ಯುವಸಮೂಹ ಒಗ್ಗೂಡಿದಾಗ ಸಂಘಟನೆ ಯಶಸ್ವಿ-ರಾಜೇಶ್ ಬಿ
ಪುತ್ತೂರು: ಯುವವಾಹಿನಿ ಸಂಘಟನೆಗೆ ಯುವಸಮೂಹ ಹೆಚ್ಚೆಚ್ಚು ಸೇರ್ಪಡೆಗೊಳ್ಳಬೇಕು. ಯುವವಾಹಿನಿ ಮುಖಾಂತರ ಸಮಾಜ ಸೇವೆಯನ್ನು ಮಾಡುತ್ತಾ ನಾಯಕತ್ವ ಗುಣವನ್ನು ಒಲಿಸಿಕೊಳ್ಳಬೇಕು ಮಾತ್ರವಲ್ಲ ಯುವಸಮೂಹ ಒಗ್ಗೂಡಿ ಕೆಲಸ ಮಾಡಿದಾಗ ಸಂಘಟನೆಯು ಯಶಸ್ವಿ ಹಾದಿಯಲ್ಲಿ ನಡೆಯಬಲ್ಲುದು ಎಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ರಾಜೇಶ್ ಬಿ.ರವರು ಹೇಳಿದರು.
ಡಿ.16 ರಂದು ಬಪ್ಪಳಿಗೆ ಬ್ರಹ್ಮಶ್ರೀ ಗುರುನಾರಾಯಣ ಬಿಲ್ಲವ ಸಂಘದ ಸಭಾಭವನದಲ್ಲಿ ಜರಗಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಯುವವಾಹಿನಿ ಸಂಘಟನೆಯು ವಿದ್ಯಾನಿಧಿ ಯೋಜನೆಯಡಿಯಲ್ಲಿ ವಿದ್ಯೆಗೆ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಶ್ಲಾಘನೀಯ. ಯುವವಾಹಿನಿಯು ಶಿಸ್ತುಬದ್ಧವಾದ ಸಂಘಟನೆಯಾಗಿ ಬೆಳೆಯುತ್ತಾ ಸಮಾಜದ ಶಕ್ತಿಯಾಗಿ ಗುರುತಿಸುತ್ತಿದೆ ಎಂದರು.
ಯುವವಾಹಿನಿ ಸಂಘಟನೆಯು ಯುವ ಪೀಳಿಗೆಗೆ ಸ್ಫೂರ್ತಿಯಾಗಿದೆ-ಚಿದಾನಂದ ಸುವರ್ಣ:
ಪುತ್ತೂರು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದ ಸುವರ್ಣರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವಿದ್ಯೆ-ಉದ್ಯೋಗ-ಸಂಪರ್ಕವೆಂಬ ಧ್ಯೇಯವಾಕ್ಯದಡಿಯಲ್ಲಿ ಯುವವಾಹಿನಿ ಸಂಸ್ಥೆಯು ಸಮಾಜಕ್ಕೆ ಉತ್ತಮವಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಪುತ್ತೂರು ಯುವವಾಹಿನಿ ಸಂಘಟನೆಯು ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿ ಬೆಳೆದು ನಿಂತಿದೆ ಎಂದರು.
ತಂಡದ ಸಹಕಾರದೊಂದಿಗೆ ಯಶಸ್ವಿ ಕಾರ್ಯಕ್ರಮ-ಉಮೇಶ್ ಬಾಯಾರ್:
ಅಧ್ಯಕ್ಷತೆ ವಹಿಸಿದ ಯುವವಾಹಿನಿ ಪುತ್ತೂರು ಘಟಕದ ನಿರ್ಗಮನ ಅಧ್ಯಕ್ಷ ಉಮೇಶ್ ಬಾಯರ್ ಮಾತನಾಡಿ, ನನ್ನ ಅಧ್ಯಕ್ಷಾವಧಿಯಲ್ಲಿ ಕಳೆದೊಂದು ವರ್ಷ ಪದಾಧಿಕಾರಿಗಳ, ಸದಸ್ಯರ ಸಹಕಾರದೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ. ನಾವು ಮಾಡುವ ಯಾವುದೇ ಕಾರ್ಯಕ್ರಮವಿರಲಿ, ನಾರಾಯಣಗುರುಗಳ ಆಶೀರ್ವಾದ ಖಂಡಿತಾ ಇದೆ ಎಂದು ಹೇಳಿ ನೂತನ ತಂಡಕ್ಕೆ ಶುಭ ಹಾರೈಸಿದರು.
ಯುವವಾಹಿನಿ ಸಮಾಜದ ಸಂಪತ್ತು ಎನಿಸಿಕೊಳ್ಳಬೇಕು-ಹರೀಶ್ ಪೂಜಾರಿ:
ಉಪ್ಪಿನಂಗಡಿ ಕರ್ನಾಟಕ ಬ್ಯಾಂಕ್ ಅಧಿಕಾರಿ ಹರೀಶ್ ಪೂಜಾರಿ ಉದ್ಯಂಗಳ ಮಾತನಾಡಿ, ಯುವವಾಹಿನಿ ಅಂದರೆ ಯುವಕರ ಸಂಘಟನೆ. ಯುವಕರು ಈ ಸಂಘಟನೆಗೆ ಸೇರ್ಪಡೆಗೊಂಡು ಯುವವಾಹಿನಿಯನ್ನು ಬಲಿಷ್ಟಗೊಳಿಸಬೇಕು ಆ ಮೂಲಕ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಬೇಕು ಮತ್ತು ಸಮಾಜದ ಸಂಪತ್ತು ಎನಿಸಿಕೊಳ್ಳಬೇಕು ಎಂದರು.
ಹಳೇ ಬೇರು, ಹೊಸ ಚಿಗುರುವುಳ್ಳ ಹಿರಿಯ-ಕಿರಿಯರ ಸಮಾಗಮವಿದ್ದಲ್ಲಿ ಯಶಸ್ವಿ-ಚಂದ್ರಶೇಖರ ಸನಿಲ್:
ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಸನಿಲ್ ಮಾತನಾಡಿ, ಯಾವುದೇ ಸಂಸ್ಥೆ ಅಥವಾ ಸಂಘಟನೆ ಬೆಳೆಯಬೇಕಾದರೆ ಅಲ್ಲಿ ಹಳೇ ಬೇರು, ಹೊಸ ಚಿಗುರುವುಳ್ಳ ಹಿರಿಯರು, ಕಿರಿಯರ ಸಮಾಗಮ ಇರಬೇಕು. ಯುವವಾಹಿನಿ ಕೇಂದ್ರ ಸಮಿತಿಯಿಂದ ಹಮ್ಮಿಕೊಳ್ಳುವ ಯಾವುದೇ ಕಾರ್ಯಕ್ರಮಕ್ಕೆ ಪುತ್ತೂರಿನ ಯುವವಾಹಿನಿ ಸಂಘಟನೆಯು ಉತ್ತಮವಾಗಿ ಸ್ಪಂದಿಸಿದೆ ಎಂದರು.
ಸ್ಮರಣಿಕೆ ನೀಡಿ ಗೌರವ:
2022-23ನೇ ಸಾಲಿನಲ್ಲಿ ಯುವವಾಹಿನಿ ಪುತ್ತೂರು ಘಟಕದಲ್ಲಿ ವಿವಿಧ ಕರ್ತವ್ಯ ನಿರ್ವಹಿಸಿದ ಪದಾಧಿಕಾರಿಗಳಾದ ಉಪಾಧ್ಯಕ್ಷ ಜಯರಾಮ್ ಬಿ.ಎನ್, ಕಾರ್ಯದರ್ಶಿ ಅಣ್ಣಿ ಪೂಜಾರಿ, ಜೊತೆ ಕಾರ್ಯದರ್ಶಿ ಸಮಿತ್ ಪಿ, ಕೋಶಾಧಿಕಾರಿ ಪ್ರಿಯಾಶ್ರೀ ಎಚ್, ಸಂಘಟನಾ ಕಾರ್ಯದರ್ಶಿ ಪ್ರಿಯಾಶ್ರೀ ಕೂಡುರಸ್ತೆ, ವಿದ್ಯಾನಿಧಿ ಸಂಯೋಜಕ ಲೋಹಿತ್ ಕಲ್ಕಾರು, ಮಹಿಳಾ ಸಂಘಟನಾ ನಿರ್ದೇಶಕಿ ನವ್ಯಾ ದಾಮೋದರ್, ಪ್ರಚಾರ ನಿರ್ದೇಶಕ ಅವಿನಾಶ್ ಹಾರಾಡಿ, ವಿದ್ಯಾರ್ಥಿ ಸಂಘಟನಾ ನಿರ್ದೇಶಕ ಶಿವಪ್ರಸಾದ್ ಕುಂಬ್ರ, ನಾರಾಯಣಗುರು ತತ್ವ ಪ್ರಚಾರ ಹಾಗೂ ಅನುಷ್ಟಾನ ನಿರ್ದೇಶಕ ಯತೀಶ್ ಬಲ್ನಾಡು, ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣ ನಿರ್ದೇಶಕ ಗಣೇಶ್ ಬೊಳ್ಳಗುಡ್ಡೆ, ಸಾಂಸ್ಕೃತಿಕ ನಿರ್ದೇಶಕ ಶರತ್ ಕೈಪಂಗಳದೋಳ, ಕಲೆ ಮತ್ತು ಸಾಹಿತ್ಯ ನಿರ್ದೇಶಕ ದೀಕ್ಷಿತ್ ಬಿ.ಆರ್, ಸಮಾಜ ಸೇವೆ ನಿರ್ದೇಶಕ ಮೋಹನ ಶಿಬರ, ಆರೋಗ್ಯ ನಿರ್ದೇಶಕ ಉಮೇಶ್ ಪಾನೆ, ಕ್ರೀಡಾ ನಿರ್ದೇಶಕ ಶಿವಕುಮಾರ್ ಮರಕ್ಕೂರು, ವ್ಯಕ್ತಿತ್ವ ವಿಕಸನ ನಿರ್ದೇಶಕ ಅಭಿಷೇಕ್ ಕೋಟ್ಯಾನ್‌ರವರುಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅಭಿನಂದನೆ:
ಈ ಸಂದರ್ಭದಲ್ಲಿ ಯುವವಾಹಿನಿ ಕಡಬ ಘಟಕದ ಅಧ್ಯಕ್ಷ ಸುಂದರ ಪೂಜಾರಿ, ಶಿವಪ್ರಸಾದ್, ಸುಳ್ಯ ಘಟಕದ ನಿಯೋಜಿತ ಅಧ್ಯಕ್ಷ ಲೋಹಿತ್‌ರವರುಗಳಿಗೆ ಶಾಲು ಹೊದಿಸಿ ಅಭಿನಂದಿಸಲಾಯಿತು.
ಮಹಿಳಾ ಸಂಘಟನೆ ನಿರ್ದೇಶಕಿ ಪ್ರಿಯಾಶ್ರೀ ಎಚ್ ಪ್ರಾರ್ಥಿಸಿದರು. ಪ್ರಚಾರ ಸಮಿತಿ ನಿರ್ದೇಶಕಿ ಶ್ರೀಮತಿ ನವ್ಯ ದಾಮೋದರ್ ಶಾಂತಿಗೋಡು ಸ್ವಾಗತಿಸಿ, ನೂತನ ಕಾರ್ಯದರ್ಶಿ ಸಮಿತ್ ಪಿ ವಂದಿಸಿದರು. ನಿರ್ಗಮನ ಕಾರ್ಯದರ್ಶಿ ಅಣ್ಣಿ ಪೂಜಾರಿರವರು ವರದಿ ಮಂಡಿಸಿದರು. ಚುನಾವಣಾ ಸಮಿತಿ ಸದಸ್ಯ ಬಾಬು ಪೂಜಾರಿ ಇದ್ಪಾಡಿ ನೂತನ ಪದಾಧಿಕಾರಿಗಳ ಹೆಸರನ್ನು ಓದಿದರು. ಅವಿನಾಶ್ ಹಾರಾಡಿ ಕಾರ್ಯಕ್ರಮ ನಿರೂಪಿಸಿದರು.
ಪದಪ್ರದಾನ..
ನೂತನ ಅಧ್ಯಕ್ಷ ಜಯರಾಮ ಬಿ ಎನ್. ಉಪಾಧ್ಯಕ್ಷ ಬಿ ಅಣ್ಣಿ ಪೂಜಾರಿ, ಕಾರ್ಯದರ್ಶಿ ಸಮಿತ್ ಪಿ, ಜೊತೆ ಕಾರ್ಯದರ್ಶಿ ಯತೀಶ್ ಕುಮಾರ್ ಬಿ.ಕೆ ಬಲ್ನಾಡು, ಕೋಶಾಧಿಕಾರಿ ಶರತ್ ಸಾಲ್ಯಾನ್ ದೋಳ, ವ್ಯಕ್ತಿತ್ವ ವಿಕಸನ ನಿರ್ದೇಶಕ ಉಮೇಶ ಪಾನೆ, ಕ್ರೀಡಾ ನಿರ್ದೇಶಕ ಲೋಹಿತ್ ಕೆ, ಆರೋಗ್ಯ ನಿರ್ದೇಶಕ ಮೋಹನ ಎಸ್, ಸಮಾಜ ಸೇವೆ ನಿರ್ದೇಶಕ ಗಣೇಶ್ ಸುವರ್ಣ, ಕಲೆ/ಸಾಹಿತ್ಯ ನಿರ್ದೇಶಕ ಶಿವಪ್ರಸಾದ್, ಸಾಂಸ್ಕೃತಿಕ ನಿರ್ದೇಶಕ ಅಭಿಷೇಕ್ ಕೋಟ್ಯಾನ್, ಉದ್ಯೋಗ/ಭವಿಷ್ಯ ನಿರ್ಮಾಣ ನಿರ್ದೇಶಕ ಅವಿನಾಶ್ ಹಾರಾಡಿ, ನಾರಾಯಣ ಗುರುಗಳ ತತ್ವಾದರ್ಶಗಳ ಪ್ರಚಾರ/ಅನುಷ್ಟಾನ ನಿರ್ದೇಶಕ ದಾಮೋದರ ಸುವರ್ಣ ಶಾಂತಿಗೋಡು, ವಿದ್ಯಾರ್ಥಿ ಸಂಘಟನಾ ನಿರ್ದೇಶಕ ದೀಕ್ಷಿತ್ ಕುಮಾರ್ ಐ, ಪ್ರಚಾರ ಸಮಿತಿ ನಿರ್ದೇಶಕಿ ನವ್ಯ ದಾಮೋದರ್ ಶಾಂತಿಗೋಡು, ಮಹಿಳಾ ಸಂಘಟನೆ ನಿರ್ದೇಶಕಿ ಪ್ರಿಯಾಶ್ರೀ ಯೆಚ್, ವಿದ್ಯಾನಿಧಿ ನಿರ್ದೇಶಕ ರವೀಂದ್ರ ಕಲ್ಕಾರ್ ಶಾಂತಿಗೋಡು, ಸಂಘಟನಾ ಕಾರ್ಯದರ್ಶಿಗಳಾದ ಹರ್ಷಿತ್ ಬಲ್ನಾಡು, ಪ್ರಿಯಾಶ್ರೀ, ಸತೀಶ್, ಸುನಿಲ್ ಐ, ಹರೀಶ್ ಎಂ ಕೆ, ಭವಿತ್, ದೀಕ್ಷಿತ್ ಬಿ ಆರ್, ಶ್ರದ್ದಾರವರುಗಳಿಗೆ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾಜೇಶ್ ಬಿ.ರವರು ಪ್ರತಿಜ್ಞಾವಿಧಿಯನ್ನು ಬೋಧಿಸಿ ಪದಪ್ರದಾನವನ್ನು ನೆರವೇರಿಸಿದರು.
ಸನ್ಮಾನ/ಅಭಿನಂದನೆ..
ಈ ಸಂದರ್ಭದಲ್ಲಿ ಯುವವಾಹಿನಿ ಪುತ್ತೂರು ಘಟಕದ ವತಿಯಿಂದ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ರಾಜೇಶ್ ಬಿ., ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಸನಿಲ್‌ರವರುಗಳಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರತಿನಿಧಿಯಾಗಿ ಭಾಗವಹಿಸಿದ ಶ್ರದ್ಧಾರವರನ್ನು ಅಭಿನಂದಿಸಲಾಯಿತು.
ಸಮಾಜ ಸೇವೆಗೆ ಉತ್ತಮ ಆಯ್ಕೆ ಯುವವಾಹಿನಿ..
ಸಮಾಜ ಸೇವೆಗೆ ಉತ್ತಮ ಆಯ್ಕೆ ಯುವವಾಹಿನಿ ಸಂಘಟನೆ. ಯಾರು ಸಮಾಜದಲ್ಲಿ ಗುರುತಿಸುವಂತಹ ಉತ್ತಮ ಕೆಲಸ ಮಾಡುತ್ತಿದೆಯೋ ಅಂತಹ ಸಂಘಟನೆಗೆ ಯೋಗ್ಯ ಬೆಲೆಯನ್ನು ಹೊಂದುತ್ತದೆ. ಯುವವಾಹಿನಿ ಸಂಸ್ಥೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತವಾಗಿರುವುದು ನಮಗೆಲ್ಲ ಹೆಮ್ಮೆಯ ವಿಚಾರವಾಗಿದೆ.
-ಜಯರಾಮ್ ಬಿ.ಎನ್, ನೂತನ ಅಧ್ಯಕ್ಷರು, ಯುವವಾಹಿನಿ ಪುತ್ತೂರು ಘಟಕ