ಪುತ್ತೂರು: ಕಳೆದ 19 ವರ್ಷಗಳಿಂದ ತುಳು ರಂಗಭೂಮಿಯಲ್ಲಿ ತನ್ನದೇ ಛಾಪು ಮೂಡಿಸಿರುವ ಸಂಸಾರ ಕಲಾವಿದೆರ್, ಪುತ್ತೂರು ಇವರ 14 ನೇ ಕಲಾ ಕಾಣಿಕೆ ತುಳು ಭಕ್ತಿಪ್ರದಾನ ಸಾಮಾಜಿಕ ನಾಟಕ ನಂಬಿಕೆದಾಯೆ ಡಿ.23 ಶನಿವಾರ ರಾತ್ರಿ 10 ಗಂಟೆಗೆ ಸರಿಯಾಗಿ ಸ. ಉ. ಹಿ. ಪ್ರಾಥಮಿಕ ಶಾಲೆ, ಉಜಿರುಪಾದೆ, ಬಲ್ನಾಡು ಇಲ್ಲಿನ ಶಾಲಾ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರದರ್ಶನಗೊಳ್ಳಲಿದೆ.
‘ರಂಗಚಾಣಕ್ಯ’ ರಾಘವೇಂದ್ರ ಕಾರಂತ್ ಮೊಗರ್ನಾಡು ನಾಟಕ ರಚಿಸಿದ್ದು, ತಂಗವೇಲು ಬಿ. ಸಿ. ರೋಡ್ ಸಂಗೀತ ನೀಡಲಿದ್ದಾರೆ. ಸಂಗಮ್ ಡ್ಯಾನ್ಸ್ ಅಕಾಡೆಮಿ ಮಾಲಕ ಪ್ರಶಾಂತ್ ಮಿತ್ತೂರು ಇವರ ಸಂಪೂರ್ಣ ಸಹಕಾರವಿದ್ದು, ಕಲಾವಿದರುಗಳಾಗಿ ಬಾಲಕೃಷ್ಣ ಗೌಡ ಪೋಳ್ಯ, ಮೇಧಾವಿ ಕುಲಾಲ್ ಮೊಡ೦ತ್ಯಾರ್, ಕೆ. ಟಿ. ಆನಂದ ವಿಟ್ಲ, ರಾಮಕೃಷ್ಣ ಪಾಟಾಲಿ ಪಡುಮಲೆ, ಅಣ್ಣಿ ಪೂಜಾರಿ ಅನಂತಿಮಾರ್, ಗಣರಾಜ್ ಭಂಡಾರಿ ಬನ್ನೂರು, ಅಕ್ಷಯ್ ಕೆಮ್ಮಾಯಿ, ಜೈದೀಪ್ ರೈ ಕೋರಂಗ, ರಕ್ಷಿತ್ ರೈ ತೊಟ್ಲ, ಗಂಗಾಧರ್ ನಾಯ್ಕ ಕಾವು, ಶ್ರೀಮತಿ ಮೋಹಿನಿ ಯಾದವ್, ಡಿ . ಕೆ.ಶ್ರೀಧರ ಪೂಜಾರಿ ಕಲ್ಲೇಗ, ರಂಜಿತ್ ಶೆಟ್ಟಿ ದೇವಸ್ಯ , ಕು.ಅಕ್ಷೇತ ಮಾಪಳ, ಕು. ಪ್ರಿಯಶ್ರೀ ಸಾಲ್ಯಾನ್ ಮತ್ತು ಅಖಿಲೇಶ್ ಶೆಟ್ಟಿ ಬೀರ್ನಹಿತ್ಲು ಅಭಿನಯಿಸಲಿದ್ದಾರೆ ಎಂದು ತಂಡದ ಸಂಚಾಲಕ ಬಾಲಕೃಷ್ಣ ಗೌಡ ಪೋಳ್ಯ ತಿಳಿಸಿರುತ್ತಾರೆ.