




ಪುತ್ತೂರು: ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳವರೆಗಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ 11 ಸ್ಥಾನಗಳಲ್ಲಿ ಸಹಕಾರ ಭಾರತಿ ಬೆಂಬಲಿತರು ಜಯಗಳಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಸಹಕಾರ ಭಾರತಿ ಬೆಂಬಲಿತರಾದ ಕರುಣಾಕರ ,ಕೆ.ಬೆಳ್ಯಪ್ಪ ಗೌಡ, ಎಸ್.ಮುರಳೀಕೃಷ್ಣ, ವಾಡ್ಯಪ್ಪ ಗೌಡ, ವಿಶ್ವನಾಥ ಶೆಟ್ಟಿ, ಶಿವರಾಮ ಕೆ,ಸಿ.ಆರ್.ಸುಬ್ರಹ್ಮಣ್ಯ ಗೌಡ, ಮಹಿಳಾ ಮೀಸಲು ಸ್ಥಾನದಿಂದ ಚಂದ್ರಾವತಿ, ಜಲಜಾಕ್ಷಿ, ಹಿಂದುಳಿದ ವರ್ಗ ಬಿ ಸ್ಥಾನದಿಂದ ಕೆ.ತಿರುಮಲೇಶ್ವರ, ಹಿಂದುಳಿದ ವರ್ಗ ಎ ಸ್ಥಾನದಿಂದ ಧನಂಜಯ ಪೂಜಾರಿ ಅವರು ಜಯಗಳಿಸಿದ್ದಾರೆ. ಪ.ಪಂ.ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಗಣಪಯ್ಯ ನಾಯ್ಕ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಆ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು.















