ನೆಲ್ಯಾಡಿ: ಬಜತ್ತೂರು ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯ ಮನೋಜ್ ಕುಮಾರ್‌ರವರ ಮಣಿಕ್ಕಳದಲ್ಲಿನ ಪಂಚಾಯತ್ ನಿವೇಶನ ಜಾಗದಲ್ಲಿದ್ದ ಗಿಡ ಗಂಟಿಗಳನ್ನು ತೆರವುಗೊಳಿಸುವ ಮೂಲಕ ಬಜತ್ತೂರು ಶೌರ್ಯ ವಿಪತ್ತು ತಂಡದ ಸದಸ್ಯರು ಸ್ವಚ್ಛತಾಕಾರ್ಯ ಮಾಡಿದರು.
ಸಾಮಾಗ್ರಿ ಹಾಗೂ ಸಿಮೆಂಟ್ ಚೀಲ ಜೋಡಣೆಗೆ ಅನುಕೂಲವಾಗುವಂತೆ ಶ್ರಮದಾನದ ಮೂಲಕ ಶೆಡ್ ನಿರ್ಮಾಣ ಮಾಡಲಾಯಿತು. ಬಜತ್ತೂರು ಮುದ್ಯ ಪಂಚಲಿಂಗೇಶ್ವರ ಸಭಾಂಗಣದಲ್ಲಿರುವ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಸ್ವಾಮಿಗಳು ಹಾಗೂ ಶೌರ್ಯ ತಂಡದ ಸದಸ್ಯರು ಸುಮಾರು 400 ಕೆಂಪು ಕಲ್ಲುಗಳನ್ನು ರಸ್ತೆ ಬದಿಯಿಂದ ಮನೆ ನಿವೇಶನಕ್ಕೆ ಶ್ರಮದಾನ ಮಾಡಿ ಸ್ಥಳಾಂತರಿಸಿದರು. ಶೌರ್ಯ ವಿಪತ್ತು ತಂಡದ ಸದಸ್ಯರಾದ ಮಮತಾ, ಭವ್ಯ, ಬೇಬಿ, ಇಂದಿರಾ, ಅನಿತಾ, ಸುಜಾತ, ಸದಾನಂದ, ರಾಜೇಶ್, ಗೋಪಾಲ, ಸುರೇಶ, ವಾಸುದೇವ, ವಾಸಪ್ಪ, ಹರೀಶ್, ಮನೋಜ್ ಕುಮಾರ್‌ರವರು ಸ್ವಚ್ಛತೆ ಹಾಗೂ ಶ್ರಮದಾನದಲ್ಲಿ ಭಾಗವಹಿಸಿದ್ದರು.