ಪುತ್ತೂರು: ಉಪ್ಪಿನಂಗಡಿ ಶೆಣೈ ಬಿಲ್ಡಿಂಗ್ನಲ್ಲಿ 35 ವರ್ಷದಿಂದ ವ್ಯವಹರಿಸುತ್ತಿದ್ದ ಆರ್.ಕೆ.ಟ್ರೇಡರ್ಸ್ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಬಳಿ ಇರುವ ಮಾಲಿಕುದ್ದೀನರ್ ಜುಮಾ ಮಸೀದಿಯ ಕಟ್ಟಡಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ಉಪ್ಪಿನಂಗಡಿ ಮಾಲೀಕುದ್ದೀನರ್ ಖತೀಬರಾದ ಸಲಾಂ ಫೈಝಿ ದುವಾ ಆಶೀರ್ವಚನ ನೀಡಿದರು. ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿ ಖತೀಬರಾದ ಇರ್ಷಾದ್ ಸಖಾಫಿ, ಉಪ್ಪಿನಂಗಡಿ ಮಾಲೀಕುದ್ದೀನರ್ ಅಧ್ಯಕ್ಷ ಯೂಸುಫ್ ಹಾಜಿ, ಶುಖುರ್ ಹಾಜಿ, ಹಾಜಿ ಹಾರೂನ್ ರಶೀದಿ ಅಗ್ನಾಡಿ, ಡಬ್ಬಲ್ಪ್ಲೋರ್ ಮುಸ್ತಫಾ, ಉದ್ಯಮಿ ರಾಜಶೇಖರ್ ಜೈನ್, ಶ್ರೀನಿವಾಸ್ ಕೃಪಾ ಬಿಲ್ಡಿಂಗ್ನ ಮಾಲಕ ಶ್ರೀನಿವಾಸ ನಾಯಕ್, ಡಾ.ಎಂ.ಆರ್ ಶೆಣೈ, ಸ್ವರ್ಣಾಭರಣ ಮಾಲಕ ಎನ್. ಪ್ರಭಾತ್ ಪೈ ಉಪಸ್ಥಿತರಿದ್ದು ಶುಭಹಾರೈಸಿದರು. ಮಾಲಕ ಹನೀಫ್ ಆರ್.ಕೆ, ಹಂಝ ಆರ್.ಕೆ, ಸಿರಾಜ್ ಆರ್.ಕೆ., ಅತಿಥಿಗಳನ್ನು ಸ್ವಾಗತಿಸಿದರು.
ಆರ್.ಕೆ ಟ್ರೇಡರ್ಸ್ನ ಸಂಸ್ಥೆಯನ್ನು ತಂದೆಯಾದ ದಿ.ಅಬ್ದುಲ್ ಖಾದರ್ ಹಾಜಿಯವರು 1988ರಲ್ಲಿ ಪ್ರಾರಂಭಿಸಿದರು. ಇದೀಗ 35 ವರ್ಷ ಪೂರೈಸಿದ ಸಂಸ್ಥೆಯನ್ನು ಶೆಣೈ ಬಿಲ್ಡಿಂಗ್ನಿಂದ ಮಾದರಿ ಶಾಲಾ ಬಳಿ ಇರುವ ಮಾಲಿಕುದ್ದೀನರ್ ಜುಮಾ ಮಸೀದಿಯ ಕಟ್ಟಡಕ್ಕೆ ಸ್ಥಳಾಂತರಗೊಳಿಸಿರುತ್ತೇವೆ. ಗ್ರಾಹಕರ ಅನೂಕೂಲಕ್ಕಾಗಿ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಇದೆ. ನಮ್ಮಲ್ಲಿ ಉತ್ತಮ ದರದಲ್ಲಿ ಅಡಿಕೆ, ತೆಂಗಿನಕಾಯಿ, ಕಾಳುಮೆಣಸು ಕಾಡು ಉತ್ಪತ್ತಿಗಳನ್ನು ಯೋಗ್ಯ ದರದಲ್ಲಿ ಖರೀದಿಸಲಾಗುವುದು.
ಹನೀಫ್ ಆರ್.ಕೆ.
ಸಂಸ್ಥೆಯ ಮಾಲಕ