ಉಪ್ಪಿನಂಗಡಿ: ಇಲ್ಲಿನ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ 60 ನೇ ವರ್ಷದ ಏಕಾಹ ಭಜನಾ ಮಹೋತ್ಸವವು ಶನಿವಾರ ಸೂರ್ಯೋದಯದಿಂದ ಮೊದಲುಗೊಂಡು ಆದಿತ್ಯವಾರ ಸೂರ್ಯೋದಯದ ವರೆಗೆ ವಿವಿಧ ಭಜನಾ ಮಂಡಳಿಗಳ ಭಾಗೀಧಾರಿಕೆಯೊಂದಿಗೆ ನಡೆಯಿತು.
ಶನಿವಾರ ಸಾಯಂಕಾಲ ಉಲ್ಪೆ ಮೆರವಣಿಗೆಯು ಆಕರ್ಷಕವಾಗಿ ನಡೆದು, ರಾತ್ರಿ ಶ್ರೀ ದೇವರ ದೊಡ್ಡ ಪಲ್ಲಕಿಯೊಂದಿಗೆ ನಗರ ಭಜನಾ ಕಾರ್ಯಕ್ರಮ ನಡೆದರೆ, ಆದಿತ್ಯವಾರ ನಸುಕಿನಲ್ಲಿ ಸಣ್ಣ ಪಲ್ಲಕಿಯೊಂದಿಗೆ ಭಜನಾ ಕಾರ್ಯಕ್ರಮ ಜರಗಿತು.
ಶ್ರೀ ದೇವರಿಗೆ ಅರ್ಚಕರಾದ ಶಂಕರ ನಾರಾಯಣ ಭಟ್ ಹಾಗೂ ಹರೀಶ್ ಉಪಾಧ್ಯಾಯ ರವರ ನೇತೃತ್ವದಲ್ಲಿ ಪೂಜಾ ಪುನಸ್ಕಾರಗಳು ನೆರವೇರಿದವು. ಏಕಾಹ ಭಜನಾ ಮಹೋತ್ಸವದಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ಶರತ್ ಕೋಟೆ, ಪ್ರಧಾನ ಕಾರ್ಯದರ್ಶಿ ಮಾಧವ ಆಚಾರ್ಯ, ಜೊತೆ ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ, ಉಪಾಧ್ಯಕ್ಷ ಕುಮಾರ್ ಕಿಶನ್, ಕೋಶಾಧಿಕಾರಿ ಯತೀಶ್ ಶೆಟ್ಟಿ , ಪ್ರಮುಖರಾದ ಹರೀಶ್ ಪೈ, ಕೆ. ಜಗದೀಶ್ ಶೆಟ್ಟಿ, ನಿತೇಶ್ ಗಾಣಿಗ, ಐ. ಜಯಂತ ನಾಯಕ್, ಶೌರೀಶ್ ಕುಮಾರ್, ಸುಂದರ ಆದರ್ಶನಗರ, ಐ. ಪುರುಷೋತ್ತಮ ನಾಯಕ್, ಕಾರ್ತಿಕ್ , ಚಂದ್ರಹಾಸ್ ಹೆಗ್ಡೆ, ಐ. ಕೇಶವ ನಾಯಕ್, ಯು. ಚಂದ್ರಶೇಖರ್, ಅಶೋಕ್ ಕುಮಾರ್ ರೈ, ರವೀಶ್ ಎಚ್.ಟಿ. , ಎನ್. ಗೋಪಾಲ ಹೆಗ್ಡೆ, ಕರಾಯ ರಾಘವೇಂದ್ರ ನಾಯಕ್, ಶಕೀಲಾ ಕುಂದರ್, ಕಾಮಾಕ್ಷಿ ಜಿ. ಹೆಗ್ಡೆ, ಐ ಚಿದಾನಂದ ನಾಯಕ್, ಡಾ. ದಿಲೀಪ್, ಡಾ. ಯತೀಶ್ ಕುಮಾರ್ ಶೆಟ್ಟಿ, ಡಾ. ಸುಪ್ರಿತಾ ಎನ್ ರೈ, ನಾರಾಯಣ ಸಪಲ್ಯ, ಸತೀಶ್ ಕಿಣಿ, ಬಾಲಕೃಷ್ಣ ರೈ, ಶಶಿಧರ್ ಶೆಟ್ಟಿ, ಅನೀಶ್ ಕೆ, ಹರೀಶ್ ನಾಯಕ್, ಸುಜಾತ ಕೃಷ್ಣ ಆಚಾರ್ಯ, ಎನ್. ರಾಘವೇಂದ್ರ ನಾಯಕ್, ಉಷಾ ಮುಳಿಯ, ಸುಧಾಕರ ಶೆಟ್ಟಿ, ಯು. ಕೃಷ್ಣ, ಕಂಗ್ವೆ ವಿಶ್ವನಾಥ ಶೆಟ್ಟಿ, ರಾಮಚಂದ್ರ ಮಣಿಯಾಣಿ, ಯು. ರಾಜೇಶ್ ಪೈ, ಮಹಾಲಿಂಗ, ರವೀಂದ್ರ ದರ್ಬೆ, ವರದರಾಜ್, ನಾಗೇಶ್, ಸಂದೀಪ್ ಶೆಟ್ಟಿ, ಧನ್ಯಕುಮಾರ್ ರೈ, ಪ್ರಸನ್ನ ಕುಮಾರ್, ಗೌತಮ್, ಪುಷ್ಪಲತಾ, ಸುಗಂಧಿ, ಪುಷ್ಪಕರ್ ನಾಯಕ್, ಸ್ವರ್ಣೇಶ್, ಹರೀಶ್ ಭಂಡಾರಿ, ಮೊದಲಾದವರು ಭಾಗವಹಿಸಿದ್ದರು.
ಪೋಟೋ: ೨೫ಯುಪಿಪಿಭಜನೆ