ಡಿ.13: ಕಡಬದಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆ

0

ಪುತ್ತೂರು: ಡಿ.13ರಂದು ಕಡಬ ಪಟ್ಟಣ ಪಂಚಾಯತ್‌ ಸಭಾಂಗಣದಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ. ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನೀಡಬಹುದಾಗಿದೆ. ನಿಗದಿತ ನಮೂನೆಯ ಅರ್ಜಿಯನ್ನು ಭರ್ತಿಮಾಡಿ ಅಫಿದಾವತ್‌ ಮಾಡಿಸಿದ ದೂರು ಅರ್ಜಿಗಳನ್ನು ಲೋಕಾಯುಕ್ತ ವಿಭಾಗದ ಪೊಲೀಸ್‌ ಅಧೀಕ್ಷಕರಿಗೆ, ಉಪಾಧೀಕ್ಷಕರಿಗೆ ಮತ್ತು ಪೊಲೀಸ್‌ ನಿರೀಕ್ಷಕರಿಗೆ ಸಲ್ಲಿಸಬಹುದಾಗಿದೆ. ಇದಲ್ಲದೇ ಉಳಿದ ದಿನಗಳಲ್ಲಿ ಕಚೇರಿ ವೇಳೆಯಲ್ಲಿ ಸಾರ್ವಜನಿಕರು ದೂರು ಅರ್ಜಿಗಳನ್ನು ನೀಡಬಹುದಾಗಿದೆ. ಮಾತ್ರವಲ್ಲದೆ ಅರ್ಜಿದಾರರು ನಮೂನೆ 1 ಮತ್ತು 2ರಲ್ಲಿ ಭರ್ತಿಮಾಡಿದ ಅಫಿದಾವತ್‌ ಮಾಡಿಸಿ ನೇರವಾಗಿ ಅಥವಾ ಅಂಚೆ ಮೂಲಕ ಮಾನ್ಯ ನಿಬಂಧಕರು, ಕರ್ನಾಟಕ ಲೋಕಾಯುಕ್ತ ಬಹುಮಹಡಿ ಕಟ್ಟಡ, ಅಂಬೇಡ್ಕರ್‌ ರಸ್ತೆ ಬೆಂಗಳೂರು 560001 ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಪ್ರಕಟನೆಯಲ್ಲಿ ತಿಳಿಸಿದೆ.

ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು ಇಂತಿದೆ:
ಪೊಲೀಸ್‌ ಅಧೀಕ್ಷಕರ ಕಚೇರಿ – 0824 2950997, 93640 62517
ಪೊಲೀಸ್‌ ಉಪಾಧೀಕ್ಷಕರು – 1 (ಕಚೇರಿ) 0842 2453420, 93640 62579
ಪೊಲೀಸ್‌ ಉಪಾಧೀಕ್ಷಕರು – 2 (ಕಚೇರಿ) 0824 2453420, 93640 62580
ಪೊಲೀಸ್‌ ನಿರೀಕ್ಷಕರು – 1 (ಕಚೇರಿ) 0824 2427237, 93640 62691
ಪೊಲೀಸ್‌ ನಿರೀಕ್ಷಕರು – 2 (ಕಚೇರಿ) 0824 2427237, 93640 62692

LEAVE A REPLY

Please enter your comment!
Please enter your name here