ಆಲಂಕಾರು:ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಚೌತಿ,ಪಂಚಮಿ,ಷಷ್ಠಿ ಉತ್ಸವವು ಡಿ.16 ರಿಂದ ಡಿ.18 ರ ತನಕ ನಡೆಯಿತು. ಡಿ. 16 ರಂದು ಚೌತಿಯಂದು ಗಣಪತಿ ಹೋಮ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ,ಶಿವಾರು ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಮತ್ತು ಕುಂತೂರು ಶ್ರೀ ಶಾರದಾ ಭಜನಾ ಮಂಡಳಿ ಯವರಿಂದ ಭಜನಾ ಕಾರ್ಯಕ್ರಮ ಮಧ್ಯಾಹ್ನ ಮಹಾಪೂಜೆ,ಅನ್ನಸಂತರ್ಪಣೆ ನಡೆದು ರಾತ್ರಿ ನಾಟ್ಯರಾಧಾನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ನಾಟ್ಯ ನಿನಾದ ಕಾರ್ಯಕ್ರಮ ನಡೆದು ರಂಗಪೂಜೆ, ಪ್ರಸಾದ ವಿತರಣೆ ನಡೆಯಿತು.
ಡಿ. 17 ರಂದು ಪಂಚಮಿಯಂದು ಉತ್ಸವ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸರ್ವಸೇವೆ,ನಾಗಾರಾಧನೆ, ಮಹಾಪೂಜೆ,ಅನ್ನಸಂತರ್ಪಣೆ,ಆದಿಶಕ್ತಿ ಭಜನಾ ಮಂಡಳಿ ಶರವೂರು, ಪಾಂಡುರಂಗ ಭಜನಾ ಮಂಡಳಿ ಮನವಳಿಕೆ ಯವರಿಂದ ಭಜನಾ ಕಾರ್ಯಕ್ರಮ ನಡೆದು ಮಹಾಪೂಜೆ ಅನ್ನಸಂತರ್ಪಣೆ ನಡೆಯಿತು.ರಾತ್ರಿ ಬೀಟ್ ವಾರಿಯರ್ಸ್ ಡ್ಯಾನ್ಸ್ ಕ್ರೀವ್ ಆಲಂಕಾರು ಇವರಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ, ರಂಗಪೂಜೆ ನಡೆಯಿತು.
ದಿ.18 ರಂದು ಷಷ್ಠಿಯಂದು ಉತ್ಸವ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ನವಕಲಶಾಭಿಷೇಕ,ಸರ್ವಸೇವೆ,ಮಂತ್ರಕ್ಷತೆ,ಬ್ರಾಹ್ಮಣ ಸುಹಾಸಿನಿ ಆರಾಧನೆ ,ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ದೇವರಗುಡ್ಡೆ ಮತ್ತು ,ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಭಾರತೀ ಶಾಖೆ ಆಲಂಕಾರಿನ ಯೋಗಬಂಧುಗಳಿಂದ ಭಜನಾ ಕಾರ್ಯಕ್ರಮ ನಡೆದು ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.ಅಗಮಿಸಿದ ಷಷ್ಠೀ ವೃತದಾರಿಗಳು ಹಾಗು ಭಕ್ತಾಧಿಗಳು ಸೇವೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆ ಯಲ್ಲಿ ಪಾಲ್ಗೊಂಡರು.ಕಾರ್ಯಕ್ರಮದಲ್ಲಿ ವಿವಿಧ ಸಮಿತಿಯ ಪದಾಧಿಕಾರಿಗಳು ಹಾಗು ಭಕ್ತಾಧಿಗಳು ಸಹಕರಿಸಿದರು.