ಪುತ್ತೂರು: ಯಂಗ್ ಸ್ಟಾರ್ ಬ್ಯಾಡ್ಮಿಂಟನ್ ಅಕಾಡೆಮಿ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕು ಮಟ್ಟದ ಅಂಡರ್ 9 ರಿಂದ ಅಂಡರ್ 17 ವಿಭಾಗದ ಬಾಲಕ-ಬಾಲಕಿಯರ ಎರಡು ದಿನಗಳ ಸಿಂಗಲ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಉದ್ಘಾಟನೆಯು ಜ.6 ರಂದು ದರ್ಬೆ ಆಫೀಸರ್ಸ್ ಕ್ಲಬ್ ನಲ್ಲಿ ಬೆಳಿಗ್ಗೆ ಜರಗಿತು.
ಯಂಗ್ ಸ್ಟಾರ್ ಬ್ಯಾಡ್ಮಿಂಟನ್ ಅಕಾಡೆಮಿ ಅಧ್ಯಕ್ಷ ವೆಂಕಟ್ರಾಜ್ ಪಿ.ಜಿರವರು ಪಂದ್ಯಾವಳಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಈ ಪಂದ್ಯಾಕೂಟವು ಎರಡು ದಿನಗಳ ಕಾಲ ನಡೆಯಲಿದ್ದು, ಈ ಪಂದ್ಯಾವಳಿಯು ಮಕ್ಕಳ ಪ್ರತಿಭೆಯನ್ನು ತೋರ್ಪಡಿಸಲು ಕಲ್ಪಿಸುವ ವೇದಿಕೆಯಾಗಿದೆ. ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.
ಯಂಗ್ ಸ್ಟಾರ್ ಬ್ಯಾಡ್ಮಿಂಟನ್ ಅಕಾಡೆಮಿಯ ಉಪಾಧ್ಯಕ್ಷ ಬಿ.ಬಾಲಕೃಷ್ಣ ಕಣ್ಣಾರಾಯ, ಕಾರ್ಯದರ್ಶಿ ಪಿ.ಜಿ ಪಾಪನ್ ಕುಮಾರ್, ಸಮಿತಿ ಸದಸ್ಯರಾದ ಶ್ಯಾಮ್ ಪ್ರಸಾದ್, ಹೇಮಚಂದ್ರ, ವತ್ಸಲಾ ರಂಜಿತ್, ಸ್ವಾತಿ ಶ್ಯಾಮ್, ಅಶ್ವಿನಿ ರಾಜೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಶ್ಯಾಮಲಾ ಕೆ.ಜೆ ಸ್ವಾಗತಿಸಿ, ಕೋಶಾಧಿಕಾರಿ ಪ್ರೇಮಲತಾ ಕೆ ವಂದಿಸಿದರು.
10 ವಿಭಾಗ..149 ಸ್ಪರ್ಧಿಗಳು…
ಎರಡು ದಿನಗಳ ಈ ಕ್ರೀಡಾಕೂಟದಲ್ಲಿ ಅಂಡರ್ 9, ಅಂಡರ್ 11, ಅಂಡರ್ 13, ಅಂಡರ್ 15, ಅಂಡರ್ 17, ಅಂಡರ್ 19 ವಯೋಮಿತಿಯ ಬಾಲಕ-ಬಾಲಕಿಯರ 10 ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿದ್ದು, ಒಟ್ಟು 149 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು.