ಮೊಟ್ಟೆತ್ತಡ್ಕ ಜಂಕ್ಷನ್ ನಲ್ಲಿ ಶಾಶ್ವತ ಅಟೋ ರಿಕ್ಷಾ ನಿಲ್ದಾಣ ನಿರ್ಮಿಸುವಂತೆ ಮೊಟ್ಟೆತ್ತಡ್ಕ ಆಟೋ ರಿಕ್ಷಾ ಚಾಲಕರ ಸಂಘದಿಂದ ಶಾಸಕರಿಗೆ ಮನವಿ

0

ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯ ಮೊಟ್ಟೆತ್ತಡ್ಕ ಎಂಬಲ್ಲಿ ತಾತ್ಕಾಲಿಕವಾದ ಆಟೋ ರಿಕ್ಷಾ ನಿಲ್ದಾಣವಿದ್ದು ಶಾಶ್ವತ ಅಟೋ ರಿಕ್ಷಾ ನಿಲ್ದಾಣವಿಲ್ಲ‌ ಈ ನಿಟ್ಟಿನಲ್ಲಿ ಮೊಟ್ಟೆತ್ತಡ್ಕ ಜಂಕ್ಷನ್ ನಲ್ಲಿ ಶಾಶ್ವತ ಅಟೋ ರಿಕ್ಷಾ ನಿಲ್ದಾಣ ನಿರ್ಮಿಸುವಂತೆ ಮೊಟ್ಟೆತ್ತಡ್ಕ ಆಟೋ ರಿಕ್ಷಾ ಚಾಲಕರ ಸಂಘ ಇತ್ತೀಚೆಗೆ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ಮನವಿ ಮಾಡಿದ್ದಾರೆ.


ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಅತ್ಯಧಿಕ ಜನಸಂಖ್ಯೆ ಒಳಗೊಂಡಿರುವ ಪ್ರದೇಶ ಮೊಟ್ಟೆತ್ತಡ್ಕವಾಗಿದ್ದು ಇಲ್ಲಿ ಡಿಸಿಆರ್(ಎನ್.ಆರ್.ಸಿ.ಸಿ) ಕೇಂದ್ರ, ಹೆಲಿಪ್ಯಾಡ್ ಮೈದಾನ, ಅಗ್ನಿಶಾಮಕ ದಳ, ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಕೊರಗಜ್ಜ ದೈವಸ್ಥಾನ, ಸರಕಾರಿ ಶಾಲೆಗಳಿದ್ದು ವೈವಿಧ್ಯಮಯ ಪ್ರದೇಶವನ್ನು ಹೊಂದಿದೆ. ಮೊಟ್ಟೆತ್ತಡ್ಕ ಜಂಕ್ಷನ್ ನಲ್ಲಿರುವ ಬಸ್ಸು ತಂಗುದಾಣ ದುಸ್ಥಿತಿಯ ಸ್ಥಿತಿಯಲ್ಲಿದೆ. ದಿನದಿಂದ ದಿನಕ್ಕೆ ಆಟೋಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇರುವುದರಿಂದ ಆಟೋ ಚಾಲಕರ ಜೀವನ ನಿರ್ವಹಣೆ ಕೂಡ ಕಷ್ಟದ ಮಾತಾಗಿದೆ. ಆದ್ದರಿಂದ ಮೊಟ್ಟೆತ್ತಡ್ಕ ಜಂಕ್ಷನಿನಲ್ಲಿ ಶಾಶ್ವತ ಅಟೋ ರಿಕ್ಷಾ ನಿಲ್ದಾಣವನ್ನು ಸರಕಾರದ ವತಿಯಿಂದ ನಿರ್ಮಾಣ ಮಾಡಿಕೊಡಬೇಕಾಗಿ ಮೊಟ್ಟೆತ್ತಡ್ಕ ಅಟೋ ರಿಕ್ಷಾ ಚಾಲಕ-ಮಾಲಕರ ಸಂಘ ಒತ್ತಾಯಿಸುತ್ತಿದೆ.
ಶಾಸಕರಿಗೆ ಮನವಿ ಕೊಡುವ ಸಂದರ್ಭದಲ್ಲಿ ಮೊಟ್ಟೆತ್ತಡ್ಕ ಅಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಹಮೀದ್, ಕಾರ್ಯದರ್ಶಿ ಸಂತೋಷ್ ಓಂಕಾರ್, ಉಪಾಧ್ಯಕ್ಷರಾದ ದಿನೇಶ್, ಜಯರಾಮ, ಕೋಶಾಧಿಕಾರಿ ಚಿದಾನಂದ, ಲೋಹಿತ್ ಪುಟ್ಟ, ಯತೀಶ್, ರಂಜನ್, ಕಿರಣ್, ಅಮೀರ್, ಅನ್ಸಾಫ್, ವಸಂತ್ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here