ಪುತ್ತೂರು:2023-24ನೇ ಸಾಲಿನ ಕೇಂದ್ರ ಸರಕಾರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ರೈತರು ಕೃಷಿಯಲ್ಲಿ ಸೂಕ್ಷ್ಮ ನೀರಾವರಿ ಅಳವಡಿಸಿಕೊಳ್ಳಲು ಪ.ಜಾತಿ ಹಾಗೂ ಪ.ಪಂಗಡದ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳವಡಿಸಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ((RD ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ) ಗರಿಷ್ಠ ಎರಡು ಎಕರೆ ಪ್ರದೇಶದವರೆಗೆ ಶೇ. 90ರಷ್ಟು ಸಹಾಯ ಧನ ದೊರೆಯಲಿದೆ.
ಆಸಕ್ತರು ರೈತರು ಅರ್ಜಿ, ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ, ಕಂಪನಿಯ ದರಪಟ್ಟಿ ಮತ್ತು ನಕ್ಷೆ, ಚೆಕ್‌ಬಂದಿ, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ದೂರವಾಣಿ ಸಂಖ್ಯೆ, ರೇಷ್ಮೆ ಮತ್ತು ಕೃಷಿ ಇಲಾಖೆಯಿಂದ ಬೇಬಾಕಿ ಪ್ರಮಾಣ ಪತ್ರ, ಮಣ್ಣು ಮತ್ತು ನೀರಿನ ಪರೀಕ್ಷಾ ವರದಿ, ನೀರಿನ ಮೂಲದ ಇತ್ಯಾದಿ ವಿವರರಗಳೊಂದಿಗೆ ತೋಟಗಾರಿಕಾ ಇಲಾಖೆಯ ಕಛೇರಿಗೆ ಸಲ್ಲಿಸುವಂತೆ ಹಿರಿಯ ತೋಟಗಾರಿಕಾ ನಿರ್ದೇಶಕಿ ರೇಖಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.