ಸರ್ವೆ ಷಣ್ಮುಖ ಯುವಕ ಮಂಡಲದ ವತಿಯಿಂದ ಭಕ್ತಕೋಡಿ ಸ.ಹಿ.ಪ್ರಾ.ಶಾಲಾ ವಠಾರದಲ್ಲಿ ಸ್ವಚ್ಚತಾ ಶ್ರಮದಾನ

0

ಪುತ್ತೂರು: ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ ಇದರ ವತಿಯಿಂದ ಭಕ್ತಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆಯ ಸುತ್ತಮುತ್ತ ಸ್ವಚ್ಚತಾ ಶ್ರಮದಾನ ನಡೆಸಲಾಯಿತು.

ಹುಲ್ಲು, ಪೊದೆ ಬೆಳೆದು ವಿಷ ಜಂತುಗಳ ಆವಾಸ ಸ್ಥಾನವಾಗುವ ರೀತಿಯಲ್ಲಿದ್ದ ಈ ಪ್ರದೇಶದ ಸುತ್ತಮುತ್ತ ಇದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಚಗೊಳಿಸಲಾಯಿತು. ಷಣ್ಮುಖ ಯುವಕ ಮಂಡಲ ಪ್ರತೀ ವರ್ಷವೂ ಇಲ್ಲಿ ಸ್ವಚ್ಚತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು ಶಾಲಾ ಮಕ್ಕಳಿಗೆ ಆರೋಗ್ಯಕರ ವಾತಾವರಣ ಕಲ್ಪಿಸುವಲ್ಲಿ ಸಹಕರಿಸುತ್ತಿದೆ. ಯುವಕ ಮಂಡಲದ ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು, ಉಪಾಧ್ಯಕ್ಷರಾದ ಮನೋಜ್ ಸುವರ್ಣ ಸೊರಕೆ, ಅಶೋಕ್ ಎಸ್.ಡಿ. ಹಾಗೂ ಹರೀಶ್ ಅಲೇಕಿ, ಕ್ರೀಡಾ ಕಾರ್ಯದರ್ಶಿ ಕಿರಣ್ ಎಸ್.ಡಿ ಹಾಗೂ ಕೃಷ್ಣಪ್ಪ ಪಟ್ಟೆಮಜಲು, ಸಂಘಟನಾ ಕಾರ್ಯದರ್ಶಿ ವಸಂತ್ ಪೂಜಾರಿ ಕೈಪಂಗಳ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸುಬ್ರಹ್ಮಣ್ಯ ಕರುಂಬಾರು, ಕಮಲೇಶ್ ಸರ್ವೆದೋಳಗುತ್ತು ಹಾಗೂ ಎಸ್.ಎಂ ಶರೀಫ್ ಸರ್ವೆ, ಸ್ಥಳೀಯರಾದ ದಯಾನಂದ ಭಕ್ತಕೋಡಿ ಹಾಗೂ ಜನಾರ್ಧನ ಕಾಡಬಾಗಿಲು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here