ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ-ಲೋಕೇಶ್ ಎಸ್.ಆರ್
ಪುತ್ತೂರು: ಶಾಲೆಯೆಂದರೆ ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರ ಸಂಸ್ಕೃತಿ ಕಲಿಸಿಕೊಡುವ ಕೇಂದ್ರಗಳಾಗಿದ್ದು ಶಾಲೆಗಳು ಜೀವನದಲ್ಲಿ ಶಿಸ್ತನ್ನು ಕಲಿಸಿಕೊಡುತ್ತದೆ, ಪೋಷಕರು ಮಕ್ಕಳ ಬಗ್ಗೆ ಶಿಕ್ಷಣದ ವಿಚಾರದಲ್ಲಿ ಅತೀವ ಕಾಳಜಿ ವಹಿಸಬೇಕು. ಮಕ್ಕಳಿಗಾಗಿ ಒಂದಷ್ಟು ಆಸ್ತಿ ಮಾಡಿ ಇಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಹೇಳಿದರು.
ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಲಾಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಅಧ್ಯಕ್ಷತೆ ವಹಿಸಿದ್ದರು. ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ಎಸ್.ಡಿ ವಸಂತ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲೆಯ ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿಯವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ಕಾಂಚನಾ ಕೆ ಸಿ ವರದಿ ಮಂಡಿಸಿದರು. ಪುತ್ತೂರು ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಮುಂಡೂರು ಗ್ರಾ.ಪಂ ಸದಸ್ಯ ಕರುಣಾಕರ ಗೌಡ ಎಲಿಯ, ಮಾಜಿ ಕಾರ್ಯಾಧ್ಯಕ್ಷ ಶಿವನಾಥ ರೈ ಮೇಗಿನಗುತ್ತು, ಕಲ್ಪಣೆ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ಸಮಯೋಚಿತವಾಗಿ ಮಾತನಾಡಿದರು.
ಎಲಿಯ ಚಂದ್ರಶೇಖರ್ ಮಯ್ಯ ಅವರು ಕಳೆದ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವೈಯಕ್ತಿಕ ದತ್ತಿ ನಿಧಿ ವಿತರಿಸಿದರು.
ಕಾರ್ಯಕ್ರಮದಲ್ಲಿ ನರಿಮೊಗರು ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿ ಪ್ರಸಾದ್, ಮುಂಡೂರು ಗ್ರಾ.ಪಂ ಸದಸ್ಯರಾದ ರಸಿಕಾ ಶಿವನಾಥ ರೈ, ವಿಜಯಾ ಕರ್ಮಿನಡ್ಕ, ಮಾಜಿ ಸದಸ್ಯ ರಾಮಚಂದ್ರ ಸೊರಕೆ, ಉದ್ಯಮಿಗಳಾದ ಪಿ.ಕೆ ಮಹಮ್ಮದ್, ಅನಸ್ ನೇರೋಳ್ತಡ್ಕ, ಇಸಾಕ್ ರೆಂಜಲಾಡಿ, ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಅಝೀಝ್ ರೆಂಜಲಾಡಿ, ಹರೀಶ್ ಆಚಾರ್ಯ, ಸವಿತಾ, ಯಶೋಧ, ಧನಲಕ್ಷ್ಮೀ, ಧನ್ಯ, ಪ್ರಾಥಮಿಕ ಶಾಲಾ ಶಿಕ್ಷಕಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವ ಉದ್ಯಮಿ ನಾಸಿರ್ ಅಜ್ಜಿಕಲ್ಲು, ರಜನಿಕಾಂತ್ ಗೌಡ ಕೂಡುರಸ್ತೆ, ಹಸೈನಾರ್ ರೆಂಜಲಾಡಿ, ಇಸ್ಮಾಯಿಲ್ ಕೂಡುರಸ್ತೆ ಸಹಕರಿಸಿದರು. ಶಿಕ್ಷಕರಾದ ವೆಂಕಟೇಶ್, ಕಾಂಚನಾ ಕೆ.ಸಿ, ಹರ್ಷಿತಾ, ಕಮಲಾ, ದೈಹಿಕ ಶಿಕ್ಷಣ ಶಿಕ್ಷಕ ಸಹದೇವ್, ಬಿ.ಎಡ್ ಶಿಕ್ಷಣಾರ್ಥಿಗಳಾದ ಬಾಲಕೃಷ್ಣ, ಧನ್ಯಶ್ರೀ, ನಿವೇದಿತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಉಮಾಶಂಕರ್ ಕಾರ್ಯಕ್ರಮ ನಿರ್ವಹಿಸಿದರು. ಸಹದೇವ್ ವಂದಿಸಿದರು.