ಈಶ್ವರಮಂಗಲ: ಈಶ್ವಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವದಿಯ ಆಡಳಿತ ಮಂಡಳಿಗೆ ಸಹಕಾರ ಭಾರತಿ ಬೆಂಬಲಿತ ಅಭ್ಯಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಶಿವರಾಮ ಶರ್ಮ, ಪ್ರದೀಪ್ ಕುಮಾರ್, ರಾಧಕೃಷ್ಣ ರೈ ಡಿ.ಪಿ, ಹೊನ್ನಪ್ಪ ಗೌಡ, ಕುಂಞಣ್ಣ ರೈ, ಪ್ರೀತಾ ಪಿ. ರೈ, ಅಣ್ಣು ಎಂ., ಹಿಂದುಳಿದ ಪ್ರವರ್ಗ ಎ. ಮೀಸಲು ಕ್ಷೇತ್ರದಿಂದ ಗಾಯತ್ರಿ, ಹಿಂದುಳಿದ ಪ್ರವರ್ಗ ಬಿ. ಮೀಸಲು ಕ್ಷೇತ್ರದಿಂದ ದಿನೇಶ ಕೆ., ಮಹಿಳಾ ಮೀಸಲು ಕ್ಷೇತ್ರದಿಂದ ಶಶಿಕಲಾ ರೈ, ಎಸ್. ಜಯಂತಿ, ಅನುಸೂಚಿತಾ ಜಾತಿ ಕ್ಷೇತ್ರದಿಂದ ಲಲಿತ, ಅನುಸೂಚಿತಾ ಪಂಗಡ ಕ್ಷೇತ್ರದಿಂದ ವಿಜಯ ಕೆ.ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 13 ನಿರ್ದೇಶಕ ಸ್ಥಾನಗಳಿಗೆ ಡಿ.10ರಂದು ಚುನಾವಣೆ ಘೋಷಣೆ ಆಗಿತ್ತು ನ.28ರಂದು ನಾಮಪತ್ರ ಸಲ್ಲಿಕೆ ಪ್ರಾರಂಭಗೊಂಡು ಡಿ.2ರಂದು ನಾಮಪತ್ರ ಸಲ್ಲಿಸಲು ಕೊನೆ ದಿನಾಂಕವಾಗಿದ್ದು ಡಿ.4ರಂದು ನಾಮಪತ್ರ ಹಿಂಪಡೆದುಕೊಳ್ಳಲು ಕೊನೆ ದಿನಾಂಕವಾಗಿತ್ತು.
ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿ ಪುತ್ತೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕಛೇರಿಯ ಮಾರಾಟ ಅಧಿಕಾರಿ ಶೋಭಾ ಎನ್.ಎಸ್ ರವರು ಚುನಾವಣಾ ಪ್ರಕ್ರಿಯೆ ನಡೆಸಿ ನಿರ್ದೇಶಕರ ಅವಿರೋಧ ಆಯ್ಕೆಯನ್ನು ಹಾಗೂ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ ಸಹಕರಿಸಿದರು.
ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ
ಡಿ.15ರಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಪಡಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಸ್ ಜಯಂತಿರವರು ಮಾತ್ರ ನಾಮಪತ್ರ ಸಲ್ಲಿಸಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಸ್ ಜಯಂತಿಯವರು ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ.