ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ನಲ್ಲಿ ‘ವಿಂಟರ್ ಡಿಲೈಟ್ ಡೈಮಂಡ್ ಫೆಸ್ಟಿವಲ್’ ಆರಂಭಗೊಂಡಿದ್ದು, ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಸಂಸ್ಥೆ ನೀಡುತ್ತಿದೆ.
ಸುಂದರ ಮತ್ತು ತೇಜಸ್ಸಿನ ಸಾರವನ್ನು ಒಳಗೊಂಡಿರುವ, ವಜ್ರಗಳ ವಿಶಾಲ ಮತ್ತು ಸೊಗಸಾದ ಸಂಗ್ರಹಗಳ ಪ್ರದರ್ಶನ ಮತ್ತು ಮಾರಾಟ ಈ ಫೆಸ್ಟಿವಲ್‌ನ ವಿಶೇಷತೆಯಾಗಿದೆ.
50,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರಗಳ ಆಭರಣ ಖರೀದಿ ವೇಳೆ ಚಿನ್ನದ ನಾಣ್ಯ ಉಡುಗೊರೆಯಾಗಿ ದೊರೆಯಲಿದೆ. ಹೆಚ್ಚುವರಿಯಾಗಿ ಡೈಮಂಡ್ ಆಭರಣಗಳ ಮೇಲೆ ಶೇ.25ರ ವರೆಗೆ ರಿಯಾಯಿತಿ ಮತ್ತು ಪ್ಲಾಟಿನಂ ಮೇಲೆ ಶೇ.7 ರಿಯಾಯಿತಿ ದೊರೆಯಲಿದೆ. ಜೋಸ್ ಅಲುಕ್ಕಾಸ್ ಗ್ರಾಹಕರು ತಮ್ಮ ಹಳೆಯ ಚಿನ್ನಾಭರಣವನ್ನು ವಜ್ರದ ಆಭರಣಗಳಿಗಾಗಿ ಎಕ್ಸ್‌ಚೇಂಜ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಈ ಸಂದರ್ಭದಲ್ಲಿಯೂ ಗ್ರಾಹಕರಿಗೆ ಉತ್ತಮ ರಿಯಾಯಿತಿಯನ್ನು ಸಂಸ್ಥೆ ನೀಡಲಿದೆ.
ಡೈಮಂಡ್ ಫೆಸ್ಟಿವಲ್, ಜೋಸ್ ಆಲುಕ್ಕಾಸ್ ನ ಹೊಸ ವರ್ಷಾಚರಣೆಯ ಸಂಭ್ರಮದ ಕೊಡುಗೆಯಾಗಿದೆ. ಈ ಫೆಸ್ಟಿವಲ್‌ನ ಆಕರ್ಷಣೆ ಎಂದರೆ ಹೊಸದಾಗಿ ಪರಿಚಯಿಸಲಾದ “ನಿತ್ಯಾರ” ಪ್ರೀಮಿಯಂ ಡೈಮಂಡ್‌ಗಳ ಸಂಗ್ರಹವಾಗಿದೆ. ಈ ಫೆಸ್ಟಿವಲ್ ನಲ್ಲಿ ವಜ್ರದ ಅಮೋಘವಾದ ಹೊಸ ಸಂಗ್ರಹವನ್ನು ಅನಾವರಣ ಗೊಳಿಸಲಾಗುತ್ತಿದೆ. ಈ ಕೊಡುಗೆಯು ಜೋಸ್ ಆಲುಕ್ಕಾಸ್ ಚಿನ್ನಾಭರಣ ಸಂಸ್ಥೆಯ ಎಲ್ಲಾ ಮಳಿಗೆಯಲ್ಲಿಯೂ ಲಭ್ಯವಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪುತ್ತೂರು ಶಾಖೆಯ ದೂರವಾಣಿ ಸಂಖ್ಯೆ 08251 298526 ಯನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.