‘ಗಿರೀಶ್ ನಂದನ್ ಓರ್ವ ಶಿಸ್ತುಬದ್ಧ ಅಧಿಕಾರಿ’-ಬೀಳ್ಕೊಡುಗೆ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

0

ಪುತ್ತೂರು:ಉಪವಿಭಾಗದ ಸಹಾಯಕ ಕಮಿಷನರ್ ಆಗಿದ್ದ ಗಿರೀಶ್‌ನಂದನ್ ಅವರು ತುಂಬಾ ಸಿಸ್ಟಮ್ಯಾಟಿಕ್ ಆಗಿರುವ, ಶಿಸ್ತುಬದ್ದವಾಗಿರುವ ಅಧಿಕಾರಿ.ನಮಗೆ ಆತುರ ಇದ್ದರೂ ಅದನ್ನು ಅವರು ಅನುಭವಿಯಾಗಿ ಸಿಸ್ಟಮ್ಯಾಟಿಕ್ ಆಗಿ ಎಲ್ಲವನ್ನೂ ಬ್ಯಾಲೆನ್ಸ್ ಮಾಡುತ್ತಿದ್ದರು.ಹಾಗಾಗಿ ಅವರಲ್ಲಿ ಸಿಸ್ಟಮ್ಯಾಟಿಕ್ ಆಗಿ ಕೆಲಸ ಮಾಡುವ ಮೆಚೂರಿಟಿ ಇದೆ ಎಂದು ದ.ಕ.ಜಿಲ್ಲಾಽಕಾರಿ ಮುಲ್ಲೈ ಮುಗಿಲನ್ ಅವರು ಹೇಳಿದರು.


ಪುತ್ತೂರು ಸಹಾಯಕ ಆಯುಕ್ತರಾಗಿದ್ದು ಮಂಗಳೂರು ಮಹಾನಗರ ಪಾಲಿಕೆಗೆ ವರ್ಗಾವಣೆಗೊಂಡ ಗಿರೀಶ್‌ನಂದನ್ ಅವರಿಗೆ ಪುತ್ತೂರು ಉಪವಿಭಾಗದ ಕಂದಾಯ ಇಲಾಖೆಯ ಅಽಕಾರಿಗಳು ಮತ್ತು ಸಿಬ್ಬಂದಿಗಳು ಜ.5ರಂದು ಇಲ್ಲಿನ ಬ್ರಹ್ಮಶ್ರೀ ಸಭಾಭವನಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಗಿರೀಶ್‌ನಂದನ್ ಅವರನ್ನು ಗೌರವಿಸಿ ಮಾತನಾಡಿದರು.ನಮ್ಮೊಂದಿಗೆ ಅವರು ಐದಾರು ತಿಂಗಳಷ್ಟೆ ಕೆಲಸ ಮಾಡಿದ್ದಾರೆ.ಮುಂದೆ ಅವರು ನಮ್ಮ ಜೊತೆ, ಅವರ ಜೊತೆ ನಾವು ಕೆಲಸ ಮಾಡುವ ಅವಕಾಶ ಕೂಡಿ ಬರಲಿ ಎಂದ ಅವರು ಬಹಳ ಸಿನ್ಸಿಯರ್ ಅಧಿಕಾರಿಯಾಗಿದ್ದ ಅವರು ತಮ್ಮ ಕುಟುಂಬವನ್ನು ಬಿಟ್ಟು ಪುತ್ತೂರಿನಲ್ಲೇ ಬಹಳ ಸಮಯ ಕರ್ತವ್ಯ ನಿರ್ವಹಿಸಿದ್ದಾರೆ.ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ 24 ಗಂಟೆಯೂ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸಿದ್ದಾರೆ.ಮುಂದೆ ಅವರು ಉನ್ನತ ಹುದ್ದೆಗೆ ಹೋಗುವ ಅವಕಾಶ ಸಿಗಲಿ ಎಂದರು.ಅದೇ ರೀತಿ ಪುತ್ತೂರಿಗೆ ಹೊಸದಾಗಿ ಬಂದಿರುವ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರಿಗೂ ಸ್ವಾಗತ ಬಯಸುತ್ತೇನೆ.ಅವರು ತುಂಬಾ ಆಕ್ಟೀವ್ ಆಫೀಸರ್ ಎಂದು ಹೇಳಿದ ಜಿಲ್ಲಾಧಿಕಾರಿಯವರು, ಮುಂದಿನ ಚುನಾವಣೆ ಸಂದರ್ಭದಲ್ಲಿ ಗಿರೀಶ್‌ನಂದನ್ ಅವರ ರೀತಿಯ ಶಿಸ್ತಿನಲ್ಲೇ ಎಲ್ಲಾ ಅಧಿಕಾರಿಗಳು ಸಹಕಾರ ನೀಡಬೇಕು.ಈ ನಿಟ್ಟಿನಲ್ಲಿ ಪುತ್ತೂರಿನ ನೆನಪು ಗಿರೀಶ್‌ನಂದನ್ ಅವರಿಗೆ ಸದಾ ಇರಲಿದೆ.ಅದೇ ರೀತಿ ಗಿರೀಶ್‌ನಂದನ್ ಅವರ ನೆನಪು ನಿಮ್ಮಲ್ಲಿಯೂ ಇರಲಿ ಎಂದರು.


ಸರಕಾರಿ ಕೆಲಸದಲ್ಲಿ ಆತುರಕ್ಕಿಂತ ತಾಳ್ಮೆ ಮುಖ್ಯ:
ನೂತನ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ಮಾತನಾಡಿ ನಾನು ಕರ್ತವ್ಯಕ್ಕೆ ಹಾಜರಾಗುವ ಸಂದರ್ಭ ಗಿರೀಶ್‌ನಂದನ್ ಅವರ ಜೊತೆ ಮಾತನಾಡಲು ನನಗೆ ಜಾಸ್ತಿ ಸಮಯ ಸಿಗಲಿಲ್ಲ.ಆದರೆ ಸಿಕ್ಕಿದ ಸಮಯದಲ್ಲಿ ನನಗೆ ಅವರು ಗುಣಾತ್ಮಕ ಚಿಂತನೆ ನೀಡಿದರು.ಉಪವಿಭಾಗದ ಬೇರೆ ಬೇರೆ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.ಹಾಗಾಗಿ ಒಂದು ವಾರದಲ್ಲಿ ನಾನು ನೋಡಿದಂತೆ ಪುತ್ತೂರು ಕಚೇರಿಯ ಶಿಸ್ತನ್ನು ಉತ್ತಮ ರೀತಿಯಲ್ಲಿ ಕಂಡಿದ್ದೇನೆ.ಈ ರೀತಿಯ ಶಿಸ್ತು ನಮಗೆ ಮುಂದೆಯೂ ಉತ್ತಮವಾಗಿ ಇರಬೇಕು.ಇದಕ್ಕೆ ಕಾರಣ ಗಿರೀಶ್‌ನಂದನ್ ಅವರು ಎಂದರಲ್ಲದೆ,ಗಿರೀಶ್‌ನಂದನ್ ಅವರಲ್ಲಿ ತುಂಬಾ ತಾಳ್ಮೆ ಇದೆ.ಅದು ಸರಕಾರಿ ಕೆಲಸದಲ್ಲಿ ಬಹಳ ಮುಖ್ಯ.ಸರಕಾರಿ ಕೆಲಸದಲ್ಲಿ ಆತುರಕ್ಕಿಂತ ತಾಳ್ಮೆಯಿಂದ ಸರಿಯಾಗಿ ಕೆಲಸ ಮಾಡಬೇಕು.ಈ ನಿಟ್ಟಿನಲ್ಲಿ ಗಿರೀಶ್‌ನಂದನ್ ಅವರು ಆರಂಭಿಸಿದ ಒಳ್ಳೆಯ ವಿಚಾರಗಳಿಂದ ಹಿಂದೆ ಹೋಗದೆ ಮುಂದೆ ಹೋಗಬೇಕು ಎಂದರು.


ರಕ್ಷಣಾ ಇಲಾಖೆಗಿಂತಲೂ ಚುನಾವಣಾ ನಿರ್ವಹಣೆಯೇ ಕಷ್ಟದ ಕೆಲಸ:
ಸನ್ಮಾನ ಸ್ವೀಕರಿಸಿದ ಗಿರೀಶ್‌ನಂದನ್ ಅವರು ಮಾತನಾಡಿ ನಾನು ದಕ್ಷಿಣ ಕನ್ನಡಕ್ಕೆ ಬರುವಾಗ ಈ ಸ್ಥಳ ವಿಭಿನ್ನವಾಗಿತ್ತು.ಆದರೆ ಬಹಳ ಚೆನ್ನಾಗಿ ಕೆಲಸ ಮಾಡಲು ಅವಕಾಶವು ಸಿಕ್ಕಿತ್ತು.ಎಲ್ಲಾ ಫೀಲ್ಡ್‌ನಲ್ಲೂ ವರ್ಕ್ ಮಾಡಿದ್ದೇವೆ.ಕಾನೂನು ವಿಚಾರ,ಪ್ರಾಕೃತಿಕ ವಿಕೋಪ, ಚುನಾವಣೆ ಸಹಿತ ಹಲವು ಕೆಲಸ ಮಾಡಿದ್ದೇವೆ.ಇವೆಲ್ಲ ಮಾಡಲು ನಾವೆಲ್ಲ ಅಪ್‌ಡೇಟ್ ಆಗುತ್ತಾ ಇರಬೇಕು.ಅಪ್‌ಡೇಟ್ ಆಗುತ್ತಿದ್ದಾಗ ನಮ್ಮ ಕೆಲಸಕ್ಕೆ ತೊಂದರೆ ಆಗುವುದಿಲ್ಲ.ನೇವಿಯಲ್ಲಿ 15 ವರ್ಷ, ಕಾರ್ಪೋರೇಟ್ ಸೆಕ್ಟರ್‌ನಲ್ಲಿ 9 ವರ್ಷ, ಕಂದಾಯ ವಿಭಾಗದಲ್ಲಿ ಐದಾರು ವರ್ಷ ಸೇವೆ ಮಾಡಿದ್ದೇವೆ.ಇವೆಲ್ಲ ಸರ್ವಿಸ್‌ನಲ್ಲಿ ರಕ್ಷಣಾ ಇಲಾಖೆಯ ಕೆಲಸ ತುಂಬಾ ಕಷ್ಟದ ಕೆಲಸ.ಇದಕ್ಕಿಂತಲೂ ತುಂಬಾ ಕಷ್ಟದ ಕೆಲಸ ಚುನಾವಣಾ ಕರ್ತವ್ಯ ನಿರ್ವಹಣಾ ಕೆಲಸ.ಯಾಕೆಂದರೆ ರಕ್ಷಣಾ ವಿಭಾಗದಲ್ಲೂ ನಮಗೆ ಸ್ವಲ್ಪ ವಿರಾಮ ಇರುತ್ತದೆ.ಆದರೆ ಚುನಾವಣಾ ನಿರ್ವಹಣೆಯಲ್ಲಿ ಒತ್ತಡ ಹೆಚ್ಚಿರುತ್ತದೆ ಎಂದರು.ನಾನು ಹೊಳೆನರಸಿಪುರ, ಪುತ್ತೂರಿನಲ್ಲಿ ಕಳೆದ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ.ಪುತ್ತೂರು ಚುನಾವಣೆಯಲ್ಲಿ ಕಂದಾಯ ಇಲಾಖೆ, ಸರ್ವೆ ಇಲಾಖೆ, ತಹಶೀಲ್ದಾರ್‌ಗಳು ಸಹಕಾರ ನೀಡಿದ್ದಾರೆ.ಇಲ್ಲಿ ಲೀಡರ್‌ಶಿಪ್ ಮುಖ್ಯ.ಅದನ್ನು ನಾನು ರಕ್ಷಣಾ ಇಲಾಖೆಯಿಂದ ಪಡೆದಿದ್ದರಿಂದ ಇಲ್ಲಿ ನನ್ನ ಕರ್ತವ್ಯ ಸುಲಭವಾಗಿದೆ.ಚುನಾವಣೆ ನಿರ್ವಹಣೆಯಲ್ಲಿ ಬೆಳ್ತಂಗಡಿ ಪ್ರಥಮ ಸ್ಥಾನ ಪಡೆದಿತ್ತು.ನಮ್ಮೆಲ್ಲ ದಕ್ಷಿಣ ಕನ್ನಡದ ತಾಲೂಕುಗಳು ಟಾಪ್ 20ರಲ್ಲೇ ಇದೆ. ಇದನ್ನು ಮುಂದುವರಿಸಿ. ಟಾಪ್ 20ರಲ್ಲಿ ಇದ್ದರೆ ನಿಮ್ಮನ್ನು ಯಾರೂ ಕೇಳುವುದಿಲ್ಲ ಎಂದ ಅವರು, ಇವತ್ತು ನಿಮ್ಮ ಸನ್ಮಾನ ನನಗೆ ಸಂತೋಷ ಕೊಟ್ಟಿದೆ.ನೂತನವಾಗಿ ಬಂದಿರುವ ಎ.ಸಿ ಹೈಲಿ ಕ್ವಾಲಿಫೈಡ್ ಆಗಿದ್ದಾರೆ.ಅವರಿಗೆ ಕೆಲಸ ಮಾಡುವ ಆಸಕ್ತಿ ಇದೆ.ತಂತ್ರಜ್ಞಾನದಲ್ಲಿ ಅವರು ಬಹಳ ಮೇಧಾವಿಯಾಗಿದ್ದಾರೆ.ಅದನ್ನು ಎಲ್ಲರೂ ಬಳಸಿಕೊಳ್ಳಿ.ರೆವೆನ್ಯೂ ಇಲಾಖೆಯಲ್ಲಿ ಸ್ವಲ್ಪ ನೋಡಿ ಕೆಲಸ ಮಾಡಿ.ನಮ್ಮ ನಿರ್ಧಾರ ಸರಿಯಾಗಿರಬೇಕು ಎಂದು ಹೇಳಿದರು.


ಅಧಿಕಾರಿಗಳ, ಸಿಬ್ಬಂದಿಗಳ ಅನಿಸಿಕೆಗಳು: ಸಭೆಯಲ್ಲಿ ಉಪವಿಭಾಗ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅನಿಸಿಕೆ ವ್ಯಕ್ತಪಡಿಸಿದರು.ತಾಳ್ಮೆ, ನಿಷ್ಠೆ. ಪ್ರಾಮಾಣಿಕತೆ ನಮಗೆಲ್ಲರಿಗೂ ಮಾದರಿಯಾಗಿದೆ.ನೌಕರರ ಪರವಾದ ಅಧಿಕಾರಿಯಾಗಿದ್ದರು.ಇಲಾಖೆಯ ನೌಕರರನ್ನು ಬಹಳ ಪ್ರೀತಿಯಿಂದ ಕಾಳಜಿಯಿಂದ ನಮ್ಮನ್ನು ನೋಡಿಕೊಂಡಿದ್ದಾರೆ.ಎಂತಹ ಸನ್ನಿವೇಶದಲ್ಲಿಯೂ ಒತ್ತಡವನ್ನು ಬಹಳ ಚಾಕಚಕ್ಯತೆಯಿಂದ ನಿಭಾಯಿಸುತ್ತಿದ್ದರು.ಅವರ ಮೂಲಕ ಇಲಾಖೆಯ ಜ್ಞಾನ ನಾವು ಪಡೆದಿದ್ದೇವೆ, ಎಂದು ಗಿರೀಶ್‌ನಂದನ್ ಅವರ ಕುರಿತು ಅಽಕಾರಿ,ಸಿಬ್ಬಂದಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾಮ ಆಡಳಿತಾಧಿಕಾರಿಗಳು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ|ನಿಂಗಯ್ಯ, ಪುತ್ತೂರು ತಹಸೀಲ್ದಾರ್ ಶಿವಶಂಕರ್, ಬೆಳ್ತಂಗಡಿಯ ತಹಸೀಲ್ದಾರ್ ಪೃಥ್ವಿ ಸಾನಿಕಂ ಮಾತನಾಡಿದರು.ಕಡಬ ತಾಲೂಕು ತಹಸೀಲ್ದಾರ್ ಪ್ರಭಾಕರ ಖಜೂರೆ, ಪುತ್ತೂರು ಭೂದಾಖಲೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸರ್ವೆ ಇಲಾಖೆಯ ಪ್ರಮೋದ್ ಪ್ರಾರ್ಥಿಸಿದರು.ಸುಳ್ಯ ತಹಸೀಲ್ದಾರ್ ಮಂಜುನಾಥ್ ಸ್ವಾಗತಿಸಿ, ಉಪತಹಸೀಲ್ದಾರ್ ಸುಲೋಚನಾ ಅವರು ತಾನು ಬರೆದ ಕೃತಿಯನ್ನು ಗಿರೀಶ್‌ನಂದನ್ ಅವರಿಗೆ ಹಸ್ತಾಂತರಿಸಿ ವಂದಿಸಿದರು.ಕಂದಾಯ ನಿರೀಕ್ಷಕ ಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.

ಮಾಧ್ಯಮ ಮಿತ್ರರು ನನಗೆ ಬಹಳ ಸಹಕಾರ ನೀಡಿದ್ದಾರೆ.ಮಾಧ್ಯಮ ಮಿತ್ರರಿಂದ ನನಗೆ ಯಾವುದೇ ಒಂದು ಇಶ್ಯೂ ಆಗಿಲ್ಲ.ಅವರು ಕೆಲವೊಂದು ಪ್ರಶ್ನೆಗಳನ್ನು ಹಾಕುತ್ತಿದ್ದರು.ಅದಕ್ಕೆ ತಕ್ಷಣ ನಾವು ಸ್ಪಂಧನೆ ಕೊಡುತ್ತಿದ್ದೆವು.ಅವರಿಗೆ ಬೇಕಾಗಿರುವುದು ಕೂಡಾ ಅಷ್ಟೆ.ನಮ್ಮೊಳಗೆ ಕಮ್ಯುನಿಕೇಶನ್ ಗ್ಯಾಪ್ ಆಗಬಾರದು.ಅದಕ್ಕೆ ಅವಕಾಶ ಕೊಡಬಾರದು.ಪೂರ್ಣ ಸಹಕಾರ ನೀಡಿದ್ದಕ್ಕೆ ನಾನು ಮಾಧ್ಯಮದವರಿಗೆ ಆಬಾರಿಯಾಗಿದ್ದೇನೆ-
ಗಿರೀಶ್ ನಂದನ್

ಆಡಳಿತವು ಒಂದು ಚೈನ್‌ಲಿಂಕ್ ಇದ್ದಂತೆ.ಗಿರೀಶ್‌ನಂದನ್ ಅವರಲ್ಲಿ ಮುಕ್ತಾಯ ಆಗುವಂಥದ್ದು ಯಾವುದೂ ಇರುವುದಿಲ್ಲ.ನಾವೇ ಪ್ರಾರಂಭಿಸಿ ಅದರ ಫಲ ಪಡೆಯುವುದು ಆಡಳಿತ ವಿಚಾರದಲ್ಲಿ ಸಿಗುವುದಿಲ್ಲ.ಇದೊಂದು ಚೈನ್ ಲಿಂಕ್‌ನಂತೆ.ಒಬ್ಬ ಅಧಿಕಾರಿ ಯಾವ ಪಾಯಿಂಟ್‌ನಲ್ಲಿ ನಿಲ್ಲಿಸಿದ್ದಾರೋ ಅಲ್ಲಿಂದ ಮುಂದಕ್ಕೆ ಹೋಗಬೇಕು.ಗಿರೀಶ್‌ನಂದನ್ ಅವರು ಏನು ಶಿಸ್ತನ್ನು ತಂದಿದ್ದಾರೋ ಅದನ್ನು ಇಲಾಖೆಯ ಸಿಬ್ಬಂದಿಗಳು ಮುಂದುವರಿಸಬೇಕು ಹೊರತು ಸ್ಪ್ರಿಂಗ್‌ನಂತೆ ಆಗಬಾರದು.ಇಲ್ಲಿ ಆಗಿರುವ ಬದಲಾವಣೆ ಗಿರೀಶ್ ಅವರ ಕೊಡುಗೆಯಾಗಿದೆ.ಅವರ ಶಿಸ್ತನ್ನು ಮುಂದುವರಿಸುವುದು ಅವರಿಗೆ ಕೃತಜ್ಞತೆ ಸಲ್ಲಿಸಿದಂತೆ-
ಮುಲ್ಲೈಮುಗಿನಲ್, ದ.ಕ.ಜಿಲ್ಲಾಧಿಕಾರಿ

LEAVE A REPLY

Please enter your comment!
Please enter your name here