದ ಆಚಾರ-ವಿಚಾರಗಳನ್ನು ಮೈಗೂಡಿಸಿಕೊಂಡು, ಸುಂದರವಾದ ಬದುಕನ್ನು ರೂಪಿಸಿಕೊಳ್ಳಬೇಕು. ದುಶ್ಚಟ ಮುಕ್ತವಾದ ಜೀವನವನ್ನು ನಾವೆಲ್ಲ ಅನುಕರಣೆ ಮಾಡಿದಾಗ ಮಾತ್ರ ಮನುಷ್ಯನಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದು ಹೇಳಿದರು.

ಎಲ್ಲರ ಸಹಕಾರ ದೊರೆತಿದೆ
ಮುಂಡತಡ್ಕ ಶ್ರೀ ಮಾರಿಯಮ್ಮ ದೇವಿ ಸಪರಿವಾರ ದೈವಗಳ ಪುನರ್ ಪ್ರತಿಷ್ಠೆಯು ಅತ್ಯಂತ ಸುಂದರವಾಗಿ ನಡೆದಿದೆ. ಎಲ್ಲರ ಪೂರ್ಣ ಸಹಕಾರದಿಂದ ಕಾರ‍್ಯಕ್ರಮ ಯಶಸ್ವಿಯಾಗಿ ನಡೆದಿದೆ
ದಿನೇಶ್ ಮೆದು- ಅಧ್ಯಕ್ಷರು ಪ್ರತಿಷ್ಠಾ ಸಮಿತಿ
ಶ್ರೀ ಮಾರಿಯಮ್ಮ ದೇವಿ ದೇವಸ್ಥಾನ


ಮುಂಡತಡ್ಕ ಶ್ರೀ ಮಾರಿಯಮ್ಮ ದೇವೀ, ಸಪರಿವಾರ ದೈವಗಳ ದೇವಸ್ಥಾನದ ಪ್ರತಿಷ್ಠಾ ಸಮಿತಿ ಅಧ್ಯಕ್ಷ ದಿನೇಶ್ ಮೆದು ಸ್ವಾಗತಿಸಿ ಮಾತನಾಡಿ ಮುಂಡತಡ್ಕದಲ್ಲಿ ದೈವಗಳ ಪುನರ್ ಪ್ರತಿಷ್ಠೆಯು ಅತ್ಯಂತ ಸಂಭ್ರಮ ಹಾಗೂ ಅಚ್ಚುಕಟ್ಟಾಗಿ ನಡೆದಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಸವಣೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸವಣೂರು ಹಾಲು ಉತ್ವಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸುಪ್ರೀತ್ ರೈ ಖಂಡಿಗ, ತಾ.ಪಂ, ಮಾಜಿ ಸದಸ್ಯೆ ವಿಜಯ ಈಶ್ವರ ಗೌಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಬು ದೋಳ್ಪಾಡಿ, ಗೌರವಾಧ್ಯಕ್ಷ ಕಿನ್ನಗ ಆರ್., ಸವಣೂರು ಗ್ರಾ.ಪಂ, ಸದಸ್ಯೆ ಚೆನ್ನುರವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಷ್ಠಾ ಸಮಿತಿಯ ಕಾರ‍್ಯದರ್ಶಿ ತಾರಾನಾಥ ಕಾಯರ್ಗ ವಂದಿಸಿದರು. ಉಪನ್ಯಾಸಕ ಕೃಷ್ಣಪ್ರಸಾದ್ ಕಾರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here