ಉಪ್ಪಿನಂಗಡಿ: ಇಲ್ಲಿನ ಕೂಟೇಲು ದರ್ಗಾ ಶರೀಫ್ ಬಳಿ ಮಾದಕ ವಸ್ತುಗಳ ಸಾಗಾಟ ನಿರತನಾಗಿದ್ದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು ಆತನಿಂದ ಮಾದಕ ವಸ್ತು ಮತ್ತಿತರ ಸಾಮಗ್ರಿಗಳನ್ನು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ರಾಜೇಶ್ ಕೆ.ವಿ ಮತ್ತು ಸಿಬ್ಬಂದಿ ವಾಹನ ತಪಾಸಣೆಯಲ್ಲಿ ತೊಡಗಿದಾಗ ಕಾರೊಂದರ ಚಾಲಕನು ವಾಹನವನ್ನು ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದು, ಆತನನ್ನು ತಡೆದು ವಿಚಾರಿಸಲಾಗಿ ಆತನು ಬೆಳ್ತಂಗಡಿ ಇಳಂತಿಲ ಗ್ರಾಮದ ನಿವಾಸಿ ಯಾಸಿರ್ (29) ಎಂಬುದಾಗಿ ತಿಳಿದಿಬಂದಿದ್ದು, ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ಅಂದಾಜು ರೂ 13,000/- ಮೌಲ್ಯದ 6.4 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತು ಪತ್ತೆಯಾಗಿದೆ. ಮಾತ್ರವಲ್ಲದೆ ಕಾರಿನಲ್ಲಿದ್ದ ಚಿಕ್ಕ ಎಲೆಕ್ಟ್ರೋನಿಕ್ ಡಿಜಿಟಲ್ ತೂಕ ಮಾಪನ ಸಾಧನ, 01 ಮೊಬೈಲ್ ಮತ್ತು ಎಂ.ಡಿ.ಎಂ.ಎ ಮಾದಕ ವಸ್ತುವಿನೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.