ಪುತ್ತೂರು: ಸಮಾಜದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಉದಯವಾಗಲು ಬೇಕಾದ ಸಂಪನ್ಮೂಲಗಳನ್ನು ನಾವು ತಯಾರುಗೊಳಿಸಬೇಕು. ಪ್ರತಿಭೆಗಳನ್ನು ಪೋಷಿಸಿ ಬೆಳೆಸುವುದು ನಮ್ಮ ಕರ್ತವ್ಯ. ಈ ಮೂಲಕ ಸಮಗ್ರವಾದ ರಾಷ್ಟ ನಿರ್ಮಾಣಕ್ಕೆ ನಾವು ಮುಂದಾಗಬೇಕು ಎಂದು ಕುಂಬ್ರ ಮರ್ಕಝುಲ್ ಹುದಾ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಡಾ.ಎಂಎಸ್ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಹೇಳಿದರು. ಮರ್ಕಝುಲ್ ಹುದಾ ಪದವಿಪೂರ್ವ ಕಾಲೇಜಿನ ವತಿಯಿಂದ ನಡೆದ ಟ್ಯಾಲೆಂಟ್ ಅವಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುತ್ತೂರು-ಪಾಣಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಎಂಎಚ್ಕೆ ಸೌದಿಅರೇಬಿಯಾ ರಾಷ್ಟ್ರೀಯ ಸಮಿತಿಯ ಪ್ರ.ಕಾರ್ಯದರ್ಶಿ ನೌಷಾದ್ ಪೋಳ್ಯ, ಮರ್ಕಝುಲ್ ಹುದಾ ಒಮಾನ್ ಸಮಿತಿಯ ಆರ್ಗನೈಸರ್ ಉಬೈದುಲ್ಲಾ ಸಖಾಫಿ, ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಮೊದಲಾದವರು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ, ಹಸೈನಾರ್ ಅಮಾನಿ ಅಜ್ಜಾವರ, ಜಲೀಲ್ ಸಖಾಫಿ ಜಾಲ್ಸೂರು, ಯೂಸುಫ್ ಹಾಜಿ ಕೈಕಾರ, ಯೂಸುಪ್ ಮೈದಾನಿಮೂಲೆ, ಶಂಸುದ್ದೀನ್ ಬೈರಿಕಟ್ಟೆ, ಅನ್ವರ್ ಹುಸೇನ್ ಗೂಡಿನಬಳಿ, ಅಬ್ದುಲ್ ಹಮೀದ್ ಸುಳ್ಯ, ಪದವಿ ಪ್ರಾಂಶುಪಾಲ ಮನ್ಸೂರ್ ಕಡಬ, ಮರ್ಕಝ್ ಮೆನೇಜರ್ ಉಮರ್ ಅಮ್ಜದಿ, ಪದವಿಪೂರ್ವ ವಿಭಾಗದ ಪ್ರಾಂಶುಪಾಲ ಸಂಧ್ಯಾ ಪಿ ಶೆಟ್ಟಿ ಉಪಸ್ಥಿತರಿದ್ದರು.
ಶರೀಅತ್ ವಿಭಾಗದ ಪ್ರಾಂಶುಪಾಲರಾದ ವಳವೂರು ಮುಹಮ್ಮದ್ ಸಅದಿ ದುವಾ ನೆರವೇರಿಸಿದರು.
2022-23ನೇ ಸಾಲಿನ ಸುಮಾರು 79 ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಟ್ಯಾಲೆಂಟ್ ಅವಾರ್ಡ್ ವಿತರಿಸಲಾಯಿತು.
ಟ್ಯಾಲೆಂಟ್ ಅವಾರ್ಡ್ ಪಡೆದವರ ವಿವರ:
ಕಲಾ ವಿಭಾಗದಲ್ಲಿ ಅಸೀದ, ಆಯಿಶತ್ ಅರ್ಶೀದ, ಫಾತಿಮತ್ ಅಫೀಫ, ಫಾತಿಮತ್ ಶಾಹಿದಾ, ಫಾತಿಮತ್ ತಸ್ಲೀಮ,ಫಾತಿಮತ್ ಫರ್ಝಾನ, ಫಿಝಾ, ಫಾತಿಮತ್ ಅಫ್ರತ್, ಹಲೀಮತ್ ಶಂಸಿಯಾ, ಖದೀಜತುಲ್ ಆತಿಫ, ಮರಿಯಂ ಮಹ್ಫೂಲತ್ ತಹಾನಿ, ತನ್ವೀರ, ಝಖೀಯ, ವಾಣಿಜ್ಯ ವಿಭಾಗದಲ್ಲಿ ಮರಿಯಂ, ಅಫ್ಸತುಲ್ ಇರ್ಫಾನ, ಅಲ್ ಶಿಫಾ, ಆಯಿಶಾ, ಆಯಿಶಾ ಇಶ್ರತ್, ಆಯಿಶತ್ ಫಾಯಿಝ, ಆಯಿಶತ್ ಸುಹೈಲ, ಆಯಿಷತ್ ತಬ್ಶೀರ, ಆಯಿಷತ್ ಅಸೀಲ, ಆಯಿಷತ್ ರಂಝೀನ, ಆಯಿಷತ್ ಅಫೀಮ, ಆಯಿಷತ್ ಅಫ್ರ, ಫಾತಿಮತ್ ಹನೀನ, ಫಾತಿಮತ್ ಇರ್ಫಾನ, ಫಾತಿಮತ್ ಮುಸೀಸ, ಫಾತಿಮತ್ ನಜ್ಲ, ಫಾತಿಮತ್ ನಿಸ್ಮ,ಫಾತಿಮತ್ ರಝೀನ, ಫಾತಿಮತ್ ರುಬೀನ, ಫಾರಿಮತ್ ರುಕ್ಷಾನ, ಫಾತಿಮತ್ ಸಮ್ನ, ಫಾತಿಮತ್ ಸನ, ಫಾತಿಮತ್ ಸಹ್ಲ, ಫಾತಿಮತ್ ಶಮ್ನ, ಫಾತಿಮತ್ ಸುಫೈರತ್, ಫಾತಿಮತ್ ಮುಫೀದ, ಫಾತಿಮ ಶಮೀಮ, ಇಸ್ಮತ್, ನಾಝೀಮ ಫರ್ಹತ್, ರಹ್ಮತ್, ರಸೀನ ಸಂಶಾದ, ರಝಾನ ತಝ್ನೀಂ, ರಿಝ್ವಾನ, ರುಫೈದ, ಶಹನಾಝ್, ಶೈನಾಜ್, ಸಲ್ಮತ್ ಶಾಕಿರ, ಸಾನಿಯಾ ಬೇಗಂ, ಶಾಹಿನ ಫಾತಿಮ, ಉಮ್ಮುನೂಹ ಪಡೆದುಕೊಂಡರು.