ಡಿ.29-: ಏಕತ್ತಡ್ಕ ಶಾಲಾ ವಾರ್ಷಿಕೋತ್ಸವ “ಚಿಲಿಪಿಲಿ ಕಲರವ”

0

ನಿಡ್ಪಳ್ಳಿ: ದ.ಕ.ಜಿ.ಪಂ.ಉನ್ನತ  ಹಿರಿಯ ಪ್ರಾಥಮಿಕ ಶಾಲೆ ಏಕತ್ತಡ್ಕ ಅಜ್ಜಿಕಲ್ಲು ಇದರ ವಾರ್ಷಿಕೋತ್ಸವ ಸಮಾರಂಭ ಮಕ್ಕಳ ಸಾಂಸ್ಕೃತಿಕ ಸಂಭ್ರಮ ” ಚಿಲಿಪಿಲಿ ಕಲರವ” ಡಿ.29 ರಂದು ನಡೆಯಲಿದೆ.ಬೆಳಿಗ್ಗೆ ಗಂಟೆ 9.30 ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಜ್ಜಿಕಲ್ಲು ಒಕ್ಕೂಟದ ಅಧ್ಯಕ್ಷೆ ಸರೋಜ ದೇವಸ್ಯ ಧ್ವಜಾರೋಹಣ ಮಾಡಲಿದ್ದಾರೆ.

 ಸಂಜೆ ಗಂಟೆ 4.30 ರಿಂದ ಅಂಗನವಾಡಿ ಮತ್ತು ನಲಿಕಲಿ ಪುಟಾಣಿಗಳಿಂದ ಸಾಂಸ್ಕೃತಿಕ ಕಲರವ. ರಾತ್ರಿ ಗಂಟೆ 7 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸಿ ಉದ್ಘಾಟಿಸಲಿದ್ದು ಶಾಸಕ ಅಶೋಕ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ  ಪಳ್ಳತ್ತಾರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

  ರಾತ್ರಿ ಗಂಟೆ 9.30 ರಿಂದ ಯಕ್ಷ ಕಲಾ ಕುಸುಮ ಸುಬ್ರಹ್ಮಣ್ಯ ಸಂಟ್ಯಾರ್ ನಿರ್ದೇಶನದಲ್ಲಿ  ಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ ” ಮೈಂದ ದ್ವಿವಿದರ ಕಾಳಗ” ನಡೆಯಲಿದೆ ಎಂದು ಶಾಲಾ ಪ್ರಭಾರ ಮುಖ್ಯಗುರು ಚಿತ್ರಾ ರೈ ಎಚ್ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷ ತಿಮ್ಮಪ್ಪ ನಾಯ್ಕ ಎಚ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here