ಜ.13: ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ

0

ಕಾಂಗ್ರೆಸ್, ಬಿಜೆಪಿ ಬೆಂಬಲಿತ, ಪಕ್ಷೇತರ ಅಭ್ಯರ್ಥಿಗಳ ನಡುವೆ ಸ್ಪರ್ಧೆ
13 ಸ್ಥಾನಗಳಿಗೆ 32 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

ಪುತ್ತೂರು: ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘದ ಮುಂದಿನ ಐದು ವರ್ಷದ ಅವಧಿಗೆ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ಜ.13ರಂದು ಚುನಾವಣಾ ಘೋಷಣೆಯಾಗಿದ್ದು ಒಟ್ಟು 32 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಸಾಮಾನ್ಯ ಮೀಸಲಾತಿಯ ಏಳು ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಆಲ್ಬರ್ಟ್ ಡಿ.ಸೋಜ ಯಂ., ಬಿ.ಕುಂಞಣ್ಣ ರೈ, ಬಾಲಕೃಷ್ಣ ರೈ ಬಿ., ಬಾಲಕೃಷ್ಣ ಶೆಟ್ಟಿ ಬಿ., ಬಾಲಕೃಷ್ಣ ಎಚ್., ರಾಜೇಂದ್ರ ರೈ ಬಿ., ವೆಂಕಪ್ಪ ಗೌಡ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ತಾರಾನಾಥ ಆಳ್ವ, ಬಾಲಚಂದ್ರ ಕೆ., ಜನಾರ್ಧನ ಭಟ್, ಪ್ರೀತಂ ಪೂಂಜ, ಪ್ರವೀಣ ಪ್ರಭು ಡಿ., ಜಯರಾಮ ನಾಯ್ಕ ಕೆ., ವಿಘ್ನೇಶ್ವರ ಎನ್., ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಖಲಂದರ್ ಶಾಫಿ ಎಂ., ರೋಶನ್ ಟೆಲ್ಲೀಸ್, ಹರೀಶ್ ಪೂಜಾರಿರವರು ನಾಮಪತ್ರ ಸಲ್ಲಿಸಿದ್ದು ಅಂತಿಮ ಕಣದಲ್ಲಿದ್ದಾರೆ.

ಮಹಿಳಾ ಮೀಸಲಾತಿಯ 2 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಅನಿತಾ ಡಿಸೋಜ, ಪುಷ್ಪ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಶ್ರೀಲತಾ ಬಿ., ಹರಿಣಾಕ್ಷಿ ಪಿ. ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ನಳಿನಿ ಸುವರ್ಣ ಡಿ., ಸರೋಜಿನಿರವರು ನಾಮಪತ್ರ ಸಲ್ಲಿಸಿದ್ದು ಅಂತಿಮ ಕಣದಲ್ಲಿದ್ದಾರೆ. ಹಿಂದುಳಿದ ವರ್ಗ ಎ ಮೀಸಲಾತಿಯ 2 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಹಮ್ಮದ್ ಸಿರಾಜ್ ಎಂ., ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ರದಯಾನಂದ ಬಿ.ವರು ಅಂತಿಮ ಕಣದಲ್ಲಿದ್ದಾರೆ. ಹಿಂದುಳಿದ ವರ್ಗ ಬಿ ಮೀಸಲಾತಿಯ 2 ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕ್ಸೇವಿಯರ್ ಡಿ.ಸೋಜ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಎಸ್. ಅಂತಿಮ ಕಣದಲ್ಲಿದ್ದಾರೆ. ಪ.ಜಾತಿ ಮೀಸಲಾತಿಯ 2 ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಯನ ಎ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ರಾಧಾಕೃಷ್ಣರವರು ಅಂತಿಮ ಕಣದಲ್ಲಿದ್ದಾರೆ. ಪ.ಪಂಗಡ ಮೀಸಲಾತಿಯ 2 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಗೋವಿಂದ ನಾಯ್ಕ ಅಜೇರು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚಂದಪ್ಪ ನಾಯ್ಕ ಕೆ.ಪಿ. ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ವೇದಕೃಷ್ಣ ಕೆ.ರವರು ಅಂತಿಮ ಕಣದಲ್ಲಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಎನ್.ಜೆ.ಗೋಪಾಲ್ ತಿಳಿಸಿದ್ದಾರೆ.

ಪರಿಯಾಲ್ತಡ್ಕ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಮತದಾನ
ಜ.13ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಪುಣಚ ಪರಿಯಾಲ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ನಡೆಯಲಿದೆ. ಮತದಾನ ಬಳಿಕ ಮತ ಎಣಿಕೆ ನಡೆದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.

LEAVE A REPLY

Please enter your comment!
Please enter your name here