ನೆಲ್ಯಾಡಿ: ಎಮಿರೇಟ್ಸ್ ಕ್ರಿಕೆಟ್ ತಂಡದ ಜೆರ್ಸಿ ಅನಾವರಣ

0

ನೆಲ್ಯಾಡಿ: ನೆಲ್ಯಾಡಿಯ ಎಲೈಟ್ ಒಳಾಂಗಣ ಕೋರ್ಟ್‌ನಲ್ಲಿ ಡಿ.20ರ ಸಂಜೆ ನಡೆದ ಸರಳ ಸಮಾರಂಭದಲ್ಲಿ ನೆಲ್ಯಾಡಿಯ ಪ್ರತಿಭಾವಂತ ಕ್ರಿಕೆಟ್ ಆಟಗಾರರ ಎಮಿರೇಟ್ಸ್ ಕ್ರಿಕೆಟ್ ಕ್ಲಬ್ ಇದರ ಜೆರ್ಸಿ ಅನಾವರಣ ಮಾಡಲಾಯಿತು.


ಈ ವೇಳೆ ಮಾತನಾಡಿದ ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನ ಧರ್ಮಗುರು ಫಾ.ಶಾಜಿ ಮ್ಯಾಥ್ಯುರವರು, ನೆಲ್ಯಾಡಿಯ ಸೌಹಾರ್ದ ವಾತಾವರಣಕ್ಕೆ ಕ್ರೀಡೆಯ ಕೊಡುಗೆ ಬಹು ದೊಡ್ಡದಾಗಿದ್ದು ಶಾಂತಿ, ಸಹಕಾರ, ಪರಸ್ಪರ ವಿಶ್ವಾಸ ಬೆಳೆಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಹಾಗೆಯೇ ಯುವ ಜನರು ದುಶ್ಚಟಗಳಿಗೆ ಬಲಿಯಾಗದಂತೆ ತಡೆಯುವ ಶಕ್ತಿ ಕ್ರೀಡೆಗೆ ಇದೆ ಎಂದು ಹೇಳಿದರು.


ಎಲೈಟ್‌ನ ಇಂಡಸ್ಟ್ರೀಸ್ ಮಾಲಕ ಶಾಜಿ ವರ್ಗೀಸ್, ಶಿಬು ವರ್ಗೀಸ್, ಸಮಂತ್ ಕುಮಾರ್ ಬಸ್ತಿ, ಎಮಿರೇಟ್ಸ್ ತಂಡದ ಮಾಲಕ ಸಾದಿಕ್ ನೆಲ್ಯಾಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನವಾಸ್ ಕೋಲ್ಪೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here