ಕೆಯ್ಯೂರು: ಇಂದಿನ ಮಕ್ಕಳೆ ಇಂದಿನ ಪ್ರಜೆಗಳು ಎಂದು ಗೌರವಿಸಿ- ಮಕ್ಕಳ ಜಾಥಾದಲ್ಲಿ ಮಕ್ಕಳ ಧ್ವನಿ

0

ಪುತ್ತೂರು: ಮಕ್ಕಳ ಮಾಸ್ತೋತ್ಸವದ ಪ್ರಯುಕ್ತ ಚೈಲ್ಡ್ ರೈಟ್ಸ್ ಟ್ರಸ್ಟ್ ಬೆಂಗಳೂರು, ಪಡಿ ಮಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ, ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಹಾಗೂ ಎಸ್ ಡಿ ಎಂ ಸಿ ಸದಸ್ಯರ ಸಮನ್ವಯ ವತಿಯಿಂದ ಕೆಯ್ಯೂರು ಕೆಪಿಎಸ್ ಪ್ರಾಥಮಿಕ ಶಾಲಾ ಮಕ್ಕಳು ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮತ್ತು ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಪರಿಣಾಮಕಾರಿಯಾಗಿ ಗ್ರಾಮ ಪಂಚಾಯತಗಳಲ್ಲಿ ಅನುಷ್ಠಾನ ಮಾಡುವ ಉದ್ದೇಶದಿಂದ ಜಾಥ ಕಾರ್ಯಕ್ರಮವನ್ನು ನಡೆಸಿದರು.

ಈ ಜಾಥದಲ್ಲಿ ಇಂದಿನ ಮಕ್ಕಳೇ ಇಂದಿನ ಪ್ರಜೆಗಳು, ಮಕ್ಕಳಿಗೆ ಶುದ್ಧ ಗಾಳಿ ಶುದ್ಧ ನೀರನ್ನು ಒದಗಿಸಿ, ಎಲ್ಲ ಮಕ್ಕಳಿಗೂ ಶಿಕ್ಷಣ ಕೊಡಿ, ಬಾಲ್ಯ ವಿವಾಹವನ್ನು ನಿಲ್ಲಿಸಿ, ಮಕ್ಕಳ ಬಾಲ್ಯವನ್ನು ಉಳಿಸಿ ಹಾಗೂ ಬಾಲಕಾರ್ಮಿಕತೆಯನ್ನು ತೊಳಗಿಸಿ ಎಂಬಹಲವಾರು ಘೋಷಣೆಗಳ ಮೂಲಕ ಜಾಥಾ ತೆರಳಿ ಸಮುದಾಯದಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯ ಮಹತ್ವದ ಬಗ್ಗೆ ಜಾಗೃತಿಯನ್ನು ಮೂಡಿಸಿದರು.


ಈ ಸಂದರ್ಭದಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ ಇದರ ಅಧ್ಯಕ್ಷೆ ನಯನ ರೈ, ಕೋಶಾಧಿಕಾರಿ ರಾಜೇಶ್ವರಿ ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಜೊತೆ ಕಾರ್ಯದರ್ಶಿ ಸುಮಂಗಳಾ ಶೆಣೈ, ಚೈಲ್ಡ್ ರೈಟ್ ಟ್ರಸ್ಟ್ ಬೆಂಗಳೂರು ಇದರ ಸಂಯೋಜಕರಾದ ಕಸ್ತೂರಿ ಬೊಳುವಾರು ಹಾಗೂ ಮುಖ್ಯ ಶಿಕ್ಷಕ ಬಾಬು ಹಾಗೂ ಶಾಲಾ ಸಹ ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಯಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here