ಮರೀಲು ಸ್ನೇಹನಗರ:ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯಿಂದ 22ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ

0

ಪುತ್ತೂರು: ಮರೀಲು ಸ್ನೇಹನಗರ ಇಲ್ಲಿನ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಆಶ್ರಯದಲ್ಲಿ 22ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ಡಿ.31 ರಂದು ಸಂಜೆ ಮರೀಲು ಸ್ನೇಹನಗರದ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆಯಲ್ಲಿ ಜರಗಿತು.
ಸಂಜೆ ಕೆಮ್ಮಿಂಜೆ ಶ್ರೀ ಷಣ್ಮುಖ-ಮಹಾವಿಷ್ಣು ದೇವಸ್ಥಾನದ ಮಾಜಿ ಅಧ್ಯಕ್ಷ ತಂತ್ರಿವರ್ಯರಾದ ಸುಬ್ರಹ್ಮಣ್ಯ ಬಳ್ಳುಕ್ಕುರಾಯಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರ ಹಿತಕ್ಕಾಗಿ, ಲೋಕ ಕಲ್ಯಾಣಗೋಸ್ಕರ ಕಳೆದ 22 ವರ್ಷಗಳಿಂದ ಈ ಭಾಗದಲ್ಲಿ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಂಡು ಬರುತ್ತಿದ್ದಾರೆ. ಮನೆಯಲ್ಲಿ ಪೂಜೆ ಮಾಡುವುದಕ್ಕಿಂತ ಸಾರ್ವಜನಿಕವಾಗಿ ಪೂಜೆ ಮಾಡುವುದರಲ್ಲಿ ತುಂಬಾ ವ್ಯತ್ಯಾಸವಿದೆ. ಎಲ್ಲರೂ ಸೇರಿಕೊಂಡು ಒಗ್ಗಟ್ಟಾಗಿ ಪೂಜೆ ಮಾಡಿಸಿಕೊಂಡಾಗ ಅಲ್ಲಿ ದೇವರ ಅನುಗ್ರಹ ಖಂಡಿತಾ ಇದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, 2024ನೇ ವರ್ಷ ಶ್ರೀರಾಮನ ಹೋರಾಟಕ್ಕೆ ಮುಕ್ತಿಯನ್ನು ಕಾಣುವಂತಹ ವರ್ಷವಾಗಿದೆ. ಇದೇ ಜನವರಿ 22ರಂದು ಶ್ರೀರಾಮನ ಜನ್ಮಭೂಮಿಯಯಲ್ಲಿ ಲೋಕ ಕಲ್ಯಾಣಗೋಸ್ಕರ ಬ್ರಹ್ಮಕಲಶದ ಮೂಲಕ ರಾಮ ಮಂದಿರ ನಿರ್ಮಾಣಗೊಳ್ಳುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.


ಉದ್ಘಾಟನಾ ಸಂದರ್ಭದಲ್ಲಿ ಹಿರಿಯರಾದ ಭಾಸ್ಕರ ರಾವ್ ಮರೀಲು, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ನವೀನ್ ಗೌಡ ಕ್ಯಾಂಪ್ಕೋ, ಗೌರವಾಧ್ಯಕ್ಷ ರಾಜೇಂದ್ರ ಕೆ.ಮೆಸ್ಕಾಂ, ಕಾರ್ಯದರ್ಶಿ ರವೀಂದ್ರನಾಥ ರೈ, ಕೋಶಾಧಿಕಾರಿ ಹರೀಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅರ್ಚಕರಾದ ವೆಂಕಟೇಶ್ ಭಟ್ ನೇತೃತ್ವದಲ್ಲಿ ಮಹಾಪೂಜೆ ನೆರವೇರಿತು.


ಬಳಿಕ ದರ್ಬೆ ಕುಂಞಮಲೆ ಶ್ರೀ ಸಿದ್ಧಿವಿನಾಯಕ ಭಜನಾ ಸೇವಾ ಟ್ರಸ್ಟ್‌ನಿಂದ ಕುಣಿತ ಭಜನೆ, ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀ ದುರ್ಗಾ ರಂಗಕಲಾ ಚಾವಡಿ ಪುತ್ತೂರು ಅರ್ಪಿಸುವ, ‘ರಂಗ ಮಾಣಿಕ್ಯ’ ಸುಬ್ಬು ಸಂಟ್ಯಾರ್ ವಿರಚಿತ ಸಾಮಾಜಿಕ ಯಕ್ಷ ಹಾಸ್ಯ ಸೌರಭ ಒಕ್ಕುನಾತ್ ತಿಕ್ಕುಜಿ ‘ಕುಸಲ್ದ ನಿಧಿ’ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶರತ್ ಆಳ್ವ ಚನಿಲ, ಮದ್ದಳೆಯಲ್ಲಿ ರಾಮಯ್ಯ ರೈ ಕಕ್ಕೂರು, ಚೆಂಡೆಯಲ್ಲಿ ರಾಮ್‌ದಾಸ್ ಶೆಟ್ಟಿ ವಗೆನಾಡು, ಚಕ್ರತಾಳದಲ್ಲಿ ನಿಖಿಲ್ ಸುಳ್ಯ, ಮುಮ್ಮೇಳದಲ್ಲಿ ದಿನೇಶ್ ಶೆಟ್ಟಿ ಅಳಿಕೆ, ಚಂದ್ರಶೇಖರ ಸುಳ್ಯಪದವು, ಜೈದೀಪ್ ರೈ ಕೋರಂಗ, ಗಂಗಾಧರ್ ಕೌಡಿಚ್ಚಾರ್, ರಕ್ಷಿತ್ ರೈ ತೊಟ್ಲ, ಅನಿಲ್ ಶೆಟ್ಟಿ ದೇರ್ಲ, ರಂಜಿತ್ ಬೂಡಿಯಾರ್, ಜೀವನ್‌ರಾಜ್ ದೇರ್ಲ, ಯಶಸ್ ರೈ ಕಲ್ಲರ್ಪೆ, ರಕ್ಷಣ್ ಬೆಳ್ಳೂರು, ವಿಖ್ಯಾತ್ ಹಾಡಿಕಲ್ಲು, ಹರೀಶ್ ಶೇಕಮಲೆ, ತೀರ್ಥೇಶ್ ಪೆರ್ಲಂಪಾಡಿರವರು ಭಾಗವಹಿಸಿದರು. ಕಾರ್ಯಕ್ರಮದ ಕೊನೆಗೆ ಅನ್ನಸಂತರ್ಪಣೆ ನೆರವೇರಲ್ಪಟ್ಟಿತು ಹಾಗೂ ಫ್ರೆಂಡ್ಸ್ ಸ್ನೇಹನಗರ ಇವರಿಂದ ಸುಡುಮದ್ದು ಪ್ರದರ್ಶನ ನಡೆಯಿತು. ಮರೀಲು ಸ್ನೇಹನಗರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಕಟ್ಟೆ ಸಮಿತಿ ಸದಸ್ಯರು ಸಹಕರಿಸಿದರು.

ಸನ್ಮಾನ…
ಈ ಸಂದರ್ಭದಲ್ಲಿ ಕೆಮ್ಮಿಂಜೆ ಶ್ರೀ ಷಣ್ಮುಖ-ಮಹಾವಿಷ್ಣು ದೇವಸ್ಥಾನದ ಮಾಜಿ ಅಧ್ಯಕ್ಷ ತಂತ್ರಿವರ್ಯರಾದ ಸುಬ್ರಹ್ಮಣ್ಯ ಬಳ್ಳುಕ್ಕುರಾಯರವರನ್ನು ಹಾಗೂ ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲರವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here