ಉಪ್ಪಿನಂಗಡಿ: ಬದ್ರಿಯಾ ಜುಮಾ ಮಸೀದಿ ಆತೂರು ಇಲ್ಲಿ ತಿಂಗಳಿಗೊಮ್ಮೆ ನಡೆಸಿಕೊಂಡು ಬರುವ ದ್ಸಿಕ್ರ್ ಹಲ್ಕಾ ಇದರ 23ನೇ ವಾರ್ಷಿಕ ಮಹಾಸಂಗಮಕ್ಕೆ ಡಿ.31ರಂದು ರಾತ್ರಿ ಚಾಲನೆ ನೀಡಲಾಯಿತು.
ಜಮಾಅತ್ ಅಧ್ಯಕ್ಷ ಅಹ್ಮದ್ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಅನಸ್ ಹಾದಿ ತಂಙಳ್ ಕರುವೇಲು ಪ್ರಾರ್ಥನೆ ನೆರವೇರಿಸಿ ಶುಭ ಹಾರೈಸಿದರು.
ಆತೂರು ಮುದರ್ರಿಸರಾದ ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಉದ್ಘಾಟಿಸಿ ಮಾತನಾಡಿ, ಅಲ್ಲಾಹುವಿನ ಸ್ಮರಣೆಯಿಂದ ಜೀವನ ಧನ್ಯವೆಂದು ಸಾಂದರ್ಭಿಕವಾಗಿ ಹೇಳಿದರು. ಉಪ್ಪಿನಂಗಡಿ ಮಾಲಿಕುದ್ದೀನಾರ್ ಕೇಂದ್ರ ಜುಮಾ ಮಸೀದಿ ಮುದರ್ರಿಸರಾದ ಅಬ್ದುಲ್ ಸಲಾಂ ಫೈಝಿ ಎಡಪ್ಪಾಲ್ ಮುಖ್ಯ ಪ್ರಭಾಷಣಗೈದರು. ಆತೂರು ಮುಹಿಯುದ್ದೀನ್ ಜುಮಾಮಸೀದಿ ಖತೀಬರಾದ ಆಸಿಫ್ ಅಝ್ಹರಿ ಕೊಡಗು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಆದಂ ಹಾಜಿ, ಪೊಡಿಕುಂಞಿ ನೀರಾಜೆ, ಮುಹಮ್ಮದ್ ಹಾಜಿ, ಹಂಝ ಸಖಾಫಿ, ಹಾರಿಸ್ ಅಝ್ಹರಿ ನೀರಾಜೆ, ಇಸ್ಮಾಯಿಲ್ ದಾರಿಮಿ, ಇಬ್ರಾಹಿಂ ದಾರಿಮಿ ಹಾಗೂ ಜಮಾಅತಿನ ಪ್ರಮುಖರು ಉಪಸ್ಥಿತರಿದ್ದರು.
ಕೆ.ಯಂ.ಯಸ್.ಫೈಝಿ ಕರಾಯ ಸ್ವಾಗತಿಸಿದರು. ಜಮಾಅತ್ ಕಾರ್ಯದರ್ಶಿ ಸಿರಾಜ್ ಬಡ್ಡಮೆ ವಂದಿಸಿದರು. ರಫೀಕ್ ಗೋಳಿತ್ತಡಿ ನಿರೂಪಿಸಿದರು.