ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ

0

ಪುತ್ತೂರು: ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು ಇದರ 6ನೇ ವಾರ್ಷಿಕೋತ್ಸವವು ವಿಜೃಂಭಣೆಯಿಂದ ಡಿ.20ರಂದು ಜರುಗಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ಬುಡಿಯಾರ್ ರಾಧಾಕೃಷ್ಣ ರೈ ಇವರು “ಮಾಯಿದೆ ದೇವುಸ್ ಸಂಸ್ಥೆಗಳಲ್ಲಿ ಒಂದಾದ ಸಂತ ಫಿಲೋಮಿನಾ ಶಾಲೆಯ ಶಿಕ್ಷಣ ಪದ್ಧತಿಯು ಉತ್ತಮವಾಗಿದೆ” ಎಂದು ಶ್ಲಾಘಿಸಿದರು


ಇನ್ನೋರ್ವ ಮುಖ್ಯ ಅತಿಥಿ ಕಡಮಜಲು ಸುಭಾಸ್ ರೈ “ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಉತ್ತಮವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು” ಎಂದು ತಿಳಿಸಿದರು .


ಗೌರವ ಅತಿಥಿಯಾಗಿ ಆಗಮಿಸಿದ ವಂದನೀಯ ಗುರು ಸ್ಟ್ಯಾನಿ ಪಿಂಟೊ ಇವರು ಹಲವು ಕ್ರೀಡೆಗಳಲ್ಲಿ ಭಾಗವಹಿಸಿ, ವಿವಿಧ ಹಂತಗಳಲ್ಲಿ ಆಯ್ಕೆಯಾಗಿ ವಿಜೇತರಾದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಮಾತನಾಡಿ ” ವ್ಯವಸ್ಥಿತವಾದ ಶಾಲಾ ಪರಿಸರ ವಿದ್ಯಾರ್ಥಿಗಳಲ್ಲಿರುವ ಕೌಶಲಗಳನ್ನು ಗುರುತಿಸಲು ಪೂರಕ” ಎಂದರು .


ಅತೀ ವಂದನೀಯ ಗುರುಗಳಾದ ಲಾರೆನ್ಸ್ ಮಸ್ಕರೇನ್ಹಸ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ತಾಯಿಯ ಪಾತ್ರ ಎಷ್ಟು ಮುಖ್ಯವೋ ತಂದೆಯ ಪಾತ್ರವು ಅಷ್ಟೇ ಮುಖ್ಯ ಎಂದು ಪೋಷಕರಿಗೆ ಮನವರಿಕೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಬುಡಿಯಾರ್ ರಾಧಾಕೃಷ್ಣ ರೈ ,ಶ್ರೀ ಕಡಮಜಲು ಸುಭಾಸ್ ರೈ, ನಿವೃತ ಶಿಕ್ಷಕಿ ಮೇರಿ ಫುಡ್ತಾದೊ, ಈಜಿನಲ್ಲಿ ವಿಶೇಷ ಸಾಧನೆಗೈದ 7ನೇ ತರಗತಿಯ ಲಿಖಿತ್ ರಾಮಚಂದ್ರ, ವೇದಿಕೆಯಲ್ಲಿದ್ದ ಗಣ್ಯರಿಗೂ, ಶಾಲಾ ಕಟ್ಟಡ ನವೀಕರಣಕ್ಕೆ ಹಾಗೂ ವಾರ್ಷಿಕೋತ್ಸವಕ್ಕೆ ಕೊಡುಗೆ ನೀಡಿದ ಪೋಷಕರಿಗೂ, ಮತ್ತು ಶಾಲಾಭಿಮಾನಿಗಳಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಮನೋರಂಜನಾ ನೃತ್ಯಗಳಾದ ಕನ್ನಡ ನಾಡ ಸೊಬಗು, ತುಳುನಾಡ ವೈಭವ, ಸಿನಿಮೀಯ ನೃತ್ಯ ,ಕ್ರಿಸ್ಮಸ್ ಸಂದೇಶ ಸಾರುವ ಟ್ಯಾಬ್ಲೊ, ಮೌಲ್ಯಾಧಾರಿತ ನೃತ್ಯಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.


ಶಾಲಾ ಮುಖ್ಯೋಪಾಧ್ಯಾಯಿನಿ ಸಿ|ಲೋರಾ ಪಾಯ್ಸ್ ಇವರು ಶಾಲಾ ಚಟುವಟಿಕೆಗಳ ವರದಿಯನ್ನು ಮಂಡಿಸಿದರು.ಜ್ಯಾಸ್ಮಿನ್ ಗೋವಿಯಸ್ ಇವರು ಅತಿಥಿಗಳನ್ನು ಪರಿಚಯಿಸಿದರು. ಸರಿತಾ ಗೊನ್ಸಾಲ್ವಿಸ್ ,ಮರಿಯ ಪ್ರಿಯ ಸ್ವಾಗತಿಸಿ, ದೀಪ್ತಿ ದಲ್ಮೇದಾ ವಂದಿಸಿದರು. ರೀನಾ ಸೆರಾವೊ,ಮರಿಯಾ ಡಿಕೋಸ್ಟಾ ಮತ್ತು ಸುನಿತಾ ಸಿಲ್ವಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here