ಪುತ್ತೂರು : ಪ್ರಗತಿಪರ ದ.ಕ ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ (ಎ.ಐ.ಸಿ.ಸಿ.ಟಿ.ಯು) ಪುತ್ತೂರು ತಾಲೂಕಿನ ಸಮಾವೇಶವು ಡಿ.18 ಮುಖ್ಯರಸ್ತೆ ಅಮರ್ ಸಂಕೀರ್ಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘದ ಕಚೇರಿಯಲ್ಲಿ ನಡೆಯಿತು.
ಸಮಾವೇಶವನ್ನು ಉದ್ದೇಶಿಸಿ ಎ.ಐ.ಸಿ.ಸಿ.ಟಿ.ಯು ದ.ಕ ಜಿಲ್ಲಾ ಅಧ್ಯಕ್ಷ ರಾಮಣ್ಣ ವಿಟ್ಲ ಮಾತನಾಡಿ , ಕಟ್ಟಡ ಕಾರ್ಮಿಕರ ಹಲವಾರು ಹೋರಾಟಗಳ ಮೂಲಕ ಕಲ್ಯಾಣ ಮಂಡಳಿ ರಚನೆಯಾಗಿದೆ. ಆದರೆ ಇಂದಿನ ದಿನಗಳಲ್ಲಿ ಕಲ್ಯಾಣ ಮಂಡಳಿಯ ಹಣವನ್ನು ಕಾರ್ಮಿಕರಿಗೆ ನೀಡಬೇಕಾದ ಸೌಲಭ್ಯಗಳಿಗೆ ನೀಡದೆ, ಇತರ ಉದ್ದೇಶಕ್ಕೆ ಸರಕಾರ ಬಳಕೆ ಮಾಡುತಿದೆ.
ಕಳೆದ ಬಿ.ಜೆ.ಪಿ ಸರಕಾರವು ಕಲ್ಯಾಣ ಮಂಡಳಿಯ ಕೋಟಿಗಟ್ಟಲೆ ಹಣವನ್ನು ಕೊಳ್ಳೆ ಒಡೆದಿದ್ದು , ಇದೀಗ ಕಾಂಗ್ರೆಸ್ ಸರಕಾರ ಕೂಡಾ ಕಲ್ಯಾಣ ಮಂಡಳಿಯ ಹಣವನ್ನು ಇತರ ಉದ್ದೇಶಕ್ಕೆ ಬಳಸುತಿದೆ ಎಂದು ಆರೋಪಿಸಿದ ಅವರು , ವೈದ್ಯಕೀಯ ತಪಾಸಣೆ ಹೆಸರಲ್ಲಿ ಖಾಸಗೀ ಆಸ್ಪತ್ರೆ ಗಳಿಗೆ ನಿಧಿಯನ್ನು ವರ್ಗಾವಣೆ ಮಾಡಲು ಹೊರಟಿದೆಯೆಂದರು.
ಇದರ ವಿರುದ್ಧ ಕಾರ್ಮಿಕರು ಹೋರಾಟ ನಡೆಸ ಬೇಕೆಂದು ಕರೆ ನೀಡಿದರು.
ಅಲ್ಲದೆ ಶೈಕ್ಷಣಿಕ ಧನ ಸಹಾಯ ಹಾಗೂ ಇತರ ಎಲ್ಲಾ ಸೌಲಭ್ಯಗಳನ್ನು ಬಿಡುಗಡೆಗೊಳಿಸಲು ವಿಳಂಬ ವಾಗುತ್ತಿದ್ದು ,ಕಟ್ಟಡ ಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳನ್ನು ಕೂಡಲೇ ಮಂಜೂರು ಗೊಳಿಸಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷತೆಯನ್ನು ಮಹಾವೀರ ಜೈನ್ ವಹಿಸಿದ್ದರು. ಸಭೆಯಲ್ಲಿ ನೂತನ ಪುತ್ತೂರು ತಾಲೂಕು ಸಮಿತಿ ರಚಿಸಲಾಯಿತು.ಅಧ್ಯಕ್ಷರಾಗಿ ಮಹಾವೀರ ಜೈನ್,ಉಪಾದ್ಯಕ್ಷರು ಜಾನಪ್ಪ , ಹರೀಶ್ ಬಳ್ನಾಡ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ಪಡುಮಲೆ, ಜೊತೆ ಕಾರ್ಯದರ್ಶಿ ಗಳು ಅಬ್ದುಲ್ ಖಾದರ್ ,ಸುಬ್ರಾಯ ನಾಯಕ್, ಸಂಘಟನಾ ಕಾರ್ಯದರ್ಶಿ ಹರೀಶ್ ಬುಳೆರಿಕಟ್ಟೆ, ಕೋಶಧಿಕಾರಿ ಕೃಷ್ಣಪ್ಪ ನಾಯ್ಕ ಮಚ್ಚಿಮಳೆ,ಹಾಗೂ ಇತರೆ 27 ಜನ ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಯಿತು.