ಶಾಂತಿಯುತವಾಗಿ ನಡೆದ ನಗರಸಭಾ ಉಪ ಚುನಾವಣೆ-ವಾರ್ಡ್1ರಲ್ಲಿ ಶೇ.73.46, ವಾರ್ಡ್ 11ರಲ್ಲಿ ಶೇ.61.07 ಮತದಾನ

0

ಪುತ್ತೂರು: ಪುತ್ತೂರು ನಗರ ಸಭೆಯ ತೆರವಾದ ಎರಡು ಸ್ಥಾನಗಳಿಗೆ ಡಿ.27ರಂದು ನಡೆದ ಚುನಾವಣೆಯು ಶಾಂತಿಯುತವಾಗಿ ತೆರೆ ಕಂಡಿತು.
ಬೆಳಿಗ್ಗೆ 7ಗಂಟೆಗೆ ಮತದಾನ ಪ್ರಕ್ರಿಯೆಗಳು ಪ್ರಾರಂಭಗೊಂಡ ಮತದಾನ ಸಂಜೆ 5 ಗಂಟೆಯ ತನಕ ನಡೆಯಿತು. ವಾರ್ಡ್1ರಲ್ಲಿ ಒಟ್ಟು 1304 ಮತದಾರರಲ್ಲಿ 449 ಪುರುಷರು ಹಾಗೂ 509 ಮಹಿಯರು ಸೇರಿದಂತೆ ಒಟ್ಟು 958 ಮತ ಚಲಾವಣೆಯಾಗಿದೆ. ಶೇ.73.45 ಮತ ಚಲಾವಣೆಯಾಗಿದೆ. ವಾರ್ಡ್ 11 ರಲ್ಲಿ ಒಟ್ಟು 1724 ಮತದಾರರಲ್ಲಿ 525 ಪುರುಷರು, 528 ಮಹಿಳೆಯರು ಸೇರಿದಂತೆ 1053 ಮಂದಿ ಮತ ಚಲಾಯಿಸಿದ್ದು ಶೇ.61.07 ಮತದಾನವಾಗಿದೆ.

LEAVE A REPLY

Please enter your comment!
Please enter your name here