ಸಮಾಜ ಸೇವೆಯನ್ನು ಶ್ಲಾಘಿಸಿದ ಶಾಸಕ ಅಶೋಕ್ ಕುಮಾರ್ ರೈ
ನಿಡ್ಪಳ್ಳಿ;ಕಕ್ಕೂರು ವಿನಾಯಕ ನಗರ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ ನೂತನ ಭಜನಾ ಮಂದಿರ ನಿರ್ಮಾಣ ಕಾರ್ಯದಲ್ಲಿ ಇರ್ದೆ ಬೆಟ್ಟಂಪಾಡಿ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ಭಾಗವಹಿಸಿ ಜ.7 ರಂದು ಶ್ರಮದಾನ ಮಾಡಿದರು.
ಈ ಸಂದರ್ಭದಲ್ಲಿ ಭೇಟಿ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಇವರ ಸೇವೆಯನ್ನು ಗುರುತಿಸಿ ಉತ್ತಮ ಸೇವೆಯನ್ನು ನೀವು ನೀಡುತ್ತಿದ್ದೀರಿ ಎಂದು ಶ್ಲಾಘಿಸಿದ ಶಾಸಕರು ಮುಂದೆಯೂ ನಿಮ್ಮ ಸಮಾಜ ಸೇವೆ ಮುಂದುವರಿಯಲಿ ಎಂದು ಹೇಳಿ ಶುಭ ಹಾರೈಸಿದರು. ಘಟಕದ ಸಂಯೋಜಕಿ ಪದ್ಮಾವತಿ. ಡಿ ಮತ್ತು ಅಧ್ಯಕ್ಷ ಸುಬ್ರಹ್ಮಣ್ಯ ಇವರಿಗೆ ತಂಡದ ಪರವಾಗಿ ಶಾಲು ಹಾಕಿ ಸ್ಮರಣಿಕೆ ನೀಡಿ ಅಭಿನಂದಿಸಿದರು.ಭಜನಾ ಮಂದಿರದ ಅಧ್ಯಕ್ಷ ಕೃಷ್ಣಪ್ಪ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಘಟಕದ ಸದಸ್ಯರಾದ ಗೀತಾ, ಹೇಮಾವತಿ.ಸಿ.ಎಚ್, ಶ್ರೀಮತಿ, ದಿನೇಶ, ಕೃಷ್ಣ, ಹರಿಪ್ರಸಾದ್,ಮನೋಜ್, ಜನಾರ್ದನ, ಅಶೋಕ,ಆನಂದ, ರವಿ ಕಟೀಲ್ತಡ್ಕ ಮೊದಲಾದವರು ಪಾಲ್ಗೊಂಡರು.