ಈಶ್ವರಮಂಗಲಕ್ಕೆ ಕಾಡಾನೆ ಪುರಪ್ರವೇಶ-ನೂಜಿಬೈಲಿನ ತೋಟಕ್ಕೆ ಕಾಡಾನೆ ಲಗ್ಗೆ-ತೆಂಗಿನಮರ ಗಿಡಗಳಿಗೆ ಹಾನಿ

0

ಪುತ್ತೂರು: ಪುತ್ತೂರು, ಕಡಬ ತಾಲೂಕಿನ ಹಲವೆಡೆ ಆನೆ ದಾಳಿ ಪ್ರಕರಣಗಳು ಮೇಲಿಂದ ಮೇಲೆ ನಡೆದಿದ್ದು ಮೊದಲ ಬಾರಿಗೆ ಈಶ್ವರಮಂಗಲ ಭಾಗಕ್ಕೆ ಗಜ ಪ್ರವೇಶವಾಗಿದೆ. ಈಶ್ವರಮಂಗಲದ ನೂಜಿಬೈಲು ಮೋಹನ್‌ದಾಸ್‌ ಶೆಟ್ಟಿ ಎಂಬವರ ತೋಟಕ್ಕೆ ಆನೆ ದಾಳಿ ಮಾಡಿದ್ದು, ಫಲವತ್ತಾದ ತೆಂಗಿನ ಗಿಡಗಳಿಗೆ ಹಾನಿ ಮಾಡಿದೆ.

ಮೋಹನ್‌ದಾಸ್‌ ಶೆಟ್ಟಿಯವರ ತೋಟಕ್ಕೆ ರಾತ್ರಿ ವೇಳೆ ನುಗ್ಗಿದ ಆನೆ ಅಲ್ಲಿನ ತೆಂಗಿನಮರ ಮತ್ತು ಸಸಿಗಳಿಗೆ ಹಾನಿ ಮಾಡಿದೆ. ಮಾತ್ರವಲ್ಲ ತೆಂಗಿನ ಗಿಡವೊಂದನ್ನು ಬುಡ ಸಮೇತ ಕಿತ್ತು ಹಾಕಿದೆ. ಬೆಳಿಗ್ಗೆ ಈ ಘಟನೆ ಗಮನಕ್ಕೆ ಬಂದಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಇದು ಒಂಟಿ ಸಲಗದ ಕೃತ್ಯವೆಂದು ಅಂದಾಜಿಸಿದ್ದಾರೆ. ತೆಂಗಿನ ಮರ ಗಿಡಗಳಿಗೆ ಹಾನಿ ಮಾಡಿದ ಬಳಿಕ ಸಮೀಪದ ಪೆರ್ನಾಜೆ ಕಾಡಿನತ್ತ ಆನೆ ತೆರಳಿರಬಹುದೆಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಈ ಭಾಗದಲ್ಲಿ ಮೊದಲ ಬಾರಿ ಆನೆ ದಾಳಿ ನಡೆಸಿದ್ದು, ಸ್ಥಳೀಯರಲ್ಲಿ ಭಯ ಮತ್ತು ಆತಂಕ ಸೃಷ್ಟಿಯಾಗಿದೆ.

LEAVE A REPLY

Please enter your comment!
Please enter your name here