ಪುತ್ತೂರು: ಮದ್ಯಪಾನ ಮಾಡುವವರು ಕೆಟ್ಡವರಲ್ಲ ಆದರೆ ಅದು ಪಾಪಕೃತ್ಯಕ್ಕೆ ಮೂಲ. ವ್ಯಕ್ತಿತ್ವ ನಾಶ ಮಾಡುವ ಮದ್ಯಪಾನ ಬಿಡಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ನುಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪುತ್ತೂರು ತಾಲೂಕು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಪುತ್ತೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನೆಹರುನಗರದ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ನಡೆಯುತ್ತಿರುವ 1777 ನೇ ಮದ್ಯ ವರ್ಜನ ಶಿಬಿರದ ಆರನೇ ದಿನವಾದ ಡಿ.26ರಂದು ಅವರು ಶಿಭಿರಾಥಿ೯ಗಳಿಗೆ ಆಶೀರ್ವದಿಸಿದರು. ಮದ್ಯಪಾನ ಮಾಡುವವರ ಮತಿ ಭ್ರಮಣೆಯಾಗುತ್ತದೆ. ಹಾಳು ಕೆಲಸ ಮಾಡಲು ಕುಡಿಸುತ್ತಾರೆ.ಎಷ್ಟು ಅಪಾಯದ ಕೆಲಸ ಮಾಡಲು, ಹೇಸಿಗೆ ತೆಗೆಯಲು, ತಪ್ಪು ಕೆಲಸ ಮಾಡಲು ಸ್ವಂತ ಬುದ್ದಿ ಬಿಡುವುದಿಲ್ಲ. ಮದ್ಯಪಾನ ಈ ಕೆಲಸ ಮಾಡಿಸುತ್ತದೆ. ಮದ್ಯಪಾನ ಸ್ವಂತ ಬುದ್ದಿಯನ್ನು ಮರೆ ಮಾಡುತ್ತದೆ. ಹಾಗಾಗಿ ವ್ಯಕ್ತಿತ್ವ ನಾಶ ಮಾಡುವ ಮದ್ಯಪಾನ ಬಿಡಿ ಎಂದರು.ಇದೇ ಸಂದರ್ಭ 17 ವರ್ಷದ ಹಿಂದೆ ಮದ್ಯವರ್ಜನ ಮೂಲಕ ಕುಡಿತವನ್ನು ಬಿಟ್ಟ ಅಣ್ಣು ಅವರ ಪತ್ನಿ ಗುಲಾಬಿ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಅಶೋಕ್ ರೈ ,ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಪದ್ಮನಾಭ ಶೆಟ್ಟಿ , ಅಖಿಲ ಕರ್ನಾಟಕ ಜನಜಾಗೃತಿ ಮಾಜಿ ಅದ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಿರ್ದೇಶ ಅನಿಲ್ ಸರ್, ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಲೋಕೇಶ್ ಹೆಗ್ಡೆ,ಮಹೇಶ್ ಸವಣೂರು, ನಿಕಟಪೂರ್ವ ಅಧ್ಯಕ್ಷ ಶಶಿಕುಮಾರ್ ಬಾಲ್ಯೊಟ್ಡು, ಮಹಾಬಲ ರೈ ವಳತ್ತಡ್ಕ, ಡಾ.ಸುರೇಶ ಪುತ್ತೂರಾಯ, ಸುಳ್ಯ ಜನಜಾಗೃತಿಯ ಅಧ್ಯಕ್ಷರು, ಕಡಬ ಜನಜಾಗೃತಿಯ ಅಧ್ಯಕ್ಷರು, ಪ್ರಾದೇಶಿಕ ನಿರ್ದೆಶಕ ದುಗ್ಗೆ ಗೌಡ, ಇನ್ನೋರ್ವ ನಿರ್ದೇಶಕ ವಿವೇಕ್ ರೈ, ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಭಟ್, ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.