ಪುತ್ತೂರು: ಬದ್ರಿಯಾ ಜುಮಾ ಮಸ್ಜಿದ್ ಬಡಕ್ಕೋಡಿ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಆಡಳಿತ ಸಮಿತಿಯ ರಚನೆ ಅಧ್ಯಕ್ಷರಾದ ಮಹಮ್ಮದ್ ಹಾಜಿ ಸರ್ವೆ ಅಧ್ಯಕ್ಷತೆಯಲ್ಲಿ ನಡೆಯಿತು. ಮಸೀದಿಯ ಖತೀಬ್ ಅಬ್ದುಲ್ ಗಫೂರ್ ಅಶ್ಯಾಫೀ ದುವಾ ನೆರವೇರಿಸಿದರು. ನಂತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹಸೈನಾರ್ ಸಾಗರ್, ಉಪಾಧ್ಯಕ್ಷರಾಗಿ ಇಬ್ರಾಹಿಂ ಹಾಜಿ ಅರ್ತಿಕೆರೆ, ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಎಸ್ (ಸಲೀಂ ಹಾಜಿ ಅಲೇಕಿ) ಆಯ್ಕೆಯಾದರು. ಜೊತೆ ಕಾರ್ಯದರ್ಶಿಯಾಗಿ ಬಾತಿಷ ಬಡಕ್ಕೋಡಿ, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಎ (ಅದ್ದು ಹಾಜಿ ಅರ್ತಿಕೆರೆ) ಆಯ್ಕೆಯಾದರು. ಸಮಿತಿ ಸದಸ್ಯರಾಗಿ ವೈ ಮಹಮದ್ ಹಾಜಿ ಸರ್ವೆ, ಲತೀಫ್ ಬಡಕ್ಕೋಡಿ, ಸಂಶುದ್ದೀನ್ ಅರ್ತಿಕೆರೆ, ಅಬ್ಬಾಸ್ ಅಲೇಕಿ, ಇಬ್ರಾಹಿಂ ಹಾಜಿ ಸಾಗರ್ ಹಾಗೂ ಅಬೂಬಕ್ಕರ್ ಹಾಜಿ ಅರ್ತಿಕೆರೆ ಆಯ್ಕೆಯಾದರು.