ನೆಹರುನಗರ: ಓಮ್ನಿ- ಕಾರು ಡಿಕ್ಕಿ

0

ಯಕ್ಷಗಾನ ಕಲಾವಿದರು ಸಹಿತ ನಾಲ್ವರಿಗೆ ಗಾಯ


ಪುತ್ತೂರು: ನೆಹರುನಗರ ಸಮೀಪದ ಕಲ್ಲೇಗದಲ್ಲಿ ಮಾರುತಿ ಓಮ್ನಿ ಮತ್ತು ಆಲ್ಟೋ ಕಾರು ನಡುವೆ ಡಿ.20ರ ತಡ ರಾತ್ರಿ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಮಾರುತಿ ಓಮ್ನಿಯಲ್ಲಿದ್ದ ಯಕ್ಷಗಾನ ಕಲಾವಿದರು ಸಹಿತ ನಾಲ್ವರು ಗಾಯಗೊಂಡ ಬಗ್ಗೆ ವರದಿಯಾಗಿದೆ.


ಯಕ್ಷಗಾನ ಕಾರ್ಯಕ್ರಮ ಮುಗಿಸಿ ಪುತ್ತೂರಿಗೆ ಬರುತ್ತಿದ್ದ ಕಲಾವಿದರು ಇದ್ದ ಮಾರುತಿ ಓಮ್ನಿ ಮತ್ತು ವಿರುದ್ಧ ಧಿಕ್ಕಿನಿಂದ ಮಂಗಳೂರು ತೆರಳುತ್ತಿದ್ದ ಆಲ್ಟೋ ಕಾರು ನಡುವೆ ನೆಹರುನಗರ ಕಲ್ಲೇಗ ಸಮೀಪ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಆಲ್ಟೋ ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿ ಪಾರ್ಕ್ ಮಾಡಿದ್ದ ಖಾಸಗಿ ಬಸ್‌ಗೂ ಡಿಕ್ಕಿಯಾಗಿದೆ ಎನ್ನಲಾಗಿದೆ. ಮಾರುತಿ ಓಮ್ನಿಯಲ್ಲಿದ್ದ ಮೂವರು ಯಕ್ಷಗಾನ ಕಲಾವಿದರು ಮತ್ತು ಆಲ್ಟೋದಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಗಾಯವಾಗಿದೆ. ತೀವ್ರ ಗಾಯಗೊಂಡ ಆಲ್ಟೋದಲ್ಲಿ ಪ್ರಯಾಣಿಕರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here