ಪುತ್ತೂರು ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘ

0

ಅಧ್ಯಕ್ಷರಾಗಿ ಅಮರನಾಥ ಗೌಡ ಬಪ್ಪಳಿಗೆ, ಕಾರ್ಯದರ್ಶಿಯಾಗಿ ಆನಂದ ಗೌಡ ತೆಂಕಿಲ, ಕೋಶಾಧಿಕಾರಿಯಾಗಿ ಪ್ರಶಾಂತ್ ಕೆಮ್ಮಾಯಿ

ಪುತ್ತೂರು: ಪುತ್ತೂರು ತಾಲೂಕು 2024-25ನೇ ಸಾಲಿನ ಯುವ ಒಕ್ಕಲಿಗ ಗೌಡ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಅಮರನಾಥ ಗೌಡ ಬಪ್ಪಳಿಗೆ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಗೌಡ ತೆಂಕಿಲ, ಗೌರವ ಅಧ್ಯಕ್ಷರಾಗಿ ರಾಧಾಕೃಷ್ಣ ನಂದಿಲ, ಕೋಶಾಧಿಕಾರಿಯಾಗಿ ಪ್ರಶಾಂತ್ ಕೆಮ್ಮಾಯಿ ಅವರು ಆಯ್ಕೆಗೊಂಡಿದ್ದಾರೆ.


ಇತ್ತೀಚೆಗೆ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ ಅವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕ್ರೀಡಾ ಕಾರ್ಯದರ್ಶಿಯಾಗಿ ಪವನ್ ದೊಡ್ಡಮನೆ ಪೆರ್ಲಂಪಾಡಿ, ಉಪಾಧ್ಯಕ್ಷರಾಗಿ ಯತೀಂದ್ರ ಕೊಚ್ಚಿ, ಮತ್ತು ಬಾಲಚಂದ್ರ ಬೆಳ್ಳಿಪ್ಪಾಡಿ, ಜೋತೆ ಕಾರ್ಯದರ್ಶಿಯಾಗಿ ಲೋಕೇಶ್ ಗೌಡ ಪುಳಿತ್ತಡಿ, ಕೇಶವ ಗೌಡ ಕನ್ನಾಯ, ಸಂಘಟನಾ ಕಾರ್ಯದರ್ಶಿಯಾಗಿ ಪೂವಪ್ಪ ಗೌಡ ದೇಂತಡ್ಕ ಪಡ್ನೂರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಕುಂಬ್ರ, ಕಾರ್ಯಕಾರಿ ಸಮಿತಿ ಸದಸ್ಯರರಾಗಿ ಬಾಲಕೃಷ್ಣ ಗೌಡ ಕೊಳ್ತಿಗೆ, ವಸಂತ ಗೌಡ ವೀರಮಂಗಲ, ಧೀರಜ್ ಕೊಡಿಪ್ಪಾಡಿ, ರವೀಂದ್ರ ಗೌಡ , ಹಿರೇಬಂಡಾಡಿ, ದೀಪಕ್ ಗೌಡ ಮುಂಡ್ಯ ನೆಟ್ಟನಿಗೆ, ಯುವರಾಜ್ ಪೆರಿಯತ್ತೋಡಿ, ಗೌರವ್ ಸಲಹೆಗಾರರಾಗಿ ಮಾದವ ಗೌಡ ಪೆರಿಯತ್ತೋಡಿ, ವಿಶ್ವನಾಥ ಗೌಡ ಬನ್ನೂರು, ಮುಕುಂದ ಬಜತ್ತೂರು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ಸಭೆಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಇದರ ಹಿರಿಯ ಪಧಾದೀಕಾರಿಗಳು ಹಾಜರಿದ್ದರು. ನೂತನವಾಗಿ ಆಯ್ಕೆಯಾದ ಯುವ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಡಿ.24ರಂದು ಒಕ್ಕಲಿಗ ಸಮುದಾಯದ ಭವನದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here