ಲಿಯೋಕ್ಲಬ್ ಜಿಲ್ಲಾಧ್ಯಕ್ಷೆ ಡಾ. ರಂಜಿತಾ.ಎಚ್ ಶೆಟ್ಟಿ ಕಾವು ವಿದೇಶ ಪ್ರವಾಸ

0

ಪುತ್ತೂರು: ಲಿಯೊ ಕ್ಲಬ್ 317ಡಿ ಇದರ ಜಿಲ್ಲಾಧ್ಯಕ್ಷೆಯಾದ ರಂಜಿತಾ ಎಚ್ ಶೆಟ್ಟಿ ಕಾವುರವರು ವಿದೇಶ ಪ್ರವಾಸ ಕೈಗೊಳ್ಳಲಿದ್ದು ಡಿ.15 ರಿಂದ 18 ರತನಕ ಡಾಕಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.ಭಾರತ, ದಕ್ಷಿಣ ಏಷ್ಯ, ಮತ್ತು ಮಧ್ಯ ಏಷ್ಯ ರಾಷ್ಟ್ರಗಳ ಲಯನ್ ಮತ್ತು ಲಿಯೋ ಕ್ಲಬ್ ಸದಸ್ಯರುಗಳ ಸಮಾವೇಶ ನಡೆಯಲಿದೆ.

ಬಾಂಗ್ಲಾ ದೇಶದ ಡಾಕಾದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಸಾವಿರಾರು ಮಂದಿ ವಿವಿಧ ದೇಶದ ಲಿಯೋ ಮತ್ತು ಲಯನ್ಸ್ ಪ್ರಮುಖರು ಭಾಗವಹಿಸಲಿದ್ದು ಲಯನ್ಸ್ ಜಿಲ್ಲಾ ಗವರ್ನರ್ ಮೆಲ್ವಿನ್ ಡಿಸೋಜಾ,ಜಿಲ್ಲಾ ಲಿಯೋ ಕ್ಲಬ್ ಕಾರ್ಯದರ್ಶಿ ಸಮೀಕ್ಷ ಭಾಗವಹಿಸಲಿದ್ದಾರೆ ಎಂದು ಪುತ್ತೂರು ಕಾವು ಲಯನ್ಸ್ ಕ್ಲಬ್ ಅಧ್ಯಕ್ಷರಾದ ದಿವ್ಯನಾಥ ಶೆಟ್ಟಿ ಕಾವು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here