ನೆಲ್ಯಾಡಿ: ಗೋಳಿತ್ತೊಟ್ಟು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ಪ್ರತಿಭೋತ್ಸವ -2023 ಡಿ.16ರಂದು ನಡೆಯಿತು.
ಗೋಳಿತ್ತೊಟ್ಟು ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಜನಾರ್ದನ ಪಟೇರಿ ಉದ್ಘಾಟಿಸಿದರು. ಗ್ರಾ.ಪಂ.ಉಪಾಧ್ಯಕ್ಷ ಬಾಬು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಅಬ್ದುಲ್ ಕುಂಞಿ, ಕುಶಾಲಪ್ಪ ಗೌಡ ಅನಿಲ, ಕೊರಗಪ್ಪ ಗೌಡ ಕಲ್ಲಡ್ಕ, ಹಸೀನಾ ಪರ್ವಿನ್‌ತಾಜ್, ಬೈಜು ವಿ.ವಿ, ಶುಭ ಹಾರೈಸಿದರು.
ಶಾಲೆಯ ಕ್ರೀಡಾ ಚಾಂಪಿಯನ್ ಆಯಿಷತ್ ತಸ್ರೀಫಾಳಿಗೆ ದಾನಿ ಸೂಫಿ ಇಬ್ರಾಹಿಂರವರು ರೂ.5000 ನಗದು ಬಹುಮಾನ ನೀಡಿ ಗೌರವಿಸಿದರು. ಪದವೀಧರ ಸಹ ಶಿಕ್ಷಕಿ ಮನ್ವಿತ ಡಿ., ಗೌರವ ಶಿಕ್ಷಕಿ ಯಶಸ್ವಿನಿ ಕೆ.ಜಿ. ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಮುಖ್ಯ ಶಿಕ್ಷಕಿ ಜಯಂತಿ ಬಿ.ಎಂ.ವಾರ್ಷಿಕ ವರದಿ ವಾಚಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಗೌಡ ಕುದ್ಕೋಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ತೇಜಸ್ವಿ ಕೆ ವಂದಿಸಿದರು. ಪದವೀಧರ ಸಹ ಶಿಕ್ಷಕ ಅಬ್ದುಲ್ ಲತೀಫ್ ಸಿ., ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಜೋನ್ ಕೆ.ಪಿ. ಕಾರ್ಯಕ್ರಮದ ವ್ಯವಸ್ಥೆ ಮಾಡಿದರು. ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಯಿತು. ನಂತರ ಅಂಗನವಾಡಿ ಮಕ್ಕಳಿಂದ ಮತ್ತು ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪೋಷಕರು, ಎಸ್‌ಡಿಎಂಸಿ ಸದಸ್ಯರು, ಊರ ವಿದ್ಯಾಭಿಮಾನಿಗಳು ಸಹಕರಿಸಿದರು.