ಸವಣೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆ

0

ಸವಣೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ಬೆಳ್ಳಾರೆ ಇವರ ನೇತೃತ್ವದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬೆಳ್ಳಾರೆ ಪೋಲೀಸ್ ಠಾಣೆಯ ಪೊಲೀಸ್ ಸಬ್‌ಇನ್ಸ್ ಪೆಕ್ಟರ್ ಸಂತೋಷ್ ಬಿ ವಿ ಅವರು, ರಸ್ತೆ ಸುರಕ್ಷತೆಯ ಬಗ್ಗೆ ಹೇಳುತ್ತಾ ನಮ್ಮ ಸುರಕ್ಷತೆಗಾಗಿ ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಸಲಹೆಯನ್ನು ನೀಡಿದರು.

ಮಾದಕ ದ್ರವ್ಯಗಳ ಬಳಕೆಯ ವಿರುದ್ಧ ಅರಿವನ್ನು ಮೂಡಿಸುತ್ತಾ ಮಾದಕ ದ್ರವ್ಯಕ್ಕೆ ವ್ಯಸನಿಯಾದ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಾಗಾಗುವುದರ ಮೂಲಕ ತನ್ನ ಬಾಂಧವ್ಯವನ್ನು ಮರೆತು ಬಿಡುತ್ತಾನೆ ಮಾತ್ರವಲ್ಲದೆ ಸಾಮಾಜಿಕ ಸ್ವಾಸ್ಥ್ಯವನ್ನು ಕೂಡಾ ಕೆಡಿಸುತ್ತಾನೆ ಎಂದರು. ಸೈಬರ್ ಕ್ರೈಮ್ ಬಗ್ಗೆ ವಿವರಿಸುತ್ತಾ ಮೊಬೈಲ್ ಬಳಸುವಾಗ, ಹಾಗೂ ಅಪರಿಚಿತ ವ್ಯಕ್ತಿಗಳ ಜೊತೆ ವ್ಯವಹರಿಸುವಾಗ ಜಾಗೃತೆಯಿಂದ ವ್ಯವಹರಿಸುವಂತೆ ಸೂಚನೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರನ್ನು ಸಂಸ್ಥೆಯ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ. ಸ್ವಾಗತಿಸಿ, ಉಪಪ್ರಾಂಶುಪಾಲಾರಾದ ಶೇಷಗಿರಿ ಎಂ ವಂದಿಸಿದರು. ಈ ಸಂದರ್ಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಸ್ಥೆಯ ರಾಜ್ಯಶಾಸ್ತ್ರ ಉಪನ್ಯಾಸಕ ಕಿರಣಚಂದ್ರ ರೈ ಬಿ ಇವರು ಹಿಂಸೆಯಿಂದ ಸಮಾಜ ಕಟ್ಟುವ ಬದಲು ಅಹಿಂಸೆಯಿಂದ ಸಮಾಜ ಕಟ್ಟುವುದು ಸುಲಭವೆಂಬ ಗಾಂಧೀಜಿಯ ತತ್ವವನ್ನು ನೆನಪಿಸಿಕೊಂಡರು. ತೃತೀಯ ಬಿ.ಎ ವಿದ್ಯಾರ್ಥಿಯಾದ ಶಮೀ‌ರ್ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿಯರಾದ ಅಭಿಜ್ಞಾ ಮತ್ತು ಶ್ರಾವ್ಯವಾಣಿ ಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಈ ಸಂದರ್ಭದಲ್ಲಿ ಠಾಣಾ ಸಿಬ್ಬಂದಿಗಳಾದ ಚೇತನ್, ಸುಭಾನ್, ಪುರಂದರ್ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here