ಪಾಣಾಜೆ ಗ್ರಾಮದಲ್ಲಿ ಇಂದು ಶಾಸಕರಿಂದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ

0

ಮೊದಲ ಬಾರಿಗೆ ಗ್ರಾಮಕ್ಕೆ ಭರಪೂರ ಅನುದಾನ ನೀಡಿದ ಶಾಸಕರು


ಪುತ್ತೂರು; ಪಾಣಾಜೆ ಗ್ರಾಮದಲ್ಲಿ ಡಿ. 24 ರಂದು ವಿವಿಧ ಕಾಮಗಾರಿಗಳಿಗೆ ಶಾಸಕರಾದ ಅಶೋಕ್ ರ‍್ಯಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಶಸಕರಾದ ಮೊದಲ ಸುತ್ತಿನಲ್ಲೇ ಪಾಣಾಜೆ ಗ್ರಾಮಕ್ಕೆ ಭರಪೂರ ಅನುದಾನವನ್ನು ಒದಗಿಸಿದ್ದು ಸುಮಾರು. 1.14 ಕೋಟಿ ರೂ ಅನುದಾನದಲ್ಲಿ ವಿವಿಧ ಕಾಮಗಾರಿಗಳು ನಡೆಯಲಿದೆ.

ಶಾಸಕರ ಅನುದಾನದಿಂದ ನಡೆಯಲಿರುವ ಕಾಮಗಾರಿಗಳು :
ಮಿತ್ತಲಪ್ಪು ತೂಂಬಡ್ಕ ರಸ್ತೆ 10 ಲಕ್ಷ,ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಸೂರಂಬೈಲು ಬೈಂಕ್ರೋಡಿ ರಸ್ತೆ 10 ಲಕ್ಷ,ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಡಂಡನಾಯಕನಡ್ಕ ದೇವಸ್ಯ ರಸ್ತೆ 10 ಲಕ್ಷ, ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಆರ್ಲಪದವು ಕಡಂದೇಲು ರಸ್ತೆ 10 ಲಕ್ಷ, ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಬೊಳ್ಳಿಂಬಳ ಕಲ್ಲಪದವು ರಸ್ತೆ 20ಲಕ್ಷ, ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಕೊಂದಲಕಾನ ಖಂಡೇರಿ ರಸ್ತೆ10 ಲಕ್ಷ, ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಸರಕಾರಿ ಹಿ. ಪ್ರಾಶಾಲೆ ವಡ್ಯಾ ಇಲ್ಲಿಗೆ ಶೌಚಾಲಯ ರಚನೆ 02, ಪಾಣಾಜೆ ಗ್ರಾಮದ ಕಲ್ಲಪದವು ಅಂಗನವಾಡಿ ದುರಸ್ಥಿ 1 ಲಕ್ಷ, ಪಾಣಾಜೆ ಗ್ರಾಮದ ಸೂರಂಬೈಲು-ಮಿತ್ತಲಪ್ಪು ರಸ್ತೆ ಅಭಿವೃದ್ಧಿ 2 ಲಕ್ಷ, 10 ಪಾಣಾಜೆ ಗ್ರಾಮದ ದೈತೋಟ-ಕಾಟುಕುಕ್ಕೆ ರಸ್ತೆ ಅಭಿವೃದ್ಧಿ 1.5 ಲಕ್ಷ, ಪಾಣಾಜೆ ಗ್ರಾಮದ ಪಾಣಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಲಯಕ್ಕೆ ಪೀಠೋಪಕರಣ1.5 ಲಕ್ಷ, ಪಾಣಾಜೆ ಗ್ರಾಮದ ಸೂರಂಬೈಲು ಎಂಬಲ್ಲಿ ಸಾರ್ವಜನಿಕ ಶೌಚಾಲಯ ರಚನೆ 1.6 ಲಕ್ಷ, ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವಸ್ಯ ಪ.ಪಂಗಡ ಕಾಲನಿಯ ಕೊರಗಪ್ಪ ನಾಯ್ಕರವರ ಮನೆಗೆ ಹೋಗುವ ದಾರಿ ಅಭಿವೃದ್ಧಿ1.20 ಲಕ್ಷ, ಪಾಣಾಜೆ ಗ್ರಾಮದ ಆರ್ಲಪದವು ಗೋಳಿತ್ತಡಿಗೆ ಹೋಗುವ ಪ ಜಾತಿ ಕಾಲನಿ ರಸ್ತೆಗೆ ಮೋರಿ ರಚನೆ 1 ಲಕ್ಷ, 15 ಪಾಣಾಜೆ ಗ್ರಾಮದ ಕಲ್ಲಪದವು ಪ.ಜಾತಿ ಕಾಲೋನಿ ಗುಡಿ ಹತ್ತಿರ ಹೈಮಾಸ್ ಲೈಟ್ ಅಳವಡಿಕೆ1.25 ಲಕ್ಷ, ಪಾಣಾಜೆ ಗ್ರಾಮದ ಆರ್ಲಪದವು ಜನತಾ ಕಾಲೋನಿ ಬಳಿ ಹೈಮಾಸ್ ಲೈಟ್ ಅಳವಡಿಕೆ 1.5 ಲಲಕ್ಷ, ಪಾಣಾಜೆ ಗ್ರಾಮದ ಬೇರಿಕೆ ಪ.ಜಾತಿ ಕಾಲೋನಿಗೆ ಹೈಮಾಸ್ ಲೈಟ್ ಆಳವಡಿಕೆ1.25 ಲಕ್ಷ, ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಕಲ್ಲಪದವು-ಪಾರ್ಪಳ ಹೋಗುವ ರಸ್ತೆ ಕಾಂಕ್ರೀಟಿಕರಣ 05.00 , ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಕಡಂದೇಲು ಪ.ಜಾತಿ ಕಾಲನಿ ರಸ್ತೆ ಅಭಿವೃದ್ಧಿ 24 ಲಕ್ಷ ಅನುದಾನ ಬಿಡುಗಡೆಯಾಗಿದೆ.

ಪಾಣಾಜೆ ಗ್ರಾಮದ ಬಹುತೇಕ ಬೇಡಿಕೆ ಈಡೇರಿಕೆಯಾಗಿದೆ
ಪಾಣಾಜೆ ಗ್ರಾಮದ ಬಹುಕಾಲದ ಬೇಡಿಕೆ ಒಂದೇ ಬಾರಿಗೆ ಈಡೇರಿಕೆಯಾಗಿದೆ. ಗ್ರಾಮದಲ್ಲಿ ಅಗತ್ಯವಾಗಿ ನಡೆಯಬೇಕಾದ ರಸ್ತೆ ಕಾಮಗಾರಿ ಹಾಗೂ ಇತರೆ ಕಾಮಗಾರಿಗಳಿಗೆ ಸರಕಾರದಿಂದ ಅನುದಾನ ಬಿಡುಗಡೆಯಾಗಿದೆ. ಕೋಡಿಂಬಾಡಿ ಗ್ರಾಮ , ಪಾಣಾಜೆ ಗ್ರಾಮಕ್ಕೆ ಅನುದಾನ ಒದಗಿಸಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಸಮಾನ ರೀತಿಯಲ್ಲಿ ಅನುದಾನವನ್ನು ಹಂಚಿಕೆ ಮಾಡುವ ಮೂಲಕ ರಾಜಧರ್ಮವನ್ನು ಪಾಲನೆ ಮಾಡುತ್ತೇನೆ. ಎಲ್ಲಾ ಗ್ರಾಮಗಳಿಂದಲೂ ಬೇಡಿಕೆ ಬಂದಿದೆ. ಹಂತ ಹಂತವಾಗಿ ಅನುದಾನ ಬಿಡುಗಡೆಯಾಗುತ್ತದೆ
ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here