ಪುತ್ತೂರು: ಉರ್ಲಾಂಡಿ ಶ್ರೀಸತ್ಯನಾರಾಯಣ ಬಾಲಗೋಕುಲ ವತಿಯಿಂದ ಉರ್ಲಾಂಡಿ ಸತ್ಯನಾರಾಯಣ ಕಟ್ಟೆಯಲ್ಲಿ ದೀಪ ಪೂಜಾ ಕಾರ್ಯಕ್ರಮ ಡಿ.31ರಂದು ನಡೆಯಿತು.
ಪೋಳ್ಯ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಉಮಾಶಂಕರ್ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಉರ್ಲಾಂಡಿ ಶ್ರೀ ಸತ್ಯನಾರಾಯಣ ಕಟ್ಟೆಯ ಗೌರವಾಧ್ಯಕ್ಷ ಎ.ಜೆ. ನೈಕ್, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕೋಶಾಧಿಕಾರಿ ಅಶೋಕ್ ಕುಂಬ್ಳೆ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ ನಾಯಕ್ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಬಾಲಗೋಕುಲ ಸಮಿತಿ ಅಧ್ಯಕ್ಷ ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ದೀಪ ಪೂಜಾನ, ಮಕ್ಕಳ ಸಾಮೂಹಿಕ ಹುಟ್ಟುಹಬ್ಬ, ತಂದೆ-ತಾಯಿಯರ ಪಾದ ಪೂಜೆ ನಡೆಯಿತು. ಸಾರ್ವಜನಿಕರಿಗೆ, ಬಾಲಗೋಕುಲದ ಮಕ್ಕಳಿಗೆ ಗೂಡುದೀಪ ರಚನೆ ಸ್ಪರ್ಧೆ ನಡೆದು ಭಾಗವಹಿಸಿದ ಎಲ್ಲರಿಗೂ ಬಹುಮಾನ ನೀಡಲಾಯಿತು.
ಬಾಲಗೋಕುಲ ವಗ್ಗ ಇದರ ಸಂಚಾಲಕ ಹರೀಶ್ ಜಾರಬೆಟ್ಟುರವರಿಂದ ಬೌದ್ಧಿಕ್ ನಡೆಯಿತು. ಬಾಲಗೋಕುಲದ ವಿದ್ಯಾರ್ಥಿಗಳಾದ ಕಿಶನ್, ಶ್ರಾವ್ಯಲಕ್ಷ್ಮೀ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯರಾದ ಪುಷ್ಪರಾಜ್ ಹೆಗ್ಡೆ, ರಾಜೇಶ್ ರಾವ್, ಸುನಿತ್ ನಾಯ್ಕ, ಮೀನಾಕ್ಷಿ, ಜಗದೀಶ್ ಗೌಡ, ಸರಸ್ವತಿ ಭಜನಾ ಮಂದಿರದ ಅಧ್ಯಕ್ಷ ರಘುರಾಮ ಹೆಗ್ಡೆ, ಉರ್ಲಾಂಡಿ ಸತ್ಯನಾರಾಯಣ ಕಟ್ಟೆಯ ಅಧ್ಯಕ್ಷ ನಡುಸಾರು ಶಿವಭಟ್, ನಗರಸಭಾ ಸದಸ್ಯ ಸಂತೋಷ್ಕುಮಾರ್ ಬೊಳುವಾರು, ಲೋಕೇಶ್ ಹೆಗ್ಡೆ, ಪ್ರವೀಣ್ ಹೆಗ್ಡೆ, ಯೋಗಾನಂದ ರಾವ್, ಶೋಭರಾಜ್, ಶರತ್, ನಿತಿನ್, ದಯಕರ ಹೆಗ್ಡೆ, ದಯಾನಂದ, ಜಯರಾಮ, ಚಿದಾನಂದ ಮತ್ತಿತರರು ಉಪಸ್ಥಿತರಿದ್ದರು. ಬಾಲಗೋಕುಲದ ಮಕ್ಕಳಿಂದ ಪ್ರಾರ್ಥನೆ ಹಾಗೂ ಭಗವದ್ಗೀತೆ ನಡೆಸಲಾಯಿತು. ಮಾತಾಜಿ ಜಯಶ್ರೀ ಶಿವರಾಂ ಸ್ವಾಗತಿಸಿ, ಮಾತಾಜಿ ಅನುರಾಧ ಕಾರ್ಯಕ್ರಮ ನಿರೂಪಿಸಿದರು. ಮಾತಾಜಿ ಚೇತನಾ ವಿವೇಕ್ ವಂದಿಸಿದರು. ಕು. ಶರಣ್ಯ ಉರ್ಲಾಂಡಿ, ಮನ್ವಿ ಉರ್ಲಾಂಡಿ ಸಹಕರಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡು ಬಳಿಕ ಬೆಳದಿಂಗಳ ಭೋಜನ ನಡೆಸಲಾಯಿತು.