ಕಾಂಗ್ರೆಸ್ ಪ್ರತೀ ಕುಟುಂಬಕ್ಕೂ ಶಕ್ತಿ ನೀಡುತ್ತಿದೆ: ಕಾಂಗ್ರೆಸ್ ಬೆಂಬಲಿಸಿ ,ಆಶೀರ್ವದಿಸಿ: ಶಾಸಕರ ಮನವಿ
ಪುತ್ತೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದೆ. ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಸೇವೆ, ಪ್ರತೀ ಮಹಿಳೆಯರಿಗೆ ತಿಂಗಳಿಗೆ 2000 ,ಯುವನಿಧಿ ಮತ್ತು ಪಡಿತರ ಹಣವನ್ನು ಪ್ರತೀ ಬಿಪಿಎಲ್ ಕುಟುಂಬಕ್ಕೆ ನೀಡಿದೆ,ಇದುವರೆಗೆ ಬಂದ ಸರಕಾರ ಯಾವ ಕೊಡುಗೆಯನ್ನೂ ನೀಡಿಲ್ಲ, ಕಾಂಗ್ರೆಸ್ ಕೊಟ್ಟ ಮಾತನ್ನು ಎಂದೂ ತಪ್ಪುವುದಿಲ್ಲ, ನಗರಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಮತದಾರರಲ್ಲಿ ಶಾಸಕರಾದ ಅಶೋಕ್ ರೈ ಮನವಿ ಮಾಡಿದರು.
ಒಂದನೇ ವಾರ್ಡು ವ್ಯಾಪ್ತಿಯ ನೆಹರೂ ನಗರದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ಪುತ್ತೂರು ನಗರಸಭೆಯ ಪ್ರತೀ ವಾರ್ಡುಗಳಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತೇವೆ, ನಗರಸಭಾ ವ್ಯಾಪ್ತಿಯಲ್ಲಿ ದಿನದ 24 ಗಂಟೆಯೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಕುರಿತು ಈಗಾಗಲೇ 1000 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದ ಶಾಸಕರು ನಗರಸಭಾ ವ್ಯಾಪ್ತಿಯಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯಲಿದೆ ಎಂದು ಹೇಳಿದರು.
ಬಡವರ ಪರ ಇರುವ ಕಾಂಗ್ರೆಸ್ ಎಂದಿಗೂ ಅಭಿವೃದ್ದಿಯ ಪರವೇ ಆಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನುಡಿದಂತೆ ನಡೆಯುವ ಸಿಎಂ. ಕಾಂಗ್ರೆಸ್ ವಿರುದ್ದ ಅಪಪ್ರಚಾರ ಮಾಡುವವರಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಬಗ್ಗೆ ತಿಳಿಸಿ. ಪ್ರತೀ ಕುಟುಂಬಕ್ಕೂ 200 ಯುನಿಟ್ ಉಚಿತ ವಿದ್ಯುತ್ ನೀಡುತ್ತಿರುವುದು ದೇಶದಲ್ಲೇ ಮೊದಲ ಯೋಜನೆಯಾಗಿದೆ. ಮಹಿಳೆಯರು ಇಡೀ ರಾಜ್ಯಾದ್ಯಂತ ಸರಕಾರಿ ಬಸ್ ನಲ್ಲಿ ಉಚಿತ ಸಂಚಾರ ಮಾಡಬಹುದಾಗಿದೆ. ಪುತ್ತೂರಿಗೆ ಕೆಎಂಎಫ್ ಯೋಜನೆಯನ್ನು ತರುವ ಮೂಲಕ ಪುತ್ತೂರಿನ ಯುವಕರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡಲಿದೆ. 94 ಸಿ ಮತ್ತು ಸಿ ಸಿ ಯಾವುದೇ ಭ್ರಷ್ಠಾಚಾರವಿಲ್ಲದೆ ನೀಡಲಾಗುತ್ತಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಜನ ನೆಮ್ಮದಿಯಿಂದ ಇದ್ದಾರೆ.ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೊಡುಗೆ ಅನುದಾನವನ್ನು ನೀಡುವ ಮೂಲಕ ಅಭಿವೃದ್ದಿ ಕಾರ್ಯಗಳು ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಮುರಳೀಧರ್ ರೈ ಮಟಂತಬೆಟ್ಟು, ಚಂದ್ರಹಾಸ ಶೆಟ್ಟಿ, ಕೃಷ್ಣಪ್ರಸಾದ್ ಳ್ವ, ರೋಶನ್ ರೈ ಬನ್ನೂರು,ರಾಧಾಕೃಷ್ಣ ನಾಯ್ಕ್, ಜಯಪ್ರಕಾಶ್ ಬದಿನಾರ್, ರಂಜಿತ್ ಬಂಗೇರ,ಈಶ್ವರ ಭಟ್ ಪಂಜಿಗುಡ್ಡೆ, ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ರಾಮಣ್ಣ ಪಿಲಿಂಜ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು,ಕಾರ್ಯಕರ್ತರು ಉಪಸ್ಥಿತರಿದ್ದರು. ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದಾಲಿ ಸ್ವಾಗತಿಸಿದರು.