ಪ್ರತಿ ಗ್ರಾಮಕ್ಕೂ ಬರಲಿದೆ ಕೆಪಿಎಸ್-ಅಶೋಕ್ ರೈ
ಪುತ್ತೂರು: ಮಕ್ಕಳ ಸಾಧನೆಯನ್ನು ಅನಾವರಣಗೊಳಿಸುವ ವೇದಿಕೆಯೇ ಶಾಲಾ ವಾರ್ಷಿಕೋತ್ಸವವಾಗಿದೆ. ಸರಕಾರಿ ಶಾಲೆಗೆ ಸೇರಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ದೇಶದ ಪ್ರಧಾನಿ, ಮುಖ್ಯಮಂತ್ರಿ ಮಾತ್ರವಲ್ಲದೇ ನಾನೂ ಕೂಡ ಸರಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಪೂರೈಸಿದ್ದೇನೆ. ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದರು.
ಅವರು ಸುವರ್ಣ ಸಂಭ್ರಮದಲ್ಲಿರುವ ಸಾಮೆತ್ತಡ್ಕ ಸ.ಹಿ.ಪ್ರಾ.ಶಾಲೆಯಲ್ಲಿ ದಿ.ಜಯರಾಮ ಶೆಟ್ಡಿ ಸ್ಮರಣಾರ್ಥ ಶರಣ್ ಜಯರಾಮ್ ಶೆಟ್ಟಿ ಅವರ ಕುಟುಂಬ ಕೊಡುಗೆಯಾಗಿ ನೀಡಿದ್ದ ರಂಗ ವೇದಿಕೆ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣಕ್ಕೆ ಸರಕಾರ ರೂ.2500 ಕೋಟಿ ಮೀಸಲಿಟ್ಟಿದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಗಳಿಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಬರಲಿದೆ. ಈಗಾಗಲೇ ಸರಕಾರಿ ಶಾಲೆಗಳಿಗೆ ಸುಮಾರು 13500 ಶಿಕ್ಷಕರ ನೇಮಕವೂ ಆಗಿದೆ ಎಂದು ಹೇಳಿದ ಶಾಸಕರು, ನಾವೆಲ್ಲರೂ ಅರಿತು-ಬೆರೆತು ಜೀವನ ಮಾಡಲು, ಮುಂದೆ ಬರಲು ಸರಕಾರಿ ಶಾಲೆಗಳೇ ಅತ್ಯುತ್ತಮ ಎಂದರು.
ಸ್ಥಾಪಕಾಧ್ಯಕ್ಷ ಮತ್ತು ಟ್ರಸ್ಟ್‌ನ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಡಾ. ಶರಣ್ ಜಯರಾಮ್ ಶೆಟ್ಟಿ, ನಗರಸಭಾ ಸದಸ್ಯ ಮನೋಹರ್, ಶಿವರಾಮ ಕಾರಂತ ಫ್ರೌಢಶಾಲೆಯ ಕಾರ್ಯಾಧ್ಯಕ್ಷ ದಿನೇಶ್ ಕಾಮತ್, ವೆಂಕಟ್ರಮಣ ಭಟ್, ಪ್ರಸನ್ನ ಶೆಟ್ಟಿ ಸಿಝ್ಲರ್, ಡಾ. ಶಿವರಾಜ್ ಶಂಕರ್, ಉದ್ಯಮಿ ನಿಹಾಲ್ ಶೆಟ್ಟಿ, ಚೋಲ ಮಂಡಲಂ ಉದ್ಯೋಗಿ ಪ್ರೇಮನಾಥ್ ಆಚಾರ್ಯ, ಅರ-ತ್ ಆಲಿ ಕೂರ್ನಡ್ಕ, ಕಿಶೋರ್, ಧ.ಗ್ರಾ.ಯೋ. ನಿರ್ದೇಶಕ ಪ್ರವೀಣ್ ಕುಮಾರ್, ನಿವೃತ್ತ ಶಿಕ್ಷಕಿ ಕುಸುಮಾವತಿ, ಜೋಸ್ ಅಲುಕ್ಕಾಸ್ ಮ್ಯಾನೇಜರ್ ರಾಕೇಶ್, ಟ್ರಸ್ಟಿಗಳಾದ ನಳಿನಿ ಪಿ.ಶೆಟ್ಟಿ, ಮೀನಾಕ್ಷಿ , ದಿನೇಶ್ ಪ್ರಸನ್ನ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಸಿರಾಜ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಪ್ಯ ಆನಂದಾಶ್ರಮ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ.ಗೌರಿ ಪೈಯವರು ಶಾಲೆಗೆ ನೂತನ ಕೊಠಡಿಯೊಂದನ್ನು ಕೊಡುಗೆಯಾಗಿ ನೀಡಿದ್ದು ಕೊಠಡಿಯಲ್ಲಿ ದೀಪ ಪ್ರಜ್ವಲನೆ ನೆರವೇರಿಸಿ ಶುಭ ಹಾರೈಸಿದರು. ಅತಿಥಿಗಳನ್ನು ಸುವರ್ಣ ಮಹೋತ್ಸವ ಸಮಿತಿಯಿಂದ ಸನ್ಮಾನಿಸಲಾಯಿತು.
ಶಾಲಾ ಪುಟಾಣಿಗಳು, ಹಿರಿಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಹಿರಿಯ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು. ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ, ಶಾಲಾ ಅಭಿವೃದ್ದಿ ಸಮಿತಿ, ಯುವಕ ಮಂಡಲ ಹಾಗೂ ಸಾಮೆತ್ತಡ್ಕ ಚಾರಿಟೇಬಲ್ ಟ್ರಸ್ಟ್ ಹಾಗೂ ಅಕ್ಷರ ದಾಸೋಹ ಸಿಬಂದಿ ಬಳಗ, ವಿವಿಧ ಸಂಘಟನೆಯ ಪದಾಽಕಾರಿಗಳು, ಸದಸ್ಯರು ಹಾಗೂ ಸ್ಥಳೀಯರು ಸಹಕಾರ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಮರಿಯಾ ಅಶ್ರ- ಸ್ವಾಗತಿಸಿ, ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು. ಟ್ರಸ್ಟ್ ಕಾರ್ಯದರ್ಶಿ ಇಂದಿವರ್ ಭಟ್ ಬಳಗದವರು ವಿವಿಧ ರೀತಿಯಲ್ಲಿ ಸಹಕರಿಸಿದರು.